Author: davangerevijaya.com

ದಾವಣಗೆರೆ : ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮಹಿಳಾ ಬಾಂಧವರು ಆಗಮಿಸಬೇಕೆಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕಾರ್ಯಕಾರಿ ನಿರ್ದೇಶಕಿ ಎಂ.ಜಿ ಶಶಿಕಲಾಮೂರ್ತಿ ಕರೆನೀಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಷ್ಟ್ರದ ಹಾಗೂ ರಾಜ್ಯದ ಎಲ್ಲಾ ಘಟಕಗಳಿಂದ ಸಮಾಜ ಬಾಂಧವರು ಆಗಮಿಸಿ ಒಗ್ಗಟ್ಟಿನಿಂದ ನಮ್ಮ ಮುಂದಿನ ಭವಿಷ್ಯದ ಭದ್ರತೆಗೆ ಹಾಗೂ ಭವಿಷ್ಯ ಸಾಕಾರಗೊಳ್ಳಲು ಎಲ್ಲರೂ ಕೈಜೋಡಿಸಲು ಅಧಿವೇಶನದಲ್ಲಿ ಭಾಗವಹಿಸ ಬೇಕು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ ನೇ ಅಧಿವೇಶನ ದಾವಣಗೆರೆಯಲ್ಲಿ ನಡೆಯುತ್ತಿದ್ದು ಈ ಮಹಾಅಧಿವೇಶನದಲ್ಲಿ ಸಮಸ್ತ ಕುಲಬಾಂಧವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು ಇದೊಂದು ಮಹತ್ತರವಾದ ಐತಿಹಾಸಿಕ ಅಧಿವೇಶನವಾಗಿದೆ.ಈ ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಅದರಲ್ಲೂ ಮಹಿಳಾ ಮತ್ತು ಯುವ ಅಧಿವೇಶನ ಮಹತ್ವದ್ದಾಗಿದೆ ಎಂದರು. ಮಹಿಳಾ ಹಾಗೂ ಯುವ ಅಧಿವೇಶನ ಸಾಕಷ್ಟು ಅರಿವು ಮೂಡಿಸಲಿದೆ ಎಂಬುದು ಮಹಿಳೆಯಾಗಿ…

Read More

ದಾವಣಗೆರೆ: ಡಿ.23, 24 ರಂದು ನಡೆಯಲಿರುವ ವೀರಶೈವ ಲಿಂಗಾಯತ ಮಹಾಸಭಾ ಅಧೀವೇಶನದಲ್ಲಿ ಡಿ.23 ರಂದು ಬೆಳಗ್ಗೆ 9.30 ಕ್ಕೆ ಮಹಾಸಭೆ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು ಎಂದು ಅಖಿಲ ಭಾರತ ವೀರೇಶ್ವರ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಹಾಗೂ 24 ನೇ ಮಹಾ ಅಧಿವೇಶನದ ಉಸ್ತುವಾರಿ ಪದಾಧಿಕಾರಿಗಳಾದ‌ ಹೆಚ್.ಎಂ ರೇಣುಕಾ ಪ್ರಸನ್ನ ಮಾಹಿತಿ ನೀಡಿದರು. ಮಾಧ್ಯಮದವರೊಂದಿಗೆ ಮಹಾಸಭೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ಮಾತನಾಡಿದ ಅವರು ಡಿ.23 ರಂದು ಬೆಳಗ್ಗೆ 10.35 ಕ್ಕೆ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಶ್ರೀ ಅಭಿನವ ರೇಣುಕಾಮಂದಿರದಿಂದ ಮೆರವಣಿಗೆ  ಪ್ರಾರಂಭವಾಗಿ ಜಯದೇವವೃತ್ತದ ಮಾರ್ಗವಾಗಿ ಎಂಬಿಎ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗಿರುವ ಸಿರಿಗೆರೆ ಲಿಂಗೈಕ್ಯ  ಶ್ರೀ ಶಿವಕುಮಾರ ಮಹಾಮಂಟಪಕ್ಕೆ ಕರೆತರಲಾಗುವುದು ಎಂದರು. ಈ ಸಂದರ್ಭದಲ್ಲಿ ನಾಡಿನಾದ್ಯಂತದಿಂದ ಸುಮಾರು 50 ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ.ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸುವ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಮೆರವಣಿಗೆಯು ಮಹಾಮಂಟಕ್ಕೆ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.ನಂತರ…

Read More

ಯಾವುದಾದರೂ ಒಂದು ದೊಡ್ಡ ಸಮಾವೇಶ ನಡೆಯಬೇಕಾದರೆ ಅದಕ್ಕೆ ಎಲ್ಲರನ್ನೂ ಒಟ್ಟುಗೂಡಿಸುವ ನಾಯಕ ಬೇಕಿದೆ. ಅಂತಹ ನಾಯಕನನ್ನು ದಾವಣಗೆರೆಯಲ್ಲಿ ನಡೆಯಲಿರುವ 24 ನೇ  ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ‌. ಹಾಗಾದ್ರೆ ಅವರ್ಯಾರು ಎಂಬ ಕುತುಹೂಲ ಇದ್ದೇ ಇರುತ್ತದೆ…ಹಾಗಾದ್ರೆ ಈ ಸುದ್ದಿ ತಪ್ಪದೇ ಓದಿ.  ನಂದೀಶ್ ಭದ್ರಾವತಿ, ದಾವಣಗೆರೆ ದಾವಣಗೆರೆಯಲ್ಲಿ ನಡೆಯಲಿರುವ 24 ನೇ  ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದ ಸಾರಥಿ ದೇವರಮನೆ ಶಿವಕುಮಾರ್ ಆಗಿದ್ದು, ಇವರ ನೇತೃತ್ವದಲ್ಲಿ ದಾವಣಗೆರೆ ಸಜ್ಜುಗೊಂಡಿದೆ. ಸದ್ಯ ದೇವರ ಮನೆ ಶಿವಕುಮಾರ್ ವೀರಶೈವ ಮಹಾಸಭಾ ಅಧಿವೇಶನದ ಜಿಲ್ಲಾಧ್ಯಕ್ಷರಾಗಿದ್ದು, ಸಮಾಜದಲ್ಲಿನ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಎಲ್ಲ ವೀರಶೈವ ಲಿಂಗಾಯಿತ ಮುಖಂಡರನ್ನು ಆಹ್ವಾನ ಮಾಡಿದ್ದಾರೆ ಅದಕ್ಕಾಗಿಯೇ ಈಗಾಗಲೇ ಪೂರ್ವ ಸಿದ್ಧತೆ ಕೈಗೊಂಡಿದ್ದಾರೆ. ಪ್ರತಿ ನಾಲ್ಕುವರ್ಷಕ್ಕೊಮ್ಮೆ ನಡೆಯುವ ಈ ಮಹಾಅಧಿವೇಶನ ಎರಡು ಬಾರಿ ಮುಂದೂಡಲಾಗಿತ್ತು. ಆದರೂ ಪಟ್ಟು ಬಿಡದೇ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮೂರನೇ ಬಾರಿಯ ಅಧಿವೇಶನಕ್ಕೆ ಸಜ್ಜಾಗಿದ್ದಾರೆ. ಸಮಾಜದ ಬಗ್ಗೆ ಅಪಾರ ಕಾಳಜಿ…

Read More

ದಾವಣಗೆರೆಯಲ್ಲಿ ನಡೆಯುತ್ತಿರುವ 24 ನೇ ಅಧಿವೇಶನಕ್ಕೆ ಸಾಕಷ್ಟು ಜನರು ದುಡಿಯುತ್ತಿದ್ದು, ಅದರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಕೂಡ ಒಬ್ಬರು. ಸದ್ಯ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡಿರುವ ಇವರು ಯಾಕಾಗಿ ಸಮಾವೇಶ ನಡೆಯುತ್ತಿದೆ. ಇದರ ಹಿಂದೆ ಇರುವ ಉದ್ದೇಶವೇನು. ಅಜೆಂಡಾ ಏನಿದೆ ಸೇರಿದಂತೆ ಇನ್ನಿತರ ವಿಷಯಗಳನ್ನು ಹೇಳಿದ್ದಾರೆ. ಅದರ ಸಂಪೂರ್ಣ ಡೀಟೆಲ್ಸ್ ನಿಮ್ಮ ಮಂದೆ ಇದೆ ತಪ್ಪದೇ ಓದಿ. ನಂದೀಶ್ ಭದ್ರಾವತಿ, ದಾವಣಗೆರೆ ವೀರಶೈವ ಲಿಂಗಾಯಿತ ಸಮಾಜದ ಬಗ್ಗೆ ಜಾಗೃತಿ, ಸಂಘಟನೆ ನನ್ನ ಮೂಲ ಉದ್ದೇಶ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜ, ಸಂಘಟನೆಯೇ ನನ್ನ ಮೂಲ ಗುರಿ. ಅಲ್ಲದೇ ಎಲ್ಲರನ್ನು ಒಟ್ಟುಗೂಡಿಸಿ ಸಮಾಜದ ಯಶಸ್ಸಿಗೆ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇನೆ. ನಾನು ಅನ್ನುವುದಕ್ಕಿಂತ ನಾವು ಎಂಬುದೇ ಮೂಲ ಉದ್ದೇಶ.. ಸಮಾಜವೇ ಎಲ್ಲ ಎಂದು ಅವರು ಹೇಳಿದರು. ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಂದೇ ಎಂಬ ಒಮ್ಮತದ…

Read More

ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮಹಿಳೆಗೆ ಅಗತ್ಯವಾದ ಚರ್ಚೆಗಳು ನಡೆಯಲಿದ್ದು, ಇದರ ನೇತೃತ್ವವನ್ನು ವೀರಶೈವ ಮಹಾಸಭಾ‌ ರಾಜ್ಯ ಘಟಕದ ಕಾರ್ಯಾಕಾರಿ ಸಮಿತಿ ನಿರ್ದೇಶಕಿ ಶಶಿಕಲಾ ನಲ್ಕುದುರೆ ವಹಿಸಿಕೊಳ್ಳುವರು. ಹಾಗಾದ್ರೆ ಶಶಿಕಲಾ ನಲ್ಕುದುರೆ ಯಾರು, ಅವರು ಅಧಿವೇಶನದಲ್ಲಿ ಚರ್ಚೆ ಮಾಡುವ ವಿಷಯಗಳೇನು ಎಂಬುದರ ಸಂಪೂರ್ಣ ಡೀಟೇಲ್ಸ್ ನಿಮ್ಮ ಮುಂದೆ. ನಂದೀಶ್ ಭದ್ರಾವತಿ, ದಾವಣಗೆರೆ ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮಹಿಳೆಯರ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದ್ದು, ಇದರಲ್ಲಿ ವೀರಶೈವ ಮಹಾಸಭಾ‌ ರಾಜ್ಯ ಘಟಕದ ಕಾರ್ಯಾಕಾರಿ ಸಮಿತಿ ನಿರ್ದೇಶಕಿ ಶಶಿಕಲಾ ನಲ್ಕುದುರೆ ತಮ್ಮದೇ ಆದ ವಿಷಯವನ್ನು ಮಂಡನೆ ಮಾಡುವರು. ಸದಾ ಲವಲವಿಕೆ, ಮಹಿಳೆಯರ ಸ್ಥಾನಮಾನ, ಗೌರವ, ಭದ್ರತೆ, ಮಹಿಳೆಯರಿಗೆ ಮೀಸಲಾತಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಶಶಿಕಲಾ ನಲ್ಕುದುರೆ ತಮ್ಮದೇ ಆದ ಚರ್ಚೆ ಮಂಡಿಸುವರು. ಮಹಿಳೆ ವಿಷಯದಲ್ಲಿ ಸದಾ ಹೋರಾಟ ಮಾಡುವ ಶಶಿಕಲಾ ಮೊದಲಿನಿಂದಲೂ ಸ್ತ್ರೀ ವಿಷಯದಲ್ಲಿ ಹೋರಾಟ ಮಾಡಿಕೊಂಡಿರುವ ಇವರು ಅಪ್ಪಟ ಕಾಂಗ್ರೆಸ್ ವಕ್ತಾರೆ. ಇವರಿಗೆ ಬಾಬಾಸಾಹೇಬ ಅಂಬೇಡ್ಕರ ಹಾಗೂ…

Read More

ದಾವಣಗೆರೆ: ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆದ ಶಾಸಕ ಕೆ.ಎಸ್.ಬಸವಂತಪ್ಪ, ೨೦೧೫ರಲ್ಲಿ ಅಂದಿನ ಸರ್ಕಾರದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಪ್ರತ್ಯೇಕ ಹಾಲು ಒಕ್ಕೂಟ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅಂದಿನಿಂದ ಈವರೆಗೂ ಅದು ಆರಂಭವಾಗಿಲ್ಲ ಎಂದರು. ಮಾಯಕೊಂಡ ಕ್ಷೇತ್ರದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭ ಮಾಡಲು ಈಗಾಗಲೇ ಕಲ್ಪನಹಳ್ಳಿ ಗ್ರಾಮದಲ್ಲಿ ಜಮೀನು ಹಾಗೂ ರಸ್ತೆ ಸಂಪರ್ಕವನ್ನು ಒದಗಿಸಿಕೊಟ್ಟಿದ್ದೇವೆ. ಇದಕ್ಕೆ ಬೋರ್ಡ್ ನಿಗಮವೂ ಕೂಡ ಸಮ್ಮಿತಿ ನೀಡಿದೆ. ಹೀಗಾಗಿ ಕೂಡಲೇ ಆರಂಭಿಸಬೇಕೆಂದು ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿದರು. ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಅತೀ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿವೆ. ಈ ಭಾಗದಲ್ಲಿ ಹಾಲು ಒಕ್ಕೂಟ ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ…

Read More

ದಾವಣಗೆರೆ: ಎಲ್ಲರೂ ಶಿಕ್ಷಣವಂತರಾದಾಗ ಮಾತ್ರ ನಮ್ಮ ಹಕ್ಕು ಪಡೆಯಲು ಸಾಧ್ಯವಾಗಲಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹಾಗೂ ತಾಲೂಕಿನ ಕರಿಲಕ್ಕೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಂತೆ ಎಲ್ಲರೂ ಶಿಕ್ಷಣವಂತರಾಗಿ ಸಂಘಟಿತ ಹೋರಾಟದೊಂದಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. ಪುತ್ಥಳಿ ಅನಾವರಣದ ಕನಸು ಬಹುದಿನಗಳ ನಂತರ ನನಸಾಗಿದೆ. ವಾಲ್ಮೀಕಿ ಅವರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲ ಸಮುದಾಯದವರೊಂದಿಗೆ ಸಹೋದರತ್ವ ಭಾವದಿಂದ ಬಾಳಬೇಕು. ಈ ನಿಟ್ಟಿನಲ್ಲಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳು ಸಮಾಜವನ್ನು ಸಂಘಟಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವರ್ಗದವರಿಗೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಸಮಾಜದ ಆಸ್ತಿಯನ್ನಾಗಿ ಮಾಡಬೇಕು.…

Read More

ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಬಾವಿಹಾಳ್ ಎಂಬ ಸಣ್ಣ ಹಳ್ಳಿಯ ರಸ್ತೆ, ಇನ್ನೂ ಅಭಿವೃದ್ಧಿಯಾಗಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಬಾವಿಹಾಳ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕರಿಯಮ್ಮ ದೇವಿ ದೇವಸ್ಥಾನದ ಕಟ್ಟಡ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರೊ.ಲಿಂಗಣ್ಣ ಐದು ವರ್ಷ ಶಾಸಕರಾಗಿದ್ದರು. ಈ ಹಿಂದೆ ಎಷ್ಟೋ ಜನ ಶಾಸಕರಾಗಿದ್ರು. ಈಗ ಬಸವಂತಪ್ಪ ಶಾಸಕರಾಗಿದ್ದಾರೆ. ಆದರೀಗ ಲಿಂಗಣ್ಣನವರೇ ನೀವು ಐದು ವರ್ಷ ಶಾಸಕರಾಗಿದ್ದಾಗ ಈ ರಸ್ತೆಯಲ್ಲಿ ಓಡಾಡಿದ್ದಿಯೋ ಇಲ್ಲವೋ, ನೀನು ಹೇಳು. ಐದು ವರ್ಷವಾದರೂ ರಸ್ತೆ ಹೀಗಿದಿಯೆಲ್ಲ ಎಂದರೆ ಹೇಗೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳು ಕಳೆದವು. ಗ್ರಾಮೀಣ ರಸ್ತೆಗಳು ಯಾರು ಓಡಾಡಲು ಆಗದಂತೆ ಕೆಟ್ಟದಾಗಿವೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸಾಮಾಜಿಕ ಕಳಕಳಿ, ಸಾಮಾಜಿಕ ಬದ್ಧತೆ ಇರಬೇಕು. ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಪ್ರತಿಯೊಬ್ಬ…

Read More

ದಾವಣಗೆರೆ: ದಾವಣಗೆರೆಯಲ್ಲಿ ನಡೆದ 31 ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಮತ್ತು ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ, ದಾವಣಗೆರೆ ವತಿಯಿಂದ ಆಯೋಜಿಸಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2023 ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಬಿ.ಎನ್.ಭಾವನಾ (9 ನೇ ತರಗತಿ) ಮತ್ತು ಎಂ.ಪ್ರತೀಕ್ಷಾ (8 ನೇ ತರಗತಿ) ಇವರು ‘ಸ್ವಾವಲಂಭನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು’ ಎಂಬ ಉಪ ವಿಷಯದ ಅಡಿಯಲ್ಲಿ ‘ಕತ್ತಾಳೆ ಪಟ್ಟಿ, ಪರಿಸರದ ಗಟ್ಟಿ’ ಎಂಬ ವಿಷಯವನ್ನು ಮಂಡನೆ ಮಾಡಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಾಲಾ ವಿಜ್ಞಾನ ಶಿಕ್ಷಕಿ ಸವಿತಾ ಎನ್.…

Read More

ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ ಹಮ್ಮಿಕೊಂಡ ವೇಳೆ ಸಮುದಾಯದ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆದಿದೆ. ದಲಿತ ಮಹಾಸಭಾ ಸಂಘಟನೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತಹ ಕಾರಜೋಳ ಕೊಠಡಿಗೆ ನೇರವಾಗಿ ಬಂದರು. ಈ ಸಂದರ್ಭದಲ್ಲಿ ಮಾತನಾಡಿದಂತಹ ಪದಾಧಿಕಾರಿಗಳು, ಬಿಜೆಪಿ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ದಲಿತರಿಗೆ ನೀವು ಅನ್ಯಾಯ ಮಾಡಿದ್ದೀರಾ. ಸಮುದಾಯದ ಮುಖಂಡರಾಗಿ ಸಮುದಾಯಕ್ಕೆ ಕೊಡುಗೆ ಏನನ್ನು ನೀವು ನೀಡಿಲ್ಲ ಎಂದು‌ ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ಬಳಿಕ ಮಾಜಿ ಸಚಿವ ಕಾರಜೋಳ ಹಾಗೂ ಸಮುದಾಯದ ಮುಖಂಡರು ವಾದ-ಪ್ರತಿವಾದ ಮಂಡಿಸಿದರು. ಹಲ್ಲೆಗೆ ಯತ್ನ, ಬಂಧಿಸಲು ಆಗ್ರಹ ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನನ್ನ ಮೇಲೆ ಹಲ್ಲೆ ಮಾಡಲು ಬಂದಂತಹ ವ್ಯಕ್ತಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಗೋವಿಂದ್ ಕಾರಜೋಳ ಎಚ್ಚರಿಸಿದರು.

Read More