ದಾವಣಗೆರೆ : ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮಹಿಳಾ ಬಾಂಧವರು ಆಗಮಿಸಬೇಕೆಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕಾರ್ಯಕಾರಿ ನಿರ್ದೇಶಕಿ ಎಂ.ಜಿ ಶಶಿಕಲಾಮೂರ್ತಿ ಕರೆನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು
ರಾಷ್ಟ್ರದ ಹಾಗೂ ರಾಜ್ಯದ ಎಲ್ಲಾ ಘಟಕಗಳಿಂದ ಸಮಾಜ ಬಾಂಧವರು ಆಗಮಿಸಿ ಒಗ್ಗಟ್ಟಿನಿಂದ ನಮ್ಮ ಮುಂದಿನ ಭವಿಷ್ಯದ ಭದ್ರತೆಗೆ ಹಾಗೂ ಭವಿಷ್ಯ ಸಾಕಾರಗೊಳ್ಳಲು ಎಲ್ಲರೂ ಕೈಜೋಡಿಸಲು ಅಧಿವೇಶನದಲ್ಲಿ ಭಾಗವಹಿಸ ಬೇಕು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ ನೇ ಅಧಿವೇಶನ ದಾವಣಗೆರೆಯಲ್ಲಿ ನಡೆಯುತ್ತಿದ್ದು ಈ ಮಹಾಅಧಿವೇಶನದಲ್ಲಿ ಸಮಸ್ತ ಕುಲಬಾಂಧವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು
ಇದೊಂದು ಮಹತ್ತರವಾದ ಐತಿಹಾಸಿಕ ಅಧಿವೇಶನವಾಗಿದೆ.ಈ ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಅದರಲ್ಲೂ ಮಹಿಳಾ ಮತ್ತು ಯುವ ಅಧಿವೇಶನ ಮಹತ್ವದ್ದಾಗಿದೆ ಎಂದರು.
ಮಹಿಳಾ ಹಾಗೂ ಯುವ ಅಧಿವೇಶನ ಸಾಕಷ್ಟು ಅರಿವು ಮೂಡಿಸಲಿದೆ ಎಂಬುದು ಮಹಿಳೆಯಾಗಿ ನನ್ನ ಅಭಿಪ್ರಾಯವಾಗಿದೆ.ಮಹಿಳೆಯರಿಗೆ ವೀರಶೈವ ಲಿಂಗಾಯತ ಸಮಾಜ ಹಿಂದಿನಿಂದಲೂ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನ ಗೌರವ ನೀಡಿದೆ.
ಈ ಅಧಿವೇಶನದಲ್ಲಿ ಮಹಿಳೆಯರಿಗೆ ಶೇ ೩೩ ಮೀಸಲಾತಿ ನೀಡುವ ಕುರಿತು ಚರ್ಚೆ ನಡೆಯಲಿದೆ ಜೊತೆಗೆ ಮಹಿಳೆಯರ ಆರೋಗ್ಯ, ಕಾನೂನು ಅರಿವು ,ಶಿಕ್ಷಣದ ಅರಿವು ಸಾಮಾಜಿಕ ಅರಿವು ಭದ್ರತೆ ಹಾಗೂ ಯಾವೆಲ್ಲ ರೀತಿಯಲ್ಲಿ ಸ್ವಾವಲಂಬನೆ ಬಗ್ಗೆ ಮಹಾಅಧಿವೇಶನದ ಮುಖಾಂತರ ಸುಭದ್ರತೆ ನೀಡಲಾಗುವುದು ಅದರಲ್ಲೂ ಯುವತಿಯರಿಗೆ ಕಾಲೇಜು ಹಂತದಲ್ಲಿರುವ ಯುವತಿಯರಿಗೆ ಅವರ ಮುಂದಿನ ಉದ್ಯೋಗ,ಶೈಕ್ಷಣಿಕ ಭದ್ರತೆ ಬಗ್ಗೆ ಹಲವಾರು ಚರ್ಚೆ ನಡೆಯಲಿದೆ.
ಅಧಿವೇಶನದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಲಿದ್ದಾರೆ.ಶಾಸಕ ಬಿ.ವೈ ವಿಜಯೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್,ಮಕ್ಕಳ ತಜ್ಞರಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ,ವಿಮರ್ಶಕಿ ಡಾ.ಎಂ.ಎಸ್ ಆಶಾದೇವಿ,ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಮೀನಾಕ್ಷಿ ಕಮನಡಿಮಠ,ಅನುರಾಧ ಬಕ್ಕಪ್ಪ ಉಪನ್ಯಾಸ ನೀಡಲಿದ್ದಾರೆಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಕಷ್ಟು ಹಿರಿಯ ಮಹಿಳೆಯರು ಉಪನ್ಯಾಸ ನೀಡಲಿದ್ದಾರೆ.ಅವರ ಅನುಭವ ಹಾಗೂ ಸಮಾಜದಲ್ಲಿ ಅವರ ಬೆಳವಣಿಗೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
ನಮ್ಮ ಸಮಾಜದಲ್ಲಿರುವ ಪ್ರತಿಯೊಬ್ಬ ಮಹಿಳೆಯರು ಸ್ವಾಬಲಂಬಿ ಜೀವನಕಟ್ಟಿಕೊಂಡು ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹಿಳೆಯರ ಪಾತ್ರ ಹೆಚ್ಚಾಗಿದೆ ಆದ್ದರಿಂದ ಹೆಚ್ವಿನ ಸಂಖ್ಯೆಯಲ್ಲಿ ಮಹಿಳೆಯರು ಅಧಿವೇಶನದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.