- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
*ದಾವಣಗೆರೆಯಲ್ಲಿ ಅಂಚೆ ವಿಭಾಗೀಯ ಕಚೇರಿ ಬರಲು ಇವರು ಕಾರಣ * ದಾವಣಗೆರೆ ಅಂಚೆ ಇಲಾಖೆ ಪ್ರಥಮ ಅಧೀಕ್ಷಕ *ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಣೆ ದಾವಣಗೆರೆ; ಅಂಚೆ ಇಲಾಖೆಯಲ್ಲಿ ಇವತ್ತಿಗೂ ಪ್ರಾಮಾಣಿಕ ಅಧಿಕಾರಿ ಇದ್ದಾರೆ ಅಂದ್ರೆ ಅದು ವಿರೂಪಾಕ್ಷಪ್ಪ..ಇವರು ಸದ್ಯ ನಿವೃತ್ತರಾಗಿದ್ದರೂ, ಇಲಾಖೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು..ಇದರ ಪರಿಣಾಮವಾಗಿಯೇ ಅವರನ್ಬು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಹೌದು..ಅಂಚೆ ಇಲಾಖೆಯ ನಿವೃತ್ತ ಹಿರಿಯ ಅಂಚೆ ಅಧೀಕ್ಷಕರು ಒ. ವಿರೂಪಾಕ್ಷಪ್ಪ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಅನುಭವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿವೃತ್ತರಾಗುತ್ತಿರುವ ಹಾಗೂ ನಿವೃತ್ತ ಕೇಂದ್ರ ಸರ್ಕಾರದ ನೌಕರರು ತಮ್ಮ ಅನುಭವ ಹಂಚಿಕೊಳ್ಳಲು ಅನುಭವ್ ಎಂಬ ಆನ್‌ಲೈನ್ ವೇದಿಕೆ ರೂಪಿಸಲಾಗಿತ್ತು. ಈ ವೇದಿಕೆಯಲ್ಲಿ ಅವರು ತಮ್ಮ ಅನುಭವ ಹಂಚಿಕೊಳ್ಳಬೇಕಿತ್ತು. 1,459 ನಿವೃತ್ತರು ತಮ್ಮ ಅನುಭವ ಬರಹಗಳನ್ನು ಸಲ್ಲಿಸಿದ್ದರು ಈ ವರ್ಷದ ರಾಷ್ಟ್ರೀಯ ಅನುಭವ ಪುರಸ್ಕಾರಕ್ಕೆ ಕೇಂದ್ರ ಸರ್ಕಾರದ ನೌಕರರಷ್ಟೇ ಅಲ್ಲದೇ, ಸರ್ಕಾರಿ ಸ್ವಾಮ್ಯದ ಉದ್ಯಮಗಳು ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಉದ್ಯೋಗಿಗಳನ್ನೂ ಪರಿಗಣಿಸಲಾಗಿತ್ತು. 42 ಸಚಿವಾಲಯಗಳು,…
ದಾವಣಗೆರೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮುಖಂಡ ಎನ್.ರಾಜಶೇಖರ್ ಅವರನ್ನು ಬಿಜೆಪಿ ಚುನಾವಣಾ ಘಟಕದ ಚುನಾವಣಾ ಅಧಿಕಾರಿ ಗಣೇಶ್ ಕಾರ್ಣಿಕ್ ಅಧಿಕೃತವಾಗಿ ಘೋಷಿಸಿದ್ದಾರೆ. ಎನ್.ರಾಜಶೇಖರ್ ಆರಂಭದಲ್ಲಿ ಭಜರಂಗ ದಳದ ನಗರ, ಜಿಲ್ಲಾ ಸಹ ಸಂಚಾಲಕ, ಜಿಲ್ಲಾ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ. 2007ರಲ್ಲಿ ದಾವಣಗೆರೆ ಮಹಾನಗರ ಯುವಮೋರ್ಚಾ ಅಧ್ಯಕ್ಷ, 2010ರಲ್ಲಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2013ರಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ್, 2016ರಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2018ರಲ್ಲಿ ದಾವಣಗೆರೆ ದಕ್ಷಿಣ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ
ದಾವಣಗೆರೆ : ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದು ಶಾಸಕ ಶಿವಗಂಗಾ ಬಸವರಾಜ್ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು. ದಾವಣಗೆರೆಯಲ್ಲಿ ಕ್ಯಾಬಿನೆಟ್ ವಿಸ್ತರಣೆ ವಿಚಾರ ಸಂಬಂಧ ಮಾತನಾಡಿ, ಎರಡು ವರ್ಷದ ಸಾಧನೆ ಎಂದು ಹೇಳುತ್ತಾರೆ, ಆದ್ರೆ ಕೆಲ ಸಚಿವರು ಏನು ಸಾಧನೆ ಮಾಡಿಲ್ಲ.ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ರೆ ಉತ್ತಮವಾಗಿ ಕೆಲಸ ಮಾಡುತ್ತಾರೆ. ಹಳಬರಿಗೆ ಸಚಿವ ಸ್ಥಾನಕ್ಕೆ ಕೋಕ್ ಕೊಟ್ರೆ ಒಳ್ಳೆಯದು.ಹಳಬರು ಅಧಿಕಾರ ಅನುಭವಿಸಿ ಜಿಡ್ಡು ಹಿಡಿದು ಹೋಗಿದ್ದಾರೆ. ನಾನು ಸನ್ಯಾಸಿ ಅಲ್ಲ, ಸಚಿವ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ. ಜಿಲ್ಲೆಯಲ್ಲಿ ಶಾಸಕ ಶಾಂತನಗೌಡ್ರು ಹಿರಿಯ ರಾಜಕಾರಣಿ ಅವರಿಗೆ ಕೊಟ್ರೆ ನಾನು ಖುಷಿ ಪಡುತ್ತೇನೆ. ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಬಾರ್ದು ಅಂತ ಏನಾದ್ರು ಇದೆಯಾ?. ಹೈ ಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು .ಸಂಪುಟದಲ್ಲಿ 8-10 ಜನರನ್ನ ಬಿಡಲಿ, ಹೊಸಬರಿಗೆ ಅವಕಾಶ ಕೊಡಲಿ. 5 ರಿಂದ…
ದಾವಣಗೆರೆ : ನಗರದ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ತಮ್ಮ ಗ್ರಾಮಕ್ಕೆ ಸೌಲಭ್ಯ ಕೇಳಿಬಂದವರ ಮನವಿಗಳನ್ನು ಸ್ವೀಕರಿಸಿ ನಂತರ ಜಿಲ್ಲಾಡಳಿತ ಭವನದಲ್ಲಿದ್ದ ಅಧಿಕಾರಿಗಳನ್ನು ಸಂಪರ್ಕಿಸಿ ನೊಂದವರ ಕಷ್ಟಕ್ಕೆ ಸ್ಪಂದನೆ ನೀಡಿದರು ಹಾಗೂ ಜನರನ್ನು ಅಲೆದಾಡಿಸದೇ ಅವರ ಸಂಕಷ್ಟಗಳಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಸಂಸದರ ಬಳಿತೊಡಿಕೊಂಡರು.ತಮ್ಮ ಜಮೀನಿಗೆ ತೆರಳಲು ರಸ್ತೆ ಸಂಪರ್ಕ ಮಾಡಿಕೊಡುವಂತೆ ಕೆಲ ರೈತರು ಸಂಸದರ ಬಳಿ ಮನವಿ ಸಲ್ಲಿಸಿದರು.ಇದಕ್ಕೆ ಸ್ಪಂದಿಸಿದ ಸಂಸದರು ಕ್ರಮ ವಹಿಸುವುದಾಗಿ ತಿಳಿಸಿದರು.ಈ ವೇಳೆ ಕೆಲ ವಿದ್ಯಾರ್ಥಿಗಳ ಮನವಿಗಳನ್ನು ಸಹ ಸ್ವೀಕರಿಸಿದರು. ಜಿಲ್ಲೆಯ ಚನ್ನಗಿರಿ,ಹೊನ್ನಾಳಿ,ಜಗಳೂರು,ಹರಿಹರದಿಂದಲೂ ಆಗಮಿಸಿದ ಜನರು ಸಂಸದರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ದಾವಣಗೆರೆ: ಆರ್ ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಮೃತರಾದ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ ಸಿಬಿ ಕಪ್ ಕಾಲ್ತುಳಿತ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಸಿಬಿಐ ತನಿಖೆ ಮಾಡಿದಾಗ ಮಾತ್ರ ಘಟನೆಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ. ವಿಧಾನಸೌಧ ಡಿಸಿಪಿ ತರಾತುರಿ ಕಾರ್ಯಕ್ರಮ ಮಾಡೋದ ಬೇಡ.ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಪತ್ರ ಬರೆದಿದ್ದರು. ಲೋಕೋಪಯೋಗಿ ಇಲಾಖೆ ಕೂಡ ವಿಧಾನಸೌಧ ಮುಂಬಾಗ ಕಾರ್ಯಕ್ರಮ ಬೇಡ ಅಂದಿತ್ತು. ಎರಡು ಇಲಾಖೆಯವರು ಪತ್ರ ಬರೆದರೂ ಕಾರ್ಯಕ್ರಮ ಮಾಡಿದ್ದಾರೆ. ಹಾಗಾದರೆ 11 ಜನರ ಸಾವಿಗೆ ಕಾರಣ ಯಾರು? RCB ತಂಡದ ಆಟಗಾರರಿಗಿಂತ ಅತಿಥಿಗಳೇ ಹೆಚ್ಚಾಗಿದ್ದರು. ಇದು ಆಟಗಾರರಿಗೆ ಮಾಡಿದ ಅವಮಾನ ಅಂತ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ : ಬೆಂಗಳೂರಿನಲ್ಲಿ ಆರ್ ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಮರಣ ಹೊಂದಿದ ಸಂಬಂಧ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಉಳಿದ ನಾಲ್ವರ ಪೊಲೀಸರ ಅಮಾನತಿಗೆ ದಾವಣಗೆರೆ ನಿವೃತ್ತ ಪೊಲೀಸ್ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಸಿಎಂನಿಂದ ಹಿಡಿದು ಕಾಮನ್ ಮ್ಯಾನ್ ಗೂ ಪೊಲೀಸ್ ಬೇಕು, ನಮ್ಮನ್ನು ಹೊಗಳುವರಿಗಿಂತ ತೆಗೋಳೇರೆ ಜಾಸ್ತಿ…ಎಲ್ಲರೂ ಹಬ್ಬ ಹರಿದಿನಗಳಲ್ಲಿ ಕುಟುಂಬದ ಜತೆ ಹಬ್ಬ ಮಾಡಿದರೆ ನಾವು ಬಂದೋಬಸ್ತ್ ನಲ್ಲಿ ಇರಬೇಕು. ಗಲಾಟೆ ಆದ್ರೆ ಜೀವ ಪಣಕ್ಕಿಟ್ಟು ನಿಯಂತ್ರಿಸಬೇಕು. ಬಿಸಿಲಿನಲ್ಲಿ ಒಣಗಿ ಪ್ಯಾಕೇಟ್ ಊಟ ಮಾಡಿ ಡ್ಯೂಟಿ ಮಾಡಬೇಕು..ರಜೆ ಇದ್ದರೂ ಕರ್ತವ್ಯ ಅಂದ ಕೂಡಲೇ ಓಡಿ ಬರಬೇಕು..ಹೀಗಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಮ್ಮೇಲೇ ಎರಡು ಲಕ್ಷ ಜನ ನುಗ್ಗಿದರೆ ನಿಯಂತ್ರಿಸುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರು ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್‌ಸ್ಟೇಬಲ್‌ನಿಂದ ಹೆಚ್ಚುವರಿ ಆಯುಕ್ತರ ವರೆಗೂ ಒಂದು ತಂಡವಾಗಿ ಸಮನ್ವಯದಿಂದ ನೋಡುತ್ತಿದ್ದ ಅವರನ್ನು ಡೈನಮಿಕ್…
ಶಿವಮೊಗ್ಗ : ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಿಮುಲ್ ನಿರ್ದೇಶಕ ಮಂಜುನಾಥ್ ಗೌಡಗೆ ಇಡಿ ಬಿಗ್ ಶಾಕ್ ನೀಡಿದ್ದು, ಅವರ ಪತ್ನಿಗೆ ಸೇರಿ 13.91 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಇಡಿ, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಹಣವನ್ನು ವಂಚಿಸಿದ ಪ್ರಕರಣದಲ್ಲಿ, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ರೂ. 13.91 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಇಡಿ, ಬೆಂಗಳೂರು ವಲಯ ಕಚೇರಿಯು ಪಿಎಂಎಲ್‌ಎ, 2002 ರ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿಸಿದೆ ಇನ್ನು ಜೈಲಿನಲ್ಲಿರುವ ಮಂಜುನಾಥ್ ಗೌಡ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಈಗಾಗಲೇ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು ಬಂಧಿಸಲಾಗಿದೆ. ಅವರು ಜೈಲಿನಲ್ಲಿದ್ದಾರೆ. ನಕಲಿ ಚಿನ್ನ ಅಡವಿಟ್ಟು…
ಸ್ಲಗ್ *ಶಿವಮೊಗ್ಗ ನಗರದಲ್ಲಿ ಆರ್ ಸಿ ಬಿ ಗೆಲುವಿನ ಸಂಭ್ರಮ *ಉಷಾ ನರ್ಸಿಂಗ್ ಹೋಮ್ ಬಳಿ ಸಂಭ್ರಮಾಚರಣೆ *ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ *ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ಅಪಘಾತ *21 ವರ್ಷದ ಅಭಿ ಪ್ರಾಣ ಕಳೆದುಕೊಂಡ ಯುವಕ …. ಶಿವಮೊಗ್ಗ : ನಗರದಲ್ಲಿ ಆರ್‍ಸಿಬಿ ಗೆಲುವಿನ ಸಂಭ್ರಮ ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಉಷಾ ನರ್ಸಿಂಗ್ ಹೋಮ್ ಬಳಿ ನಡೆಯುತ್ತಿದ್ದ ಸಂಭ್ರಮಾಚರಣೆಯ ನಡುವೆ ಅಲ್ಲಿಯೇ ಸಮೀಪದ ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ನಡೆದ ಬೈಕ್‍ವೊಂದು ಅಪಘಾತಕ್ಕೀಡಾಗಿದೆ. ಎರಡು ಬೈಕ್‍ಗಳು ಡಿಕ್ಕಿಯಾದ ಪರಿಣಾಮ 21 ವರ್ಷದ ಅಭಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೆ ಹಲವೆಡೆ ನಡೆಯುತ್ತಿದ್ದ ಆರ್‍ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಪೋಲೀಸರು ಬ್ರೇಕ್ ಹಾಕಿದ್ದಾರೆ. ನಿನ್ನೆ ರಾತ್ರಿ ಆರ್‍ಸಿಬಿ ಮ್ಯಾಚ್ ಗೆಲ್ಲುತ್ತಲೇ ಅಭಿಮಾನಿಗಳು ರೋಡಿಗೆ ಇಳಿದಿದ್ದು ಬೈಕ್‍ಗಳಲ್ಲಿ ರ್ಯಾಲಿ ಮಾಡಲು ಆರಂಭಿಸಿದ್ದರು. ಪ್ರಮುಖ ಸರ್ಕಲ್‍ಗಳಲ್ಲಿ ಕುಣಿಯುತ್ತಿದ್ದರು. ಈ ನಡುವೆ ಸ್ಪೀಡ್‍ನಲ್ಲಿ ಬಂದ ಎರಡು ಬೈಕ್‍ಗಳು…
ಶಿವಮೊಗ್ಗ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ವಿಷ್ಣುಪ್ರಿಯಾ (22) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಸಮೀಪದ ಪುರಲೆ ಸುಬ್ಬಯ್ಯ ಮೆಡಿಕಲ್ ಕಾಲೇಜು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ಇಂಟರ್ ಶಿಪ್ ಮುಗಿಸುವ ಹಂತದಲ್ಲಿದ್ದರು. ಕೇವಲ ಹತ್ತು ದಿನ ಬಾಕಿ ಇತ್ತು. ಮೃತ ವಿದ್ಯಾರ್ಥಿನಿ ಮೂಲತಃ ಬೆಂಗಳೂರಿನವರಾಗಿದ್ದು, ಈಕೆಯ ಪೋಷಕರು ಬಹರೈನ್ ನಗರದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರೇಮದ ವಿಚಾರದಲ್ಲಿ ಪೋಷಕರ ಜತೆ ಜಗಳದ ಶಂಕೆ ಈ ವೈದ್ಯಕೀಯ ವಿದ್ಯಾರ್ಥಿನಿ ಪೋಷಕರೊಂದಿಗೆ ಪ್ರೇಮದ ವಿಚಾರದಲ್ಲಿ ಜಗಳ ಮಾಡಿಕೊಂಡು ಆತ್ಯಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ವಿಷ್ಣುಪ್ರಿಯಾಳ ತಂದೆ ಮತ್ತು ತಾಯಿ ಬಹರೈನ್ ನಲ್ಲಿ ವಾಸಿಸುತ್ತಿದ್ದು, ತಮ್ಮ ಮಗಳ ಸಾವಿನ ಸುದ್ದಿ ಕೇಳಿ ಶಿವಮೊಗ್ಗದತ್ತ ಹೊರಟಿದ್ದಾರೆ. ಈಕೆ ಆಂಧ್ರ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳೆಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಇನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರ ತನಿಖೆಯಿಂದ…
ಹೈಲೈಟ್ಸ್ *ನಗದು ಬಹುಮಾನಗಳು : ಎಸ್ ಪಿ 09 * ಶ್ಲಾಘನೀಯ ಪತ್ರಗಳು : ಐಜಿಪಿ 01 *ಪ್ರಶಂಸನೀಯ ಪತ್ರಗಳು : 05 ( ಐಜಿಪಿ -01, ಎಸ್ಪಿ-03, ಸ್ಪೇಶಲ್ ಪಿಪಿ-01 *ಇತರೆ ಬಹುಮಾನ : ಬುನಾದಿ ತರಬೇತಿಯಲ್ಲಿ ಸರ್ವೋತ್ತಮ ಪ್ರಶಿಕ್ಷಾರ್ಥಿ, ಹೊರಾಂಗಣ, ಒಳಾಂಗಣ ವಿಷಯಗಳಲ್ಲಿ ದ್ವೀತಿಯ ಸ್ಥಾನ ನಂದೀಶ್ ಭದ್ರಾವತಿ, ದಾವಣಗೆರೆ ನಾವೆಲ್ಲ ಹೊರಗೆ ಕೆಲಸ ಮಾಡುವ ಪೊಲೀಸರನ್ನು ಮಾತ್ರ ನೋಡಿರುತ್ತೇವೆ..ಆದರೆ ಠಾಣೆಯಲ್ಲಿ ಕೆಲಸ ಮಾಡುವ ಖಾಕಿಯ ಕಾರ್ಯವೈಖರಿ ಯಾರಿಗೂ ಅಷ್ಟೊಂದು ತಿಳಿದಿರೋದಿಲ್ಲ…ಅವರ ಮಾಡುವ ಕೆಲಸಗಳು ಸಹ ಯಾರಿಗೂ ಗೊತ್ತಿರೋದಿಲ್ಲ..ಈ ನಡುವೆ ಕಷ್ಟ ಎಂದು ಹೇಳಿಕೊಂಡು ಠಾಣೆಗೆ ಬಂದವರನ್ನು ಕೂರಿಸಿ ಮಾತನಾಡಿಸೋದೇ ಕಷ್ಟ..ಇಂತಹ ಸನ್ನಿವೇಶದಲ್ಲಿ ಇಲ್ಲೊಬ್ಬ ಹೆಡ್ ಕಾನ್ ಸ್ಟೇಬಲ್ ಈ ಮಾತಿಗೆ ಅಪವಾದವೆಂಬಂತೆ ಇದ್ದು, ಜನರ ಮನ್ನಣೆಗೆ ಪಾತ್ರರಾಗಿದ್ದಾರೆ… ಅಲ್ಲದೇ ಅವರ ಪ್ರಾಮಾಣಿಕತೆಗೆ 2025-2026 ರ ಕಮೆಂಡೇಶನ್ ಪದಕ ಸಿಕ್ಕಿದೆ. ಹೌದು.ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಜೆ.ಎಂ.ಮಂಜುನಾಥ್ ಗೆ “Director General of…