- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ದಾವಣಗೆರೆ : ಬೆಂಗಳೂರಿನಲ್ಲಿ ಆರ್ ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಮರಣ ಹೊಂದಿದ ಸಂಬಂಧ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಉಳಿದ ನಾಲ್ವರ ಪೊಲೀಸರ ಅಮಾನತಿಗೆ ದಾವಣಗೆರೆ ನಿವೃತ್ತ ಪೊಲೀಸ್ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಸಿಎಂನಿಂದ ಹಿಡಿದು ಕಾಮನ್ ಮ್ಯಾನ್ ಗೂ ಪೊಲೀಸ್ ಬೇಕು, ನಮ್ಮನ್ನು ಹೊಗಳುವರಿಗಿಂತ ತೆಗೋಳೇರೆ ಜಾಸ್ತಿ…ಎಲ್ಲರೂ ಹಬ್ಬ ಹರಿದಿನಗಳಲ್ಲಿ ಕುಟುಂಬದ ಜತೆ ಹಬ್ಬ ಮಾಡಿದರೆ ನಾವು ಬಂದೋಬಸ್ತ್ ನಲ್ಲಿ ಇರಬೇಕು. ಗಲಾಟೆ ಆದ್ರೆ ಜೀವ ಪಣಕ್ಕಿಟ್ಟು ನಿಯಂತ್ರಿಸಬೇಕು. ಬಿಸಿಲಿನಲ್ಲಿ ಒಣಗಿ ಪ್ಯಾಕೇಟ್ ಊಟ ಮಾಡಿ ಡ್ಯೂಟಿ ಮಾಡಬೇಕು..ರಜೆ ಇದ್ದರೂ ಕರ್ತವ್ಯ ಅಂದ ಕೂಡಲೇ ಓಡಿ ಬರಬೇಕು..ಹೀಗಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಮ್ಮೇಲೇ ಎರಡು ಲಕ್ಷ ಜನ ನುಗ್ಗಿದರೆ ನಿಯಂತ್ರಿಸುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರು ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್‌ಸ್ಟೇಬಲ್‌ನಿಂದ ಹೆಚ್ಚುವರಿ ಆಯುಕ್ತರ ವರೆಗೂ ಒಂದು ತಂಡವಾಗಿ ಸಮನ್ವಯದಿಂದ ನೋಡುತ್ತಿದ್ದ ಅವರನ್ನು ಡೈನಮಿಕ್…
ಶಿವಮೊಗ್ಗ : ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಿಮುಲ್ ನಿರ್ದೇಶಕ ಮಂಜುನಾಥ್ ಗೌಡಗೆ ಇಡಿ ಬಿಗ್ ಶಾಕ್ ನೀಡಿದ್ದು, ಅವರ ಪತ್ನಿಗೆ ಸೇರಿ 13.91 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಇಡಿ, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಹಣವನ್ನು ವಂಚಿಸಿದ ಪ್ರಕರಣದಲ್ಲಿ, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ರೂ. 13.91 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಇಡಿ, ಬೆಂಗಳೂರು ವಲಯ ಕಚೇರಿಯು ಪಿಎಂಎಲ್‌ಎ, 2002 ರ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿಸಿದೆ ಇನ್ನು ಜೈಲಿನಲ್ಲಿರುವ ಮಂಜುನಾಥ್ ಗೌಡ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಈಗಾಗಲೇ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು ಬಂಧಿಸಲಾಗಿದೆ. ಅವರು ಜೈಲಿನಲ್ಲಿದ್ದಾರೆ. ನಕಲಿ ಚಿನ್ನ ಅಡವಿಟ್ಟು…
ಸ್ಲಗ್ *ಶಿವಮೊಗ್ಗ ನಗರದಲ್ಲಿ ಆರ್ ಸಿ ಬಿ ಗೆಲುವಿನ ಸಂಭ್ರಮ *ಉಷಾ ನರ್ಸಿಂಗ್ ಹೋಮ್ ಬಳಿ ಸಂಭ್ರಮಾಚರಣೆ *ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ *ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ಅಪಘಾತ *21 ವರ್ಷದ ಅಭಿ ಪ್ರಾಣ ಕಳೆದುಕೊಂಡ ಯುವಕ …. ಶಿವಮೊಗ್ಗ : ನಗರದಲ್ಲಿ ಆರ್‍ಸಿಬಿ ಗೆಲುವಿನ ಸಂಭ್ರಮ ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಉಷಾ ನರ್ಸಿಂಗ್ ಹೋಮ್ ಬಳಿ ನಡೆಯುತ್ತಿದ್ದ ಸಂಭ್ರಮಾಚರಣೆಯ ನಡುವೆ ಅಲ್ಲಿಯೇ ಸಮೀಪದ ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ನಡೆದ ಬೈಕ್‍ವೊಂದು ಅಪಘಾತಕ್ಕೀಡಾಗಿದೆ. ಎರಡು ಬೈಕ್‍ಗಳು ಡಿಕ್ಕಿಯಾದ ಪರಿಣಾಮ 21 ವರ್ಷದ ಅಭಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೆ ಹಲವೆಡೆ ನಡೆಯುತ್ತಿದ್ದ ಆರ್‍ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಪೋಲೀಸರು ಬ್ರೇಕ್ ಹಾಕಿದ್ದಾರೆ. ನಿನ್ನೆ ರಾತ್ರಿ ಆರ್‍ಸಿಬಿ ಮ್ಯಾಚ್ ಗೆಲ್ಲುತ್ತಲೇ ಅಭಿಮಾನಿಗಳು ರೋಡಿಗೆ ಇಳಿದಿದ್ದು ಬೈಕ್‍ಗಳಲ್ಲಿ ರ್ಯಾಲಿ ಮಾಡಲು ಆರಂಭಿಸಿದ್ದರು. ಪ್ರಮುಖ ಸರ್ಕಲ್‍ಗಳಲ್ಲಿ ಕುಣಿಯುತ್ತಿದ್ದರು. ಈ ನಡುವೆ ಸ್ಪೀಡ್‍ನಲ್ಲಿ ಬಂದ ಎರಡು ಬೈಕ್‍ಗಳು…
ಶಿವಮೊಗ್ಗ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ವಿಷ್ಣುಪ್ರಿಯಾ (22) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಸಮೀಪದ ಪುರಲೆ ಸುಬ್ಬಯ್ಯ ಮೆಡಿಕಲ್ ಕಾಲೇಜು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ಇಂಟರ್ ಶಿಪ್ ಮುಗಿಸುವ ಹಂತದಲ್ಲಿದ್ದರು. ಕೇವಲ ಹತ್ತು ದಿನ ಬಾಕಿ ಇತ್ತು. ಮೃತ ವಿದ್ಯಾರ್ಥಿನಿ ಮೂಲತಃ ಬೆಂಗಳೂರಿನವರಾಗಿದ್ದು, ಈಕೆಯ ಪೋಷಕರು ಬಹರೈನ್ ನಗರದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರೇಮದ ವಿಚಾರದಲ್ಲಿ ಪೋಷಕರ ಜತೆ ಜಗಳದ ಶಂಕೆ ಈ ವೈದ್ಯಕೀಯ ವಿದ್ಯಾರ್ಥಿನಿ ಪೋಷಕರೊಂದಿಗೆ ಪ್ರೇಮದ ವಿಚಾರದಲ್ಲಿ ಜಗಳ ಮಾಡಿಕೊಂಡು ಆತ್ಯಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ವಿಷ್ಣುಪ್ರಿಯಾಳ ತಂದೆ ಮತ್ತು ತಾಯಿ ಬಹರೈನ್ ನಲ್ಲಿ ವಾಸಿಸುತ್ತಿದ್ದು, ತಮ್ಮ ಮಗಳ ಸಾವಿನ ಸುದ್ದಿ ಕೇಳಿ ಶಿವಮೊಗ್ಗದತ್ತ ಹೊರಟಿದ್ದಾರೆ. ಈಕೆ ಆಂಧ್ರ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳೆಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಇನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರ ತನಿಖೆಯಿಂದ…
ಹೈಲೈಟ್ಸ್ *ನಗದು ಬಹುಮಾನಗಳು : ಎಸ್ ಪಿ 09 * ಶ್ಲಾಘನೀಯ ಪತ್ರಗಳು : ಐಜಿಪಿ 01 *ಪ್ರಶಂಸನೀಯ ಪತ್ರಗಳು : 05 ( ಐಜಿಪಿ -01, ಎಸ್ಪಿ-03, ಸ್ಪೇಶಲ್ ಪಿಪಿ-01 *ಇತರೆ ಬಹುಮಾನ : ಬುನಾದಿ ತರಬೇತಿಯಲ್ಲಿ ಸರ್ವೋತ್ತಮ ಪ್ರಶಿಕ್ಷಾರ್ಥಿ, ಹೊರಾಂಗಣ, ಒಳಾಂಗಣ ವಿಷಯಗಳಲ್ಲಿ ದ್ವೀತಿಯ ಸ್ಥಾನ ನಂದೀಶ್ ಭದ್ರಾವತಿ, ದಾವಣಗೆರೆ ನಾವೆಲ್ಲ ಹೊರಗೆ ಕೆಲಸ ಮಾಡುವ ಪೊಲೀಸರನ್ನು ಮಾತ್ರ ನೋಡಿರುತ್ತೇವೆ..ಆದರೆ ಠಾಣೆಯಲ್ಲಿ ಕೆಲಸ ಮಾಡುವ ಖಾಕಿಯ ಕಾರ್ಯವೈಖರಿ ಯಾರಿಗೂ ಅಷ್ಟೊಂದು ತಿಳಿದಿರೋದಿಲ್ಲ…ಅವರ ಮಾಡುವ ಕೆಲಸಗಳು ಸಹ ಯಾರಿಗೂ ಗೊತ್ತಿರೋದಿಲ್ಲ..ಈ ನಡುವೆ ಕಷ್ಟ ಎಂದು ಹೇಳಿಕೊಂಡು ಠಾಣೆಗೆ ಬಂದವರನ್ನು ಕೂರಿಸಿ ಮಾತನಾಡಿಸೋದೇ ಕಷ್ಟ..ಇಂತಹ ಸನ್ನಿವೇಶದಲ್ಲಿ ಇಲ್ಲೊಬ್ಬ ಹೆಡ್ ಕಾನ್ ಸ್ಟೇಬಲ್ ಈ ಮಾತಿಗೆ ಅಪವಾದವೆಂಬಂತೆ ಇದ್ದು, ಜನರ ಮನ್ನಣೆಗೆ ಪಾತ್ರರಾಗಿದ್ದಾರೆ… ಅಲ್ಲದೇ ಅವರ ಪ್ರಾಮಾಣಿಕತೆಗೆ 2025-2026 ರ ಕಮೆಂಡೇಶನ್ ಪದಕ ಸಿಕ್ಕಿದೆ. ಹೌದು.ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಜೆ.ಎಂ.ಮಂಜುನಾಥ್ ಗೆ “Director General of…
ದಾವಣಗೆರೆ : ಪ್ರಿಯ ಓದುಗರೇ, ಬರ ಬರುತ್ತಾ ಪತ್ರಿಕೆಗಳ ಮೇಲೆ ಇದ್ದ ನಂಬಿಕೆ ನಿಧಾನವಾಗಿ ಕಾಣೆಯಾಗುತ್ತಿದೆ….ಅದಕ್ಕೂ ಕಾರಣವೂ ಇದೆ..ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಇದ್ದ ಬೆಲೆ ಮನುಷ್ಯನಿಗೆ ಇಲ್ಲ ಎಂಬುದಕ್ಕೆ ದಾವಣಗೆರೆ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಸುದ್ದಿಯೊಂದು ಬಿತ್ತಾರವಾಗಿರೋವುದೇ ಸಾಕ್ಷಿ.. ಹೌದು…ನಾನೊಬ್ಬ ಓದುಗನಾಗಿ ಪ್ರತಿಷ್ಠಿತ ಪತ್ರಿಕೆಯೊಂದರ ಸಂಪಾದಕರಿಗೆ ಪ್ರಶ್ನೆಯೊಂದು ಕೇಳುತ್ತಿದ್ದೇನೆ… ಸಾಮಾನ್ಯವಾಗಿ ಮನೆ ಮುಂದೆ ನಾಯಿ ಇದೆ ಎಚ್ಚರಿಕೆ ಎಂಬ ಬೋರ್ಡ್ ನೋಡಿದ್ದೇವೆ..ಆದರೀಗ ನಾಯಿ ಕಾಣೆಯಾದ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ನೋಡಬೇಕಾದ ಸ್ಥೀತಿ ಇದೆ. ಇದು ಯಾಕಾಗಿ? ನಮ್ಮ ದಾವಣಗೆರೆಯ ಮೊದಲ ಪೇಜ್ ನಲ್ಲಿ ನಾಯಿ ಕಾಣೆಯಾಗಿದೆ ಎಂಬ ಬಗ್ಗೆ ಸುದ್ದಿಯೊಂದನ್ನು ಪ್ರಕಟಿಸಿದ್ದೀರಿ..ಈ ಬಗ್ಗೆ ನನ್ನದೇನೂ ತಕರಾರು ಇಲ್ಲ…ಆದರೆ ಮನುಷ್ಯರು, ಅದರಲ್ಲಿ ವಯೋ ವೃದ್ಧರು, ಮಕ್ಕಳು, ಯುವತಿಯರು ಕಾಣೆಯಾದರೆ ಯಾಕೆ ಪೋಟೋ ಹಾಕಿ ಸುದ್ದಿ ಮಾಡೋದಿಲ್ಲ? ಇದನ್ನು ಜಾಹೀರಾತು ರೂಪದಲ್ಲಿ ತೆಗೆದುಕೊ ಳ್ಳಬಹುದಿತ್ತು..ಆದರೆ ಮೊದಲ ಪೇಜ್ ನಲ್ಲಿ ನಾಯಿ ಪೋಟೋ ಹಾಕಿ ಪೋನ್ ನಂಬರ್ ಬಿತ್ತರಿಸಿ ಸುದ್ದಿ ಮಾಡಿರುವ ಉದ್ಧೇಶವಾದರೂ ಏನು?ಇದರಲ್ಲಿ ನಿಮ್ಮ ವೈಯಕ್ತಿಕ…
ನಂದೀಶ್ ಭದ್ರಾವತಿ ಶಿವಮೊಗ್ಗ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾಕ್ಕೆ ಜಿಲ್ಲಾ ಯುವ ಘಟಕವನ್ನು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇಮಕ ಮಾಡಿದ್ದು, ಸಂಘಟನೆಗೆ ಆನೆ ಬಲ ಬಂದಂತೆ ಆಗಿದೆ. ಶಿವಮೊಗ್ಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಸಚಿನ್ ಎನ್.ಪೂಜಾರ್, ಉಪಾಧ್ಯಕ್ಷರಾಗಿ ನಂದೀಶ್ ಶಿಕಾರಿಪುರ, ಧೃವ ಕುಮಾರ್ ಶಿವಮೊಗ್ಗ, ಶಶಾಂಕ್ ಪಾಟೀಲ್ ಸೊರಬ, ಏಕನಾಥ್ ಭದ್ರಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಸಿ. ಪಾಟೀಲ್ ಶಿವಮೊಗ್ಗ, ಕಾರ್ಯದರ್ಶಿಗಳಾಗಿ ಸುಹಾಸ್ ಪಿ.ಆರ್., ಅವಿನಾಶ್ ಬಿ.ಆರ್., ಅಮೋಘ ಸಜ್ಜನ್ ಶಿವಮೊಗ್ಗ, ಚಂದನ್ ಟಿ.ಎಸ್. ತೀರ್ಥಹಳ್ಳಿ, ಖಜಾಂಚಿಯಾಗಿ ರಾಕೇಶ್ ಎಂ.ಆರ್. ಅವರೊಂದಿಗೆ 20 ನಿರ್ದೇಶಕರ ನೇಮಕ ಮಾಡಿರು ವುದಾಗಿ ಜಿಲ್ಲಾಧ್ಯಕ್ಷರಾದ ರುದ್ರ ಮುನಿ ಸಜ್ಜನ್ ತಿಳಿಸಿದ್ದು, ಯುವ ನೇತಾರ್ ಸಚಿನ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಮಹಾಸಭಾ ಹಲವು ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು ಬರಲಿರುವ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಉಪಯುಕ್ತ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಸಚಿನ್ ಹೇಳುತ್ತಾರೆ. ಮಹಾಸಭಾವನ್ನು ಎಲ್ಲಾ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಲು…
ಭದ್ರಾವತಿ : ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ ಜಿದ್ದಾಜಿದ್ದಿಯಲ್ಲಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಸುರೇಶ್ ಮರು ನೇಮಕವಾದರು. ಭದ್ರಾವತಿಯಲ್ಲಿ ಸಾಮಾನ್ಯವಾಗಿ ಚುನಾವಣೆ ಬಂತು ಅಂದ್ರೆ ಸಾಕು ಅದರ ಜಿದ್ದಾಜಿದ್ದಿ ಜೋರು ಇರುವುದು ಕಾಮನ್ ಆಗಿದ್ದು, ಕಾಂಗ್ರೆಸ್ ಜೆಡಿಎಸ್ ಬೆಂಬಲಿಗರು ತಮ್ಮದೇ ತಂಡ ಕಟ್ಟಿ ಮತದಾರರ ಮನವೊಲಿಸಿದರು. ಆದರೆ ಅಂತಿಮವಾಗಿ ವಿಜಯದ ಲಕ್ಷ್ಮಿ ಸುರೇಶ್ ಗೆ ಒಲಿಯಿತು.. ಸುನೀಲ್ ಕೂಡ ಹೆಚ್ಚಿನ ಮತಗಳನ್ನು ತೆಗೆದುಕೊಂಡು ಸ್ಪರ್ಧೆ ಒಡ್ಡಿದ್ದರೂ ಸುರೇಶ್ ಜಯದ ಹಾದಿಯನ್ನು ಸವಿಸೋದಕ್ಕೆ ಆಗಲಿಲ್ಲ. ಸುರೇಶ್ 577 ಮತಗಳನ್ನು ಪಡೆದರೆ ಸುನೀಲ್ ಅಂದಾಜು 400 ಕ್ಕೂ ಹೆಚ್ಚು ಮತಗಳನ್ನು ಪಡೆದರು. ಅಂತಿಮವಾಗಿ ಮತದಾನದ ವಿವರ ಸರಿಯಾದ ಮಾಹಿತಿ ಬರಬೇಕಿದೆ. ನಗರದ ಜೆಟಿಎಸ್ ಶಾಲೆಯಲ್ಲಿ ಮತದಾನ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ನೇರ ಪೈಪೋಟಿ ಇತ್ತು. ಸುರೇಶ್ ಹಾಗೂ ಸುನಿಲ್ ಸ್ಪರ್ಧಾಳುಗಳಾಗಿದ್ದರು.. ಈ ನಡುವೆ ಸುರೇಶ್ ಎರಡು ಬಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದು, ಈ ಬಾರಿ ಪುನಃ ಪುನರಾಯ್ಕೆಗೆ ಸ್ಫರ್ಧೆ ಮಾಡಿದ್ದರು. ಇನ್ನು ಪ್ರತಿಸ್ಫರ್ಧಿ ಸುನೀಲ್…
ನಂದೀಶ್ ಭದ್ರಾವತಿ, ದಾವಣಗೆರೆ ಅದೊಂದು ರಾತ್ರಿ ಇಡೀ ಚನ್ನಗಿರಿ ಪಟ್ಟಣ ಹೊತ್ತು ಉರಿಯುತ್ತಿತ್ತು, ಪೊಲೀಸ್ ಠಾಣೆಯನ್ನೇ ಕಿಡಿಗೇಡಿಗಳು ಧ್ವಂಸ ಮಾಡಿದ್ದರು..ನಗರದಲ್ಲಿ ಪ್ರಕ್ಷುಬ್ಧ ವಾತಾವರಣ. ಇಲ್ಲಿನ ಗಲಾಟೆ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ನಡುವೆ ಒಬ್ಬ ಮಹಿಳಾ ಅಧಿಕಾರಿಯಾಗಿ ಎಸ್ಪಿ ಉಮಾಪ್ರಶಾಂತ್ ರಾತ್ರೋ ರಾತ್ರಿ ಪಟ್ಟಣಕ್ಕೆ ನುಗ್ಗಿ ಕಿಡಿಗೇಡಿಗಳನ್ನು ಮಟ್ಟ ಹಾಕಿದರು. ಎಲ್ಲ ಕಡೆ ಸೂಕ್ತ ಬಂದೋ ಬಸ್ತ್ ಮಾಡಿ ಶಾಂತಿ ನೆಲೆಸುವಂತೆ ಮಾಡಿದರು.. ಇನ್ನು ದಾವಣಗೆರೆ ದಕ್ಷಿಣದಲ್ಲಿ ಗಣಪತಿ ವಿಸರ್ಜನೆ ವೇಳೆ ಆದ ಕೋಮು ಗಲಾಟೆಯಲ್ಲಿ ಎಸ್ಪಿ ಉಮಾಪ್ರಶಾಂತ್ ಸ್ವತಃ ಲಾಠಿ ಹಿಡಿದು ಕಿಡಿಗೇಡಿಗಳನ್ನು ಮಟ್ಟ ಹಾಕಿದರು. ದಾವಣಗೆರೆ ವೆಂಕಾ ಭೋವಿ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಅಲ್ಲದೇ ಯಾವುದೇ ಸಮಸ್ಯೆಗೆ ಅವಕಾಶ ಕೊಡದೆ ಕಠಿಣ ಕ್ರಮ ತೆಗೆದುಕೊಂಡಿದ್ದರು. ಹೀಗಾಗಿ ಬೆಣ್ಣೆನಗರಿ ದಾವಣಗೆರೆ ಸಹಜ ಸ್ಥಿತಿಗೆ ಮರಳಿತ್ತು.ದಾವಣಗೆರೆ ನಗರದಲ್ಲಿ ಶಾಂತಿ ನೆಲೆಸುವಲ್ಲಿ ಪೊಲೀಸರ ಕಾರ್ಯವೈಖರಿ…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🕉️ದ್ವಾದಶ ರಾಶಿಗಳ ದಿನ ಭವಿಷ್ಯ#ತಾರೀಕು#20/05/2025 ಮಂಗಳವಾರ🕉️* *01,✨ಮೇಷ ರಾಶಿ✨* 📖,ಆರ್ಥಿಕ ಪರಿಸ್ಥಿತಿ ನಿಧಾನವಾಗಿದ್ದರೂ , ನಿಮ್ಮ ಅಗತ್ಯಗಳಿಗೆ ಹಣ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳ ಕುರಿತು ಚರ್ಚೆಗಳು ಯಶಸ್ವಿಯಾಗುತ್ತವೆ. ಆತ್ಮೀಯರಿಂದ ವಿವಾದಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಸ್ವೀಕರಿಸುತ್ತೀರಿ. ಕೈಗೊಂಡ ಕೆಲಸಗಳಲ್ಲಿ ವಿಳಂಬವಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ, *02,✨ವೃಷಭ ರಾಶಿ✨* 📖,ಕುಟುಂಬ ಸದಸ್ಯರು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುತ್ತಾರೆ . ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಇತರರೊಂದಿಗೆ ವಿನಾಕಾರಣ ವಿವಾದಗಳು ವಿವಾದಗಳು ಉದ್ಭವಿಸುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಬೆಲೆಬಾಳುವ ವಸ್ತುಗಳನ್ನು ನಿರ್ವಹಿಸುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು. ಆರ್ಥಿಕ ನಷ್ಟದ ಸೂಚನೆಗಳಿವೆ, *03,✨ಮಿಥುನ ರಾಶಿ✨* 📖,ಪಿತೃಪ್ರಧಾನ ಕುಟುಂಬದೊಂದಿಗೆ ವಿವಾದಗಳು ಉಂಟಾಗುತ್ತವೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ನೋವುಂಟುಮಾಡುತ್ತವೆ. ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಇರುತ್ತವೆ. ವೃತ್ತಿಪರ ಮತ್ತು ವ್ಯವಹಾರಗಳಲ್ಲಿ ಮಿಶ್ರ ವಾತಾವರಣವಿರುತ್ತದೆ.…