ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ ಹಮ್ಮಿಕೊಂಡ ವೇಳೆ ಸಮುದಾಯದ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆದಿದೆ.
ದಲಿತ ಮಹಾಸಭಾ ಸಂಘಟನೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತಹ ಕಾರಜೋಳ ಕೊಠಡಿಗೆ ನೇರವಾಗಿ ಬಂದರು. ಈ ಸಂದರ್ಭದಲ್ಲಿ ಮಾತನಾಡಿದಂತಹ ಪದಾಧಿಕಾರಿಗಳು, ಬಿಜೆಪಿ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ದಲಿತರಿಗೆ ನೀವು ಅನ್ಯಾಯ ಮಾಡಿದ್ದೀರಾ. ಸಮುದಾಯದ ಮುಖಂಡರಾಗಿ ಸಮುದಾಯಕ್ಕೆ ಕೊಡುಗೆ ಏನನ್ನು ನೀವು ನೀಡಿಲ್ಲ ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ಬಳಿಕ ಮಾಜಿ
ಸಚಿವ ಕಾರಜೋಳ ಹಾಗೂ ಸಮುದಾಯದ ಮುಖಂಡರು ವಾದ-ಪ್ರತಿವಾದ ಮಂಡಿಸಿದರು.
ಹಲ್ಲೆಗೆ ಯತ್ನ, ಬಂಧಿಸಲು ಆಗ್ರಹ
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನನ್ನ ಮೇಲೆ ಹಲ್ಲೆ ಮಾಡಲು ಬಂದಂತಹ ವ್ಯಕ್ತಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಗೋವಿಂದ್ ಕಾರಜೋಳ ಎಚ್ಚರಿಸಿದರು.