ರಾಜ್ಯದ ಸೇವಾವಲಯದಲ್ಲಿ 20,000 ಹುದ್ದೆಗಳು ಖಾಲಿ.
ಬೆಂಗಳೂರು.
ರಾಜ್ಯದಲ್ಲಿ 20 ಸಾವಿರ ಸರ್ಕಾರಿ ಹುದ್ದೆಗಳು ಭರ್ತಿಯಾಗದೇ ಇರುವ ಕಾರಣ ಇರುವರಿಗೆ ಒತ್ತಡ ಹೆಚ್ಚಾಗುತ್ತಿದ್ದು, ಜನರಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಇದರಿಂದ ನಾಗರಿಕರು ಹಲವು ಸೇವೆಗಳಲ್ಲಿ ವಿಳಂಬ ಎದುರಿಸಬೇಕಾಗಿದೆ. ಅಂಕಿಅAಶಗಳ ಪ್ರಕಾರ, ಆಡಳಿತದಲ್ಲಿನ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಭರ್ತಿಯಾಗದೇ ಬಾಕಿ ಉಳಿದಿದೆ.
ರಾಜ್ಯದಲ್ಲಿ 7.72 ಲಕ್ಷ ಸರ್ಕಾರಿ ಉದ್ಯೋಗಗಳು ಮಂಜೂರಾಗಿವೆ. ಅವುಗಳಲ್ಲಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಳೆದ ವರ್ಷ ಖಾಲಿ ಹುದ್ದೆಗಳ ಸಂಖ್ಯೆ 2.55 ಲಕ್ಷವಿತ್ತು. ಕಾಂಗ್ರೆಸ್ ತನ್ನ 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಒಂದು ವರ್ಷ ಏಳು ತಿಂಗಳಾದರೂ, ಹುದ್ದೆಗಳ ಭರ್ತಿವಿಲ್ಲವಾಗಿದೆ.
ಗ್ಯಾರಂಟಿಗೆ ಹಣ
ಹಣಕಾಸು ಇಲಾಖೆಯ ಪ್ರಕಾರ, “ಕೇಸ್-ಟು-ಕೇಸ್” ಆಧಾರದ ಮೇಲೆ ನೇಮಕಾತಿಗೆ ಅನುಮತಿ ನೀಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಆಡಳಿತವು ಗ್ಯಾರಂಟಿ ಯೋಜನೆಗಳಿಗೆ ಹಣ ಹಾಕುತ್ತಿರುವುದರಿಂದ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಇದುವರೆಗೆ ಗ್ಯಾರಂಟಿಗೆ 63,000 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿರುವ ಕಾರಣ ತೊಂದರೆಯಾಗಿದೆ.
ಹೊರ ಗುತ್ತಿಗೆ
ಖಾಲಿ ಹುದ್ದೆಗಳು ಹೆಚ್ಚಿರುವ ಕಾರಣ ಹೊರಗುತ್ತಿಗೆ ನೀಡಲಾಗುತ್ತಿದೆ. 96, 000 ಸಿ ಗ್ರೂಪ್, ಡಿ ಉದ್ಯೋಗಿಗಳು, ಸೈನೋಗ್ರಾಫರ್, ಟೈಪಿಸ್ಟ್, ಡ್ರೈವರ್?ಗಳು ಇತ್ಯಾದಿಯನ್ನು ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ನವೆಂಬರ್ 2022 ರಲ್ಲಿ, ಆಗಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದೊಳಗೆ ಒಂದು ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು, ಅದು ಕೂಡ ಸಾಧ್ಯವಾಗಲಿಲ್ಲ. ಇನ್ನು ಅಭಿವೃದ್ಧಿ ವೆಚ್ಚಗಳು ತುಲನಾತ್ಮಕವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಆಡಳಿತಾತ್ಮಕ ವೆಚ್ಚಗಳು ಹೆಚ್ಚುತ್ತಿವೆ. ಇನ್ನು “ಕೆಲವು ಇಲಾಖೆಗಳಿಗೆ ನೇಮಕಾತಿ ಅಗತ್ಯವಿದ್ದರೂ, ಹುದ್ದೆಗಳು ಭರ್ತಿಯಾಗಿಲ್ಲ. ಇನ್ನು ಕೆಲ ಇಲಾಖೆಗಳಲ್ಲಿ ಕೆಲಸದ ಹೊರೆ ಇಲ್ಲದೇ ಹೋದರು ಅವರನ್ನು ಅನಾವಶ್ಯಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಬಗ್ಗೆಯೂ ಸರಕಾರ ಯೋಚಿಸಬೇಕಿದ್ದು, ಮುಂದಿನ ದಿನಗಳಲ್ಲಾದರೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಾ ಎಂದು ಕಾದು ನೋಡಬೇಕಿದೆ.
———————————-
”ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವುದು ಜನರಿಗೆ ಮನೆ ನಿರ್ಮಿಸಲು ಅವಶ್ಯಕವಾಗಿದೆ. ಅವರು ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಉಡುಪಿಯಲ್ಲಿ ಇದಕ್ಕೆ ಇಬ್ಬರು ನೌಕರರು ಮಾತ್ರ ಇದ್ದಾರೆ, ವಿಲೇವಾರಿ ಮಾಡಲು ಸ್ಥಳ ಭೇಟಿ ಮಾಡಲು ಯಾವುದೇ ಮಾರ್ಗವಿಲ್ಲ. ಅಪ್ಲಿಕೇಶನ್ಗಳು, 2,000 ರೂಪಾಯಿಗಳ ಸೇವೆಯು ಈಗ 25,000 ರೂಪಾಯಿಗಳಿಗೆ ನಡೆಯುತ್ತಿದೆ ಶೇ.65ರಷ್ಟು ಸಿಬ್ಬಂದಿ ಕೊರತೆಯಿಂದ ಕೃಷಿ ಇಲಾಖೆಯಲ್ಲೂ ಸಾಕಷ್ಟು ತೊಂದರೆಯಾಗುತ್ತಿದೆ. – ಸುನೀಲ್ಕುಮಾರ್,, ಕಾರ್ಕಳ ಬಿಜೆಪಿ ಶಾಸಕ
———————————–
ಸಿಬ್ಬಂದಿಗಳ ಅಂಕಿ ಸಂಖ್ಯೆ
ಗ್ರೂಪ್ ಹುದ್ದೆಗಳ ನೇಮಕಾತಿ ಸಂಖ್ಯೆ 2023-24 (ಖಾಲಿಹುದ್ದೆ) 2024-2025 (ಖಾಲಿ ಹುದ್ದೆ)
ಗ್ರೂಪ್ಎ 40,988 14,663 16,017
ಗ್ರೂಪ್ ಬಿ 45,321 16,627 16,734
ಗ್ರೂಪ್ ಸಿ 5,77,137 149873 1,66021
ಗ್ರೂಪ್ಡಿ 1,08,579 74,757 77,614
ಒಟ್ಟು 7,72,025 2,55,920 2,76,386
—————————
ಹೆಚ್ಚು ಹುದ್ದೆಗಳು ಖಾಲಿ ಎಲ್ಲಿ
ಶಿಕ್ಷಣ-70,727
ಆರೋಗ್ಯ ಇಲಾಖೆ-37,069
ವಸತಿ ಇಲಾಖೆ-26,168
ಉನ್ನತ ಶಿಕ್ಷಣ-13,227
ಕಂದಾಯ-11,145