ದಾವಣಗೆರೆ : ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದಲ್ಲಿ ಹುಟ್ಟಿದ ಮಗನೊಬ್ಬ ಇಂದು ಮೂರನೇ ತಲೆಮಾರಿನ ನಾಯಕನಾಗಿ ಬೆಳೆಯುತ್ತಿದ್ದು, ಬಿಜೆಪಿ ಭದ್ರಕೋಟೆಯಾಗಿದ್ದ ಊರಲ್ಲಿ ಮತ್ತೆ ಕಮಲ ಅರಳಿಸೋದಕ್ಕೆ ನಿಂತಿದ್ದಾರೆ.
ಹೌದು…ದಾವಣಗೆರೆಯಲ್ಲಿ ತನ್ನ ತಾತ ಎಂ.ಪಿ.ಮಲ್ಲಿಕಾರ್ಜುನಪ್ಪರ ಹಾದಿಯಲ್ಲಿ ನಡೆಯುತ್ತಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರ ಜಿ.ಎಸ್.ಅನಿತ್ ಈ ಕಥಾಹಂದರದ ನಾಯಕ. ಜಿ.ಎಸ್.ಅನಿತ್ ಅಂದ್ರೆ ಸಾಕು, ಮೃದು ಸ್ವಭಾವದವರು, ಹೆಚ್ಚಿಗೆ ಮಾತಿಲ್ಲ, ಯಾವುದಕ್ಕೂ ಕೌಂಟರ್ ಕೊಡೋದಕ್ಕೆ ಹೋಗೋದಿಲ್ಲ..ತಾಳ್ಮೆಯಿಂದಲೇ ಎಲ್ಲರ ಮನಗೆಲ್ಲುತ್ತಾರೆ..ಅದರಲ್ಲೂ ತನ್ನ ಎದುರಾಳಿಗೆ ಮೌನದಿಂದಲೇ ಉತ್ತರ ನೀಡುತ್ತಾರೆ. ಈ ನಡುವೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಅನಿತ್ ಮತ್ತೆ ದಾವಣಗೆರೆಯಲ್ಲಿ ಕಮಲ ಅರಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ.
ತಾತನ ಹಾದಿಯಲ್ಲಿ ನಡೆಗೆ
ದಾವಣಗೆರೆ ಒಂದಾನೊಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆ, ಆ ಕೋಟೆಯಲ್ಲಿ ತಾತ ಎಂ.ಪಿ.ಮಲ್ಲಿಕಾರ್ಜುನ್ ಸಾಕಷ್ಟು ಕೆಲಸ ಮಾಡಿದ್ದರು..ಅಲ್ಲದೇ ಸಾಮಾಜಿಕವಾಗಿಯೂ ಅವರಿಂದಷ್ಟು ಕೆಲಸ ಮಾಡಿದ್ದಾರೆ. ಈಗ ಅನಿತ್ ಕೂಡ ತಾತನ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ.ಎಲ್ಲಿಯೂ ಪ್ರಚಾರವಿಲ್ಲದೇ ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ.ತಂದೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ರಾಜಕಾರಣದಲ್ಲಿ ಜಿ.ಎಸ್.ಅನಿತ್ ತಮ್ದೇ ಪಾತ್ರವಹಿಸಿದ್ದಾರೆ. ಕ್ಷೇತ್ರದಲ್ಲಿನ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸತತ ಮೂರು ಬಾರಿ ಸೋಲಿಸಲು ಇವರು ಕೂಡ ಪ್ರಮುಖ ಕಾರಣರಾಗಿದ್ದಾರೆ.
ಮಾನವೀಯತೆ
ಅನಿತ್ ಗೆ ಕೈಗಾರಿಕೋದ್ಯಮದಲ್ಲಿ ಹೆಚ್ಚು ಅನುಭವವಿರುವ ಕಾರಣ ಪಕ್ಷದ ಕೆಲಸದ ಜತೆ ಅನೇಕ ಪ್ರವೃತ್ತಿಗಳನ್ನು ಮೈಗೂಡಿಸಿದ್ದಾರೆ. ಮಾನವೀಯತೆಯನ್ನು ಅಪಾರವಾಗಿ ಪ್ರೀತಿಸಿ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಓರ್ವ ಅಪ್ಪಟ ಸಮಾಜ ಸೇವಕ ಮತ್ತು ಪರಿಸರ ಪ್ರೇಮಿ ಹಾಗೂ ವಿದ್ಯಾದಾನಿ ಕೂಡ ಅನಿತ್ ಆಗಿದ್ದಾರೆ.
ಸರಕಾರಿ ಶಾಲೆ ಮಕ್ಕಳು ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನಕ್ಕಾಗಿ ಧನ ಸಹಾಯ ಮಾಡಿದ್ದಾರೆ. ದೊಡ್ಡ, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ ಉತ್ತೇಜನ ಸೇರಿದಂತೆ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಪಡಿಸುವ ಅಗಾಧ ಅನುಭವ ಅನೀತ್ ಗೆ ಇದೆ.
ಬಿಜೆಪಿಗೆ ಹಿಂಭಾಗಿಲಿನಿಂದ ಕೆಲಸ
ಅಪ್ಪಟ ಬಿಜೆಪಿ ಕಾರ್ಯಕರ್ತರಾಗಿರುವ ಜಿ.ಎಸ್. ಅನಿತ್ ಬಿಜೆಪಿಗೆ ಹಿಂಭಾಗಲಿನಿಂದ ಕೆಲಸ ಮಾಡಿದ್ದಾರೆ. ಅಲ್ಲದೇ ದಾವಣಗೆರೆ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಇವರ ಪಾತ್ರ ಕೂಡ ಪ್ರಮುಖ ಪಾತ್ರವಹಿಸುತ್ತದೆ.
ಲೋಕಸಭೆ ಚುನಾವಣೆಯಲ್ಲಿ ತಾಯಿ ಗೆಲ್ಲಿಸಲು ಶ್ರಮ
ಲೋಕಸಭೆ ಚುನಾವಣೆಯಲ್ಲಿ ತಾಯಿ ಗಾಯಿತ್ರಿ ಸಿದ್ದೇಶ್ವರ ಗೆಲ್ಲಿಸಲು ಜಿ.ಎಸ್.ಅನಿತ್ ಪ್ರಮುಖ ಪಾತ್ರವಹಿಸಿದ್ದಾರೆ. ತಾತನ ಕಾಲದಿಂದಲೂ ರಾಜಕೀಯವಾಗಿ ಅನುಭವ ಇರುವ ಅನಿತ್ ತಾಯಿ ಗೆಲ್ಲಿಸಲು ಸಾಕಷ್ಟು ತಂತ್ರಗಳನ್ನು ಹೂಡಿದ್ದರು.
ಬಿಜೆಪಿ ಕಟ್ಟಲು ಶ್ರಮ
ದಾವಣಗೆರೆ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆ ಆಗಿತ್ತು. ಆದರೆ ಕಳೆದ 15 ವರ್ಷಗಳಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತ ಬಂದಿದ್ದು, ಕಾಂಗ್ರೆಸ್ ಭದ್ರ ಕೋಟೆ ಎನ್ನುವ ಹೆಸರು ಮರೀಚಿಕೆ ಆಗಿತ್ತು..ಇದಕ್ಕೆ ತಂದೆ ಜಿ.ಎಂ.ಸಿದ್ದೇಶ್ವರ ಕಾರಣರಾಗಿದ್ದು, ತಂದೆ ಜತೆ ಸೇರಿ ರಾಜಕೀಯ ಚಾಕುಕ್ಯತೆಯನ್ನು ಪಡೆದುಕೊಂಡ ಅನೀತ್ ಸದ್ಯ ದಾವಣಗೆರೆಯಲ್ಲಿ ಬಿಜೆಪಿ ಕಟ್ಟಲು ಶ್ರಮ ಪಡುತ್ತಿದ್ದಾರೆ.
ಸಂಘ ಪರಿವಾದ ಕಟ್ಟಾಳು
ವಿದ್ಯಾರ್ಥಿ ಜೀವನದಿಂದಲೂ ಸಂಘ ಪರಿವಾರದೊಂದಿಗೆ ಜಿ.ಎಸ್.ಅನಿತ್ ನಂಟು ಹೊಂದಿದ್ದಾರೆ. ಸಂಘದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಶಿಸ್ತು ಅವರ ಅವಿಭಾಜ್ಯ ಅಂಗವಾಗಿದ್ದು, ಭಾರತೀಯ ಪರಂಪರೆ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸರಳ ಜೀವಿ
ಕೋಟಿಗಟ್ಟಲೇ ಆಸ್ತಿ ಇದ್ದರೂ ಜಿ.ಎಸ್.ಅನಿತ್ ಸರಳ ಜೀವಿ, ಯಾವಾಗಲೂ ಸರಳವಾಗಿಯೇ ಇರುತ್ತಾರೆ. ಮನೆಗೆ ಬಂದ ಕಾರ್ಯಕರ್ತರನ್ನು ಗೌರವಯುತವಾಗಿ ನೋಡುವುದು ಇವರ ಗುಣ
ಬೇಕಿದೆ ರಾಜಕೀಯ ಸ್ಥಾನ
ಜಿ.ಎಸ್.ಅನಿತ್ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಿದ್ದು, ಬಿಜೆಪಿಯಲ್ಲಿ ಯಾವುದೇ ಸ್ಥಾನ ನೀಡಿಲ್ಲ. ಆದ್ದರಿಂದ ಅವರಿಗೆ ರಾಜಕೀಯ ಸ್ಥಾನ ಮಾನ ಸಿಗಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಅಜಾತ ಶತ್ರು
ಶ್ರೀ ಗುರು ದೈವದ ಧರ್ಮ ಭಕ್ತಿಯ ಬೀರುತ್ವ. ತಾತನ ಅಜಾತಶತ್ರು ವ್ಯಕ್ತಿತ್ವದ ಗುಣಾತ್ಮಕತೆ. ಅಪ್ಪನ ಪ್ರಾಮಾಣಿಕತೆ, ಚಿಕ್ಕಪ್ಪಂದಿರ ವಿನಯ ಕೌಶಲ್ಯತೆ. ಕುಟುಂಬಸ್ಥರ ಪ್ರೀತಿ ಗೌರವ ಹಂಚುವ ವೈಶಾಲ್ಯತೆ. ಹುಟ್ಟು ಶ್ರೀಮಂತಿಕೆಯ ಸೋಂಕಿರದ ಹೃದಯ ಶ್ರೀಮಂತಿಕೆಯ ಸರಳತೆ. ಭೀಗದೆ ಬಾಗುವ ಸಂಸ್ಕೃತಿಯ ಬಾಷ್ಪಶೀಲ ಸ್ಫೂರ್ತಿ. ನೊಂದವರಿಗೆ ಸಾಂತ್ವನ ಸೈರಣಾ ಗುಣಗಳ ಸಂಗಮ ಜಿ.ಎಸ್.ಅನೀತ್
…
ಸೆ.28 ಕ್ಕೆ ಜಿ.ಎಸ್. ಅನಿತ್ ಹುಟ್ಟು ಹಬ್ಬ ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಸಮಾಜದ ಹೆಮ್ಮೆಯ ಪುತ್ರ, ಭವಿಷ್ಯದ ಆಶೋತ್ತರಗಳ ನವ ಚಿಂತಕರಾಗಿದ್ದು ಸೆ.28 ಕ್ಕೆ ಅವರ ಹುಟ್ಟು ಹಬ್ಬ ನೆರವೇರಲಿದೆ. ಶ್ರೀ ಗುರು ದೈವಾನುಗ್ರಹ ಸಂಪನ್ನವಾದ ಆಶೀರ್ವಾದವು ಸದಾ ನಿಮ್ಮೊಂದಿಗಿದ್ದು, ಭವಿತವ್ಯದಿ ಉತ್ಕೃಷ್ಟ ಸ್ಥಾನಗಳು ಸಂಪ್ರೀತವಾಗಲೆಂಬ ಮನದುಂಬಿ ಜನ ಹಾರೈಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
…
ಕೋಟ್
ನಮ್ಮ ಸಾಹೇಬ್ರದ್ದು ವಿಶಾಲವಾದ ಹೃದಯ, ಯಾರೇ ಬಂದರೂ ಗೌರವಯುತವಾಗಿ ಕಾಣುತ್ತಾರೆ. ಗೊತ್ತಿಲ್ಲದೇ ಸಾಕಷ್ಟು ಸಹಾಯ ಮಾಡುತ್ತಾರೆ. ಕಷ್ಟ ಅಂದವರಿಗೆ ಕೈ ಬಿಡೋದಿಲ್ಲ…ಹ್ಯಾಪಿ ಬರ್ತಡೇ ಸರ್.
-ಅಭಿ, ಜಿ.ಎಸ್.ಅನಿತ್ ಮಾಧ್ಯಮ ಸಲಹೆಗಾರ