ನಂದೀಶ್ ಭದ್ರಾವತಿ, ದಾವಣಗೆರೆ
ಆಕೆಗೆ ಇನ್ನೂ ನಾಲ್ಕು ವರ್ಷ, ಆದರೆ ಈ ವಯಸ್ಸಿಗೆ ತನ್ನ ಚಾಣಾಕ್ಷಣತನದಿಂದ ಕೊಲೆಗಾರನನ್ನು ಹಿಡಿದು ಎಡೆಮುರು ಕಟ್ಟುವಲ್ಲಿ ಯಶಸ್ವಿಯಾಗಿದ್ದಾಳೆ. ಅಲ್ಲದೇ ಒಂದು ಜೀವ ಉಳಿಸುವಲ್ಲಿ ಆಕೆಯ ಪಾತ್ರ ಕೂಡ ತುಂಬಾ ಇದೆ.
ಅಷ್ಟಕ್ಜೂ ನಾವು ಹೇಳೋದಕ್ಕೆ ಹೊರಟಿರುವುದು ಯಾವುದೋ ಹೆಣ್ಣಿನ ಕಥೆಯಲ್ಲಿ ಪೊಲೀಸ್ ನಾಯಿಯ ಕಥೆ…ತುಂಗಾ-2 ಈ ಕಥೆಯ ಪಾತ್ರಾಧಾರಿ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿದ್ದ ತುಂಗಾ-1 ಇದೇ ಚನ್ನಗಿರಿ ತಾಲೂಕಿನಲ್ಲಿ16 ಕಿ.ಮೀ.ಓಡಿ ಗುಡ್ಡದಲ್ಲಿ ಬಿಸಾಡಿದ್ದ ಶವವನ್ನು ಹಿಡಿದಿತ್ತು. ಈಗ ತುಂಗಾ 2 ಸಂತೆಬೆನ್ನೂರಿನ ಕೊಲೆ ಪ್ರಕರಣವನ್ನು ಕೊಲೆಯಾದ 6 ಗಂಟೆಯೊಳಗೆ ಎಂಟು ಕಿ.ಮೀ.ಓಡಿ ಹಿಡಿದಿದೆ.
ದಾವಣಗೆರೆಯಲ್ಲಿ ಎಸ್ಪಿ ಉಮಾಪ್ರಶಾಂತ್ ಹೇಗೆ ಲೇಡಿ ಸಿಂಗಂ ಖ್ಯಾತಿ ಪಡೆದಿದ್ದಾರೆಯೋ, ಹಾಗೆಯೇ ಕೊಲೆಗಾರನನ್ನು ಹಿಡಿಯುವಲ್ಲಿ ತುಂಗಾ 2 ಕೂಡ ಚೇಸಿಂಗ್ ನಲ್ಲಿ ಪಂಟರ್ ಆಗಿದೆ.
ಅಂದ ಹಾಗೆ ಈ ಕಥೆ ಶುರುವಾಗುವುದೇ ಒಂದು ಕೊಲೆ ಪ್ರಕರಣದ ಮೂಲಕ…ಚನ್ನಗಿರಿ ತಾಲೂಕಿನ ಸಂತಬೆನ್ನೂರಿನ ಬಾಡಾ ರಸ್ತೆಯ ಪೆಟ್ರೋಲ್ ಬಂಕ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 9:30 ಗಂಟೆ ಸಮಯದಲ್ಲಿ ಒಬ್ಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಗ ಇದೇ ರಸ್ತೆಯಲ್ಲಿಯೇ ಹೋಗುತ್ತಿದ್ದ 112 ಯಾರು ಬಿದ್ದಿರೋದನ್ನು ನೋಡಿದೆ. ಹತ್ತಿರ ಹೋಗಿ ನೋಡಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗುತ್ತದೆ ತಕ್ಷಣ 112 ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ತಿಳಿಸುತ್ತಾರೆ.
ಕೊಲೆಯಾದವನ ಜರ್ಕಿನ್ ವಾಸನೆ ಗ್ರಹಿಸಿದ ತುಂಗಾ 2
ತಕ್ಷಣ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಸಂತೋಷ್ ಡಿಎಸ್ಪಿ ಪ್ರಕಾಶ್ ಗೆ ಹೇಳಿ ತುಂಗಾ 2 ಳನ್ನು ಸ್ಥಳಕ್ಕೆ ಕಳಿಸುತ್ತಾರೆ. ಸ್ಥಳಕ್ಕೆ ಹ್ಯಾಂಡ್ಲರ್ ಶಫಿ ಜತೆ ಹೊರಟ ತುಂಗಾ ಕೊಲೆಯಾದ
ಜಾಗಕ್ಕೆ ಹೊರಡುತ್ತಾಳೆ. ಆಗ ಕೊಲೆಯಾದವನ ಜರ್ಕಿನ್ ವಾಸನೆಯನ್ನು ಹ್ಯಾಂಡ್ಲರ್ ಶಫಿ ನೀಡುತ್ತಾರೆ. ತಕ್ಷಣ ಕಾರ್ಯ ಪ್ರವೃತ್ತಳಾದ ತುಂಗಾ 2 ಕೊಲೆಗಾರ ಓಡಾಡಿದ ಜಾಗಕ್ಕೆಲ್ಲ ಹೊರಡುತ್ತದೆ. ಮಳೆಯಲ್ಲಿಯೇ ಹೊರಟ ತುಂಗಾ ಮೊದಲು ಬ್ಯೂಟಿ ಪಾರ್ಲರ್ ಅಂಗಡಿ ಮುಂದೆ ನಿಲ್ಲುತ್ತದೆ. ನಂತರ ಸಮೀಪದ ಚನ್ನಾಪುರಕ್ಕೆ ನಾಯಿ ಹೊರಡುತ್ತದೆ. ಅಲ್ಲಿ ಕೊಲೆ ಮಾಡಿದ್ದ ಗಂಡ ತನ್ನ ಹೆಂಡತಿ ಮೇಲೆ ಹಲ್ಲೆ ಮಾಡುತ್ತಿದ್ದ ಅದನ್ನು ತುಂಗಾ 2 ತಡೆದಿದೆ.
ಪತ್ನಿ ಅಕ್ರಮ ಸಂಬಂಧ ಹಿನ್ನೆಲೆ ಯುವಕನ ಕೊಲೆ.
ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಅನುಮಾನ ಗೊಂಡ ಪತಿ ಯುವಕನನ್ನು ನಡು ರಸ್ತೆಯಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಇದಾಗಿದೆ.
ಸಂತೆಬೆನ್ನೂರು ಗ್ರಾಮದ ಸಂತೋಷ್ 32 ಕೊಲೆಯಾದ ವ್ಯಕ್ತಿ. ಗ್ರಾಮದ ಬಾಡ ರಸ್ತೆಯ ಪೆಟ್ರೋಲ್ ಬಂಕ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 9:30 ಗಂಟೆ ಸಮಯದಲ್ಲಿ ಚನ್ನಾಪುರ ಗ್ರಾಮದ ರಂಗಸ್ವಾಮಿ ತನ್ನಪತ್ನಿಗೆ ಸಂತೋಷ್ ನೊಂದಿಗೆ ಹಲವಾರು ದಿನಗಳಿಂದ ಇದ್ದ ಅಕ್ರಮ ಸಂಬಂಧದ ಬಗ್ಗೆ ಅನುಮಾನಗೊಂಡು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಕೊಲೆ ಮಾಡಿದ ರಂಗಸ್ವಾಮಿಯನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪತ್ನಿಯ ಜೀವ ಉಳಿಸಿದ ಪೊಲೀಸ್ ಕಾರ್ಯಾಚರಣೆ :
112 ಪೊಲೀಸ್ ಕೊಲೆಯಾದ ಸ್ಥಳಕ್ಕೆ ಆಗಮಿಸಿ, ಮಾಹಿತಿ ಕಲೆ ಹಾಕಿ, ಕೊಲೆಗಾರನನ್ನು ಬೆನ್ನು ಹತ್ತಿದ್ದು, ಸಂತೋಷನನ್ನು ಕೊಲೆ ಮಾಡಿದ ರಂಗನಾಥ್ ತನ್ನ ಗ್ರಾಮದ ಚನ್ನಾಪುರ ಗ್ರಾಮಕ್ಕೆ ತೆರಳಿ ಪತ್ನಿ ರೂಪಗಳಿಗೆ ಚಾಕುವಿನಿಂದ ಕೈಗಳಿಗೆ ಇರಿದು ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆಗೆ 112 ಪೊಲೀಸ್ ಮನೆಯನ್ನು ಆವರಿಸಿ ರಂಗನಾಥನನ್ನು ಬಂದಿಸಿದ್ದಾರೆ. ಪತ್ನಿ ರೂಪಗಳಿಗೆ ಸಂತೇಬೆನ್ನೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಲಾಗಿದೆ. ಪೊಲೀಸ್ ಸ್ವಲ್ಪ ತಡವಾಗಿದ್ದರೂ ರೂಪಾಳ ಜೀವ ಹೋಗುತ್ತಿತ್ತು.
ಕೊಲೆಗಾರನ ಜಾಡು ಹಿಡಿದ ತುಂಗಾ ಟು
ಕೊಲೆಯಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಶ್ವಾನದಳದ ಪೊಲೀಸರು ಕೊಲೆಗಾರನ ಜಾಡು ಹಿಡಿಯಲು ಮುಂದಾದಾಗ ಪೊಲೀಸ್ ಶ್ವಾನ ದಾಳದ ತುಂಗಾ ಟು ಕೊಲೆಗಾರ ಓಡಾಡಿದ ಬಾರ್ ಚಿಕ್ಕಬೆನ್ನೂರು ತೋಟ ಹಿರೇಕಲೂರು ದೇವಸ್ಥಾನ ಹಾಗೂ ಕೊಲೆಗೆ ಬಳಸಿದ ಅಡಿಕೆ ಕತ್ತರಿಸುವ ಮಚ್ಚಿನ ಜಾಗವನ್ನು ತೋರಿಸಿದ್ದು, ನಂತರ ಚನ್ನಾಪುರ ಗ್ರಾಮದಲ್ಲಿ ದ್ದ ಕೊಲೆ ಮಾಡಿದ ರಂಗಸ್ವಾಮಿಯ ಮನೆಯನ್ನು ತೋರಿಸಿದೆ. ಈ ವೇಳೆಯಲ್ಲಿ ರಾತ್ರಿ 12:00 ಸಮಯ ವೇಳೆ ಮಳೆ ಜಿನುಗುತಿದ್ದರು, ಸುಮಾರು ಎಂಟು ಕಿಲೋ ಮೀಟರ್ ಚಲಿಸಿದ ತುಂಗಾ ಟು ಶ್ವಾನ ಮತ್ತು ಡಿಎಆರ್ ಘಟಕದ ನಿರ್ವಾಹಕ ಎಂ ಡಿ ಶಫಿ ಅವರ ಕಾರ್ಯಾಚರಣೆ ಶ್ಲಾಘನೀಯವಾಗಿದೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಸಿಪಿಐ ಲಿಂಗನಗೌಡ ನೇಗಲೂರು ಪಿಎಸ್ಐ ರೂಪ ಎಂಬ ಚೆನ್ನವಿರಪ್ಪ ಕೆಎಸ್ಐ ಓಂಕಾರಪ್ಪ ಚಾಲಕ ಸೋಮಣ್ಣ ರವಿ ನಾಗಭೂಷಣ ರಾಘವೇಂದ್ರ ಆಲೇಶ್, ಶ್ರೀನಿವಾಸ್ ಸತೀಶ್ ಅಂಜನಪ್ಪ ಕುಮಾರ್ ನಾಯಕ ಇದ್ದರು.
ಕೊಲೆಯಾದ ಕೆಲವೇ ನಿಮಿಷದಲ್ಲಿ ನಮ್ಮ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಲೆಗಾರನನ್ನು ಬಂಧಿಸಿದ್ದಾರೆ ಹಾಗೂ ಪತ್ನಿಯ ಜೀವವನ್ನು ಉಳಿಸಿದ್ದಾರೆ ಮತ್ತು ಶ್ವಾನದಳದ ತುಂಗಾ ಟು ಮಳೆಯಲ್ಲಿ ಸುಮಾರು ಎಂಟು ಕಿಲೋಮೀಟರ್ ಚಲಿಸಿ, ಕೊಲೆಗಾರನ ಜಾಡನ್ನು ತೋರಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
ಉಮಾ ಪ್ರಶಾಂತ್. ಎಸ್ ಪಿ. ದಾವಣಗೆರೆ