


ಸ್ಲಗ್
*ಶಿವಮೊಗ್ಗ ನಗರದಲ್ಲಿ ಆರ್ ಸಿ ಬಿ ಗೆಲುವಿನ ಸಂಭ್ರಮ
*ಉಷಾ ನರ್ಸಿಂಗ್ ಹೋಮ್ ಬಳಿ ಸಂಭ್ರಮಾಚರಣೆ
*ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ
*ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ಅಪಘಾತ
*21 ವರ್ಷದ ಅಭಿ ಪ್ರಾಣ ಕಳೆದುಕೊಂಡ ಯುವಕ

….
ಶಿವಮೊಗ್ಗ : ನಗರದಲ್ಲಿ ಆರ್‍ಸಿಬಿ ಗೆಲುವಿನ ಸಂಭ್ರಮ ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಉಷಾ ನರ್ಸಿಂಗ್ ಹೋಮ್ ಬಳಿ ನಡೆಯುತ್ತಿದ್ದ ಸಂಭ್ರಮಾಚರಣೆಯ ನಡುವೆ ಅಲ್ಲಿಯೇ ಸಮೀಪದ ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ನಡೆದ ಬೈಕ್‍ವೊಂದು ಅಪಘಾತಕ್ಕೀಡಾಗಿದೆ. ಎರಡು ಬೈಕ್‍ಗಳು ಡಿಕ್ಕಿಯಾದ ಪರಿಣಾಮ 21 ವರ್ಷದ ಅಭಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೆ ಹಲವೆಡೆ ನಡೆಯುತ್ತಿದ್ದ ಆರ್‍ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಪೋಲೀಸರು ಬ್ರೇಕ್ ಹಾಕಿದ್ದಾರೆ.
ನಿನ್ನೆ ರಾತ್ರಿ ಆರ್‍ಸಿಬಿ ಮ್ಯಾಚ್ ಗೆಲ್ಲುತ್ತಲೇ ಅಭಿಮಾನಿಗಳು ರೋಡಿಗೆ ಇಳಿದಿದ್ದು ಬೈಕ್‍ಗಳಲ್ಲಿ ರ್ಯಾಲಿ ಮಾಡಲು ಆರಂಭಿಸಿದ್ದರು. ಪ್ರಮುಖ ಸರ್ಕಲ್‍ಗಳಲ್ಲಿ ಕುಣಿಯುತ್ತಿದ್ದರು. ಈ ನಡುವೆ ಸ್ಪೀಡ್‍ನಲ್ಲಿ ಬಂದ ಎರಡು ಬೈಕ್‍ಗಳು ಪರಸ್ಪರ ಡಿಕ್ಕಿಯಾಗಿವೆ.

ಘಟನೆಯಲ್ಲಿ ವೆಂಕಟೇಶ್ವರ ನಗರ ನಿವಾಸಿ ಅಭಿ ಗಂಭೀರವಾಗಿ ಗಾಯಗೊಂಡಿದ್ದ. ಘಟನೆ ಬೆನ್ನಲ್ಲೇ ಸ್ಥಳದಲ್ಲಿದ್ದವರು ಆತನ ರಕ್ಷಣೆ ಬಂದರಾದರೂ ಆತ ಸಾವನ್ನಪ್ಪಿದ್ದ.ಈ ಸಂಬಂಧ ಜಯನಗರ ಪೋಲೀಸ್ ಠಾಣೆ ಪೋಲೀಸರು ಈ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.