


ದಾವಣಗೆರೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮುಖಂಡ ಎನ್.ರಾಜಶೇಖರ್ ಅವರನ್ನು ಬಿಜೆಪಿ ಚುನಾವಣಾ ಘಟಕದ ಚುನಾವಣಾ ಅಧಿಕಾರಿ ಗಣೇಶ್ ಕಾರ್ಣಿಕ್ ಅಧಿಕೃತವಾಗಿ ಘೋಷಿಸಿದ್ದಾರೆ.
ಎನ್.ರಾಜಶೇಖರ್ ಆರಂಭದಲ್ಲಿ ಭಜರಂಗ ದಳದ ನಗರ, ಜಿಲ್ಲಾ ಸಹ ಸಂಚಾಲಕ, ಜಿಲ್ಲಾ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ. 2007ರಲ್ಲಿ ದಾವಣಗೆರೆ ಮಹಾನಗರ ಯುವಮೋರ್ಚಾ ಅಧ್ಯಕ್ಷ, 2010ರಲ್ಲಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
2013ರಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ್, 2016ರಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2018ರಲ್ಲಿ ದಾವಣಗೆರೆ ದಕ್ಷಿಣ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ
