


ದಾವಣಗೆರೆ : ನಗರದ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ತಮ್ಮ ಗ್ರಾಮಕ್ಕೆ ಸೌಲಭ್ಯ ಕೇಳಿಬಂದವರ ಮನವಿಗಳನ್ನು ಸ್ವೀಕರಿಸಿ ನಂತರ ಜಿಲ್ಲಾಡಳಿತ ಭವನದಲ್ಲಿದ್ದ ಅಧಿಕಾರಿಗಳನ್ನು ಸಂಪರ್ಕಿಸಿ ನೊಂದವರ ಕಷ್ಟಕ್ಕೆ ಸ್ಪಂದನೆ ನೀಡಿದರು ಹಾಗೂ ಜನರನ್ನು ಅಲೆದಾಡಿಸದೇ ಅವರ ಸಂಕಷ್ಟಗಳಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಸಂಸದರ ಬಳಿತೊಡಿಕೊಂಡರು.ತಮ್ಮ ಜಮೀನಿಗೆ ತೆರಳಲು ರಸ್ತೆ ಸಂಪರ್ಕ ಮಾಡಿಕೊಡುವಂತೆ ಕೆಲ ರೈತರು ಸಂಸದರ ಬಳಿ ಮನವಿ ಸಲ್ಲಿಸಿದರು.ಇದಕ್ಕೆ ಸ್ಪಂದಿಸಿದ ಸಂಸದರು ಕ್ರಮ ವಹಿಸುವುದಾಗಿ ತಿಳಿಸಿದರು.ಈ ವೇಳೆ ಕೆಲ ವಿದ್ಯಾರ್ಥಿಗಳ ಮನವಿಗಳನ್ನು ಸಹ ಸ್ವೀಕರಿಸಿದರು.

ಜಿಲ್ಲೆಯ ಚನ್ನಗಿರಿ,ಹೊನ್ನಾಳಿ,ಜಗಳೂರು,ಹರಿಹರದಿಂದಲೂ ಆಗಮಿಸಿದ ಜನರು ಸಂಸದರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.