


ದಾವಣಗೆರೆ : ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದು ಶಾಸಕ ಶಿವಗಂಗಾ ಬಸವರಾಜ್ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು.
ದಾವಣಗೆರೆಯಲ್ಲಿ ಕ್ಯಾಬಿನೆಟ್ ವಿಸ್ತರಣೆ ವಿಚಾರ ಸಂಬಂಧ ಮಾತನಾಡಿ, ಎರಡು ವರ್ಷದ ಸಾಧನೆ ಎಂದು ಹೇಳುತ್ತಾರೆ, ಆದ್ರೆ ಕೆಲ ಸಚಿವರು ಏನು ಸಾಧನೆ ಮಾಡಿಲ್ಲ.ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ರೆ ಉತ್ತಮವಾಗಿ ಕೆಲಸ ಮಾಡುತ್ತಾರೆ. ಹಳಬರಿಗೆ ಸಚಿವ ಸ್ಥಾನಕ್ಕೆ ಕೋಕ್ ಕೊಟ್ರೆ ಒಳ್ಳೆಯದು.ಹಳಬರು ಅಧಿಕಾರ ಅನುಭವಿಸಿ ಜಿಡ್ಡು ಹಿಡಿದು ಹೋಗಿದ್ದಾರೆ. ನಾನು ಸನ್ಯಾಸಿ ಅಲ್ಲ, ಸಚಿವ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ. ಜಿಲ್ಲೆಯಲ್ಲಿ ಶಾಸಕ ಶಾಂತನಗೌಡ್ರು ಹಿರಿಯ ರಾಜಕಾರಣಿ ಅವರಿಗೆ ಕೊಟ್ರೆ ನಾನು ಖುಷಿ ಪಡುತ್ತೇನೆ. ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಬಾರ್ದು ಅಂತ ಏನಾದ್ರು ಇದೆಯಾ?.

ಹೈ ಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು .ಸಂಪುಟದಲ್ಲಿ 8-10 ಜನರನ್ನ ಬಿಡಲಿ, ಹೊಸಬರಿಗೆ ಅವಕಾಶ ಕೊಡಲಿ. 5 ರಿಂದ 6 ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅವರಿಗೂ ಸಿಗಲಿ.ಎರಡುವರೆ ವರ್ಷ ಅಧಿಕಾರ ಹಂಚಿಕೆ ವಿಚಾರ ಈ ಮಾತನಾಡೋದು ಬೇಡ. ಉತ್ತಮವಾದಂತ ಮುಖ್ಯಮಂತ್ರಿ ಇದ್ದಾರೆ. ಉತ್ತಮ ಆಡಳಿತ, ಉತ್ತಮ ಮಳೆಬೆಳೆ ಇದೆ ಈಗ ಚರ್ಚೆ ಬೇಡ ಎಂದ ಶಾಸಕ ಶಿವಗಂಗಾ, ಬಳ್ಳಾರಿಯಲ್ಲಿ ಶಾಸಕರು ಹಾಗೂ ಸಂಸದರ ಮೇಲೆ ಇಡಿ ದಾಳಿ ವಿಚಾರ ಸಂಬಂಧ ಉತ್ತರ ನೀಡಲಿಲ್ಲ. ಬದಲಾಗಿ ಈ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ಪಡೆದು ಮಾತನಾಡುವೆ ಎಂದರು.

ಜಾತಿ ಗಣತಿ ವಿಚಾರ ಸಂಬಂಧ ಮಾತನಾಡಿ, ಮರು ಜಾತಿ ಗಣತಿ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿ ಎಂ ಅವರು ದೆಹಲಿಯಲ್ಲಿ ಮಾತಾಡಿದಂತೆ ಕಾಣುತ್ತದೆ.ಹಳೆ ಜಾತಿ ಗಣತಿ ಎಂದು ಹೇಳುತ್ತಿದ್ದಾರೆ, ಮರು ಜಾತಿ ಗಣತಿ ಮಾಡುತ್ತಿದ್ದಾರೆ ಸ್ವಾಗತ.
ಜಾತಿ ಗಣತಿ ವ್ಯವಸ್ಥಿತವಾಗಿಲ್ಲ ಎಂಬ ವಿಚಾರ ಹಿಂದಿನಿಂದಲೂ ಹೇಳುತ್ತಿದ್ದೇನೆ . ಹಳೆಯ ವರದಿಯಲ್ಲಿ 60 ಸಾವಿರ ಲಿಂಗಾಯತರು ಇದ್ದಾರೆ ಎಂಬ ವರದಿ ತಪ್ಪಾಗಿತ್ತು. ಮರು ಸಮೀಕ್ಷೆ ಮಾಡಲು ನಾನೇ ಮೊದಲಿಗ .ನಮ್ಮ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಿದ್ದೇನೆ ಸಮಯ ಬಂದಾಗ ಹೇಳುತ್ತೇನೆ. ಎಸ್ ಸಿ ಮೀಸಲಾತಿ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದಾರೋ ಅದೇ ರೀತಿ ಮಾಡಲಿ ಶಿವಗಂಗಾ ಹೇಳಿದರು.