ದಾವಣಗೆರೆ : ಕುಡಿದು ಚಾಲನೆ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ, ಎಣ್ಣೆ ಗಮ್ಮತ್ತು ಕೇಳಬೇಕಲ್ವ, ಹಾಗಾಗಿಯೂ ಎಣ್ಣೆ ಮನುಷ್ಯನ ಮಾತು ಕೇಳುತ್ತಾ...ಒಳಗಿರುವ ಪರಮಾತ್ಮ ಏನು ಬೇಕಾದರೂ ಮಾಡುತ್ತಾನೆ..ಅಂತೆಯೇ, ಇಲ್ಲೊಬ್ಬ ವೀರ ಕೇಸರಿ ಎಣ್ಣೆ ಏಟಿನಲ್ಲಿ ತನ್ನ ಟ್ರ್ಯಾಕ್ಟರ್ ಮೂಲಕ ಮೂರು ಕಾರುಗಳನ್ನು ಜಖಂ ಮಾಡಿದ್ದಾನೆ.
ಮಾಯಕೊಂಡ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ಇರುವ ಕರಿನಾಯಕನಹಳ್ಳಿಯ ರುದ್ರೇಶ್ ಎಣ್ಣೆ ಏಟಿನಲ್ಲಿ ಕಾರುಗಳನ್ನು ಉಡೀಸ್ ಮಾಡಿದವ.
ದಾವಣಗೆರೆಗೆ ಟ್ರ್ಯಾಕ್ಟರ್ ಸರ್ವೀಸ್ ಗೆ ಹೋಗಿದ್ದ ಈತ ಸರ್ವೀಸ್ ಲೇಟ್ ಆಗುತ್ತೇ , ಅಷ್ಟೊರೊಳಗೆ ನೈಂಟಿ ಬಿಟ್ಟುಕೊಳ್ಳೋಣ ಅಂತ ಹೇಳಿ ನೈಂಟಿ ಹಾಕ್ಕೊಂಡು ಬಂದಿದ್ದಾನೆ. ಟ್ರ್ಯಾಕ್ಟರ್ ಸರ್ವೀಸ್ ಆದ ನಂತರ ಊರಿಗೆ ಆವರಗೆರೆ ರಸ್ತೆ ಮೂಲಕ ಹೊರಟಿದ್ದಾನೆ. ಅಷ್ಟೊರೊಳಗೆ ಬೈಕ್ ಸವಾರನೊಬ್ಬ ಟ್ರ್ಯಾಕ್ಟರ್ ಚಾಲಕನಿಗೆ ಚಮಕ್ ಕೊಟ್ಟಿದ್ದಾನೆ.
ಆಗ ಟ್ರ್ಯಾಕ್ಟರ್ ಸ್ಟೇರಿಂಗ್ ನ್ನು ಚಾಲಕ ರುದ್ರೇಶ್ ಆದಿಶಕ್ತಿ ಶೋ ರೂಂ ಬಳಿ ಸರ್ವೀಸ್ ಮಾಡಲು ಬಂದಿದ್ದ ಕಾರುಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿ ರಭಸಕ್ಕೆ ಮೂರು ಕಾರುಗಳು ಜಖಂಗೊಂಡಿವೆ.
ಡೋರ್, ಬ್ಯಾನೇಟ್ ಢಿಕ್ಕಿಗಳು ಬೆಂಕಿ ಪೊಟ್ಟಣ ರೀತಿ ಆಗಿವೆ. ಇದರಿಂದ ಆಕ್ರೋಶಗೊಂಡ ಶೋರೂಂನವರು ಅಪಘಾತ ನಡೆಸಿದವನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ನಂತರ ಅಲ್ಲೆಯೇ ಕೂರಿಸಿ ಪೊಲೀಸರಿಗೆ ದೂರವಾಣಿ ಕರೆ ಮಾಡಿದ್ದಾರೆ. ಒಟ್ಟಿನಲ್ಲಿ ಸರ್ವೀಸ್ ಮಾಡಿಸೋದಕ್ಕೆ ಬಂದ ಕಾರುಗಳ ಮಾಲೀಕರು ಮನಿ ಜತೆ ಕಣ್ಣಲ್ಲಿ ಹನಿ ನೀರು ಬಿಟ್ಟು ಹಿಡಿ ಶಾಪ ಹಾಕಿದರು.