


ದಾವಣಗೆರೆ : ದಾವಣಗೆರೆಯ ತಾಲೂಕಿನ ಓಬಜ್ಜಿಹಳ್ಳಿಯಲ್ಲಿ ಕೊಲೆ ನಡೆದಿದ್ದು, ಗ್ರಾಮದ ಜನರಿಗೆ ಭೀತಿ ಎದುರಾಗಿದೆ. ಬುಧವಾರ ರಾತ್ರಿ ಯುವಕನ ಕೊಲೆ ನಡೆದಿದ್ದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಸಂದೀಪ್ (೨೫ ) ವರ್ಷದ ಕೊಲೆಯಾದ ಯುವಕ, ಸಂದೀಪ್ ಹಲವು ಪ್ರಕರಣಗಳಲ್ಲಿ ಭಾಗಿ ಶಂಕೆ ವ್ಯಕ್ತವಾಗಿದೆ.
ಪಾರ್ಟಿ ಮಾಡಲು ಹೋಗಿದ್ದಾಗ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ದಾವಣಗೆರೆ ಗ್ರಾಮಾಂತರ ಠಾಣೆ ಸಿಪಿಐ ಕಿರಣ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದಾರೆ. ಈಗಾಗಲೇ ತನಿಖೆ ಮಾಡುತ್ತಿದ್ದೇನೆ, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ದಾವಣಗೆರೆ ವಿಜಯಕ್ಜೆ ತಿಳಿಸಿದ್ದಾರೆ.
