
ಬೆಳಗಾಂ : ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಪರಸ್ಪರ ಸ್ಪರ್ಧಿಗಳ ಆಕ್ರೋಶ ಇವತ್ತು ಕಟ್ಟೆಯೊಡೆದಿದೆ.. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಬ್ಯಾಟಿಂಗ್ ಮಾಡಿರೋ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಜಿ ಸಿಎಂ ಜಗದೀಶ್ ಶೆಟ್ರನ್ನ ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿದ್ದಾರೆ.
ಹಾವೇರಿ, ಧಾರವಾಡದಲ್ಲಿ ನಿಮ್ಮ ಬೇಳೆ ಬೇಯಲ್ಲ ಅಂತೇಳಿ ಬೆಳಗಾಂಗೆ ಬಂದಿದ್ದಾರಾ.? ಬೆಳಗಾಂಗೆ ನಿಮ್ಮ ಕೊಡುಗೆ ಏನು ಅಂತೇಳಿ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದು ಕಡೆ ಶೆಟ್ರಿಗೆ ಸ್ವಪಕ್ಷದ ಸ್ಥಳೀಯ ನಾಯಕರೇ ಕೈ ಕೊಡೋ ಭೀತಿ ಶುರುವಾಗಿದೆ. ಹಾಗಾದ್ರೆ ಕುಂದಾನಗರಿಯ ಅಖಾಡದಲ್ಲಿ ಹೇಗಿದೆ ಲೆಕ್ಕಾಚಾರ..? ಶೆಟ್ರು ಚುನಾವಣೆಗೂ ಮೊದ್ಲೇ ಡರ್ ಆದ್ರಾ..?
ಶೆಟ್ರು ಈ ರಾಜ್ಯದ ಮಾಜಿ ಸಿಎಂ ಆಗಿದ್ರೂ ಇವರು ಮಾಸ್ ಲೀಡರ್ ಅಲ್ಲ. ಇವರ ದರ್ಪ ಮತ್ತು ದರ್ಬಾರ್ ಏನಿದ್ರು ಅದು ಹಾವೇರಿ ಮತ್ತು ಧಾರವಾಡಕ್ಕೆ ಮಾತ್ರ ಸೀಮಿತವಾಗಿತ್ತು. ಆದ್ರೀಗ ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ ಸಿಕ್ಕಿಲ್ಲ ಅಂತೇಳಿ ಬೆಳಗಾವಿಯಿಂದ ಅಖಾಡಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ, ಬೆಳಗಾವಿ ನನ್ನ ಕರ್ಮ ಭೂಮಿ ಅಂತೇಳುತ್ತಿದ್ದಾರೆ. ಇದ್ರಿಂದ ರೊಚ್ಚಿಗೆದ್ದಿರೋ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಂದ ಬೆಳಗಾವಿಗೆ ಕೊಡುಗೆ ಏನು.? ಇವರು ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಿದ್ದಾರೆ. ಹಾಗಾದರೆ ನಾವೇನು ಹುಚ್ಚರಾ ಅಂತೇಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಜನರಿಗೆ BJP ಅನ್ಯಾಯ?
ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಅಲೋಟ್ ಆಗಿದ್ದ ಆಕ್ಸಿಜನ್ ಘಟಕ ಅನ್ನು ಹುಬ್ಬಳ್ಳಿ- ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದರು ಶೆಟ್ರು. ಆಗ ಬೆಳಗಾವಿ ಜನರಿಗೆ ಅನ್ಯಾಯ ಮಾಡಿರುವ ಅವರು, ಇಂದು ಇದು ನನ್ನ ಕರ್ಮ ಭೂಮಿ ಎನ್ನುತ್ತಿದ್ದಾರೆ.. ಅವರಿಗೆ ನಾಚಿಕೆ ಆಗ್ಬೇಕು ಅಂತೇಳಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಬೆಳಗಾವಿ ದೊಡ್ಡ ಜಿಲ್ಲೆ, ಇಲ್ಲಿ ಜನಸಂಖ್ಯೆ ಹೆಚ್ಚಿದೆ. ಬೆಳಗಾವಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಈಗ ಕರ್ಮ ಭೂಮಿ ಎಂದು ಜಿಲ್ಲೆಯ ಜನರನ್ನು ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ ಅಂತಾನೂ ಪ್ರಶ್ನೆ ಮಾಡಿದ್ದಾರೆ.
ಆರು ಬಾರಿ ಹುಬ್ಬಳ್ಳಿ ಜನರು ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ವಿರೋಧ ಪಕ್ಷದ ನಾಯಕರಾದರು, ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಬಿಜೆಪಿ ಅಧ್ಯಕ್ಷರೂ ಆದ್ರು. ಹೀಗೆ ಎಲ್ಲವನ್ನೂ ಅನುಭವಿಸಿದ್ದಂತವರನ್ನು ಹುಬ್ಬಳ್ಳಿ ಧಾರವಾಡ ಜನರು ಈಗ ಹೊರಗೆ ಹಾಕಿದ್ದಾರೆ. ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಕರ್ಮ ಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಏನಾದರೂ ಕೊಡುಗೆ ಇದೆಯಾ ನಾಚಿಕೆಯಾಗಬೇಕು ನಿಮಗೆ ಎಂದು ಹೆಬ್ಬಾಳಕರ್ ಕಿಡಿ ಕಾರಿದ್ದಾರೆ.
ಹೀಗೆ ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಬ್ಯಾಟಿಂಗ್ ಮಾಡ್ತಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಕೆಂಡಕಾರುತ್ತಿದ್ರೆ, ಮತ್ತೊಂದು ಕಡೆ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಾಯಿದೆ. ಗೋ ಬ್ಯಾಕ್ ಶೆಟ್ಟರ್ ಅನ್ನೋ ಅಲ್ಲಿನ ಬಿಜೆಪಿ ಪಕ್ಷದ ಕಾರ್ಯಕರ್ತರೇ ಆಕ್ರೋಶ ಇನ್ನೂ ನಿಂತಿಲ್ಲ. ಹೀಗಾಗಿ ಶೆಟ್ರಿಗೆ ಬೆಳಗಾವಿಯಲ್ಲಿ ಗೆಲ್ಲೋ ಆತ್ಮವಿಶ್ವಾಸ ಕುಗ್ಗುತ್ತಿದೆ. ಹೀಗಿದ್ರೂ ಮೋದಿ ಬೇರೆ ಯಾವುದೋ ರಾಜ್ಯದಲ್ಲಿ ನಿಂತು ಗೆದ್ದಿಲ್ವಾ.? ಹಾಗೇ ನಾನು ಕೂಡ ಬೇರೆ ಜಿಲ್ಲೆಗೆ ಬಂದಿದ್ದಿನಿ ಅಂತೇಳಿ ಸಮರ್ಥಿಸಿಕೊಳ್ತಾಯಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.., ಇವರೇನು ಮೋದಿಯಷ್ಟು ದೊಡ್ಡವರಾ.? ನಾಚಿಕೆಯಾಗಬೇಕು ಇವರಿಗೆ ಅಂತೇಳಿ ಕುಟುಕಿದ್ದಾರೆ.
ಇಷ್ಟೊಂದು ವಿರೋಧದ ನಡುವೆ ಜಗದೀಶ್ ಶೆಟ್ರು ಬೆಳಗಾವಿಯಲ್ಲಿ ಗೆಲ್ಲೋದಕ್ಕೆ ಆಗುತ್ತಾ.? ಬೆಳಗಾವಿಗೆ ಶೆಟ್ರ ಕೊಡುಗೆ ಏನು.? ಈ ಒಂದು ಪ್ರಶ್ನೆಗೆ ಶೆಟ್ರು ಆನ್ಸರ್ ಮಾಡೋದಕ್ಕೆ ತಿಣುಕಾಡುತ್ತಿದ್ದಾರೆ. ಶೆಟ್ರ ಸೌಮ್ಯ ಸ್ವಭಾವ ಅವರ ರಾಜಕೀಯ ಜೀವನಕ್ಕೆ ಮುಳುವಾಗುತ್ತಾ? ಗೊತ್ತಿಲ್ಲ