


- ಹೈಲೈಟ್ಸ್
*ನಗದು ಬಹುಮಾನಗಳು : ಎಸ್ ಪಿ 09
* ಶ್ಲಾಘನೀಯ ಪತ್ರಗಳು : ಐಜಿಪಿ 01
*ಪ್ರಶಂಸನೀಯ ಪತ್ರಗಳು : 05 ( ಐಜಿಪಿ -01, ಎಸ್ಪಿ-03, ಸ್ಪೇಶಲ್ ಪಿಪಿ-01
*ಇತರೆ ಬಹುಮಾನ : ಬುನಾದಿ ತರಬೇತಿಯಲ್ಲಿ ಸರ್ವೋತ್ತಮ ಪ್ರಶಿಕ್ಷಾರ್ಥಿ, ಹೊರಾಂಗಣ, ಒಳಾಂಗಣ ವಿಷಯಗಳಲ್ಲಿ ದ್ವೀತಿಯ ಸ್ಥಾನ
ನಂದೀಶ್ ಭದ್ರಾವತಿ, ದಾವಣಗೆರೆ
ನಾವೆಲ್ಲ ಹೊರಗೆ ಕೆಲಸ ಮಾಡುವ ಪೊಲೀಸರನ್ನು ಮಾತ್ರ ನೋಡಿರುತ್ತೇವೆ..ಆದರೆ ಠಾಣೆಯಲ್ಲಿ ಕೆಲಸ ಮಾಡುವ ಖಾಕಿಯ ಕಾರ್ಯವೈಖರಿ ಯಾರಿಗೂ ಅಷ್ಟೊಂದು ತಿಳಿದಿರೋದಿಲ್ಲ…ಅವರ ಮಾಡುವ ಕೆಲಸಗಳು ಸಹ ಯಾರಿಗೂ ಗೊತ್ತಿರೋದಿಲ್ಲ..ಈ ನಡುವೆ ಕಷ್ಟ ಎಂದು ಹೇಳಿಕೊಂಡು ಠಾಣೆಗೆ ಬಂದವರನ್ನು ಕೂರಿಸಿ ಮಾತನಾಡಿಸೋದೇ ಕಷ್ಟ..ಇಂತಹ ಸನ್ನಿವೇಶದಲ್ಲಿ ಇಲ್ಲೊಬ್ಬ ಹೆಡ್ ಕಾನ್ ಸ್ಟೇಬಲ್ ಈ ಮಾತಿಗೆ ಅಪವಾದವೆಂಬಂತೆ ಇದ್ದು, ಜನರ ಮನ್ನಣೆಗೆ ಪಾತ್ರರಾಗಿದ್ದಾರೆ… ಅಲ್ಲದೇ ಅವರ ಪ್ರಾಮಾಣಿಕತೆಗೆ 2025-2026 ರ ಕಮೆಂಡೇಶನ್ ಪದಕ ಸಿಕ್ಕಿದೆ.

ಹೌದು.ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಜೆ.ಎಂ.ಮಂಜುನಾಥ್ ಗೆ “Director General of Police’s Commendation Disc 2024-25” ಪದಕ ಸಿಕ್ಕಿದೆ. ಇವರು ನ್ಯಾಯಾಲಯ ದಲ್ಲಿ ಛೀಮಾರಿಗೊಳಗಾಗುವಂತಹ ಯಾವುದೇ ಶಿಸ್ತು ನಡುವಳಿಗಳಲ್ಲಿ ಸಿಲುಕಿರುವುದಿಲ್ಲ. ಯಾವುದೇ ಇಲಾಖಾ ವಿಚಾರಣೆ/ನ್ಯಾಯಾಂಗ ನಡುವಳಿ/ಕ್ರಿಮಿನಲ್ ಮೊಕದ್ದಮೆಗಳು/ಚಾಲ್ತಿ ಶಿಕ್ಷೆಗಳು ಬಾಕಿ ಇಲ್ಲ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಳ್ಳಿಯೊಂದರಲ್ಲಿ ಜೂ.1,1976 ರಲ್ಲಿ ಜನಿಸಿದರು. ಅ.10, 2002 ಕ್ಕೆ ಕೆಲಸಕ್ಕೆ ಸೇರುತ್ತಾರೆ. ಅಂದಿನಿಂದ ಪೊಲೀಸ್ ಇಲಾಖೆಗೆ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಮಹದೇವ ರೆಡ್ಡಿ ರೈತಾಪಿ ಕೆಲಸ ಮಾಡಿ ಮಗನನ್ನು ಇಷ್ಟರ ಮಟ್ಟಿಗೆ ತಂದಿದ್ದಾರೆ.
ಮಂಜುನಾಥ್ ಮಾಜಿ ಸೈನಿಕ
ಮಂಜುನಾಥ, ಜಿ.ಎಂ ಇವರು ಬಿ.ಎ ಪದವೀಧರರಾಗಿದ್ದು, 1997 ರಿಂದ 2002 ರವರೆಗೆ ಬಿ.ಎಸ್.ಎಫ್.ನಲ್ಲಿ ಸೈನಿಕರಾಗಿ ಕಾಶ್ಮೀರದ ಪಾಕಿಸ್ತಾನ ಗಡಿಯ ಕುಪ್ಪಾರ ಸೆಕ್ಟರ್ ಹಾಗೂ ಮೇಘಾಲಯದ ಶಿಲ್ಲಾಂಗ್ ನ ಬಾಂಗ್ಲಾದೇಶ ಗಡಿಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ನಂತರ ದಾವಣಗೆರೆ ಜಿಲ್ಲಾ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾಗಿ ದಿನಾಂಕ:21-10-2002 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ನಂತರ ಮಂಗಳೂರಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿಯನ್ನು “ಸರ್ವೋತಮ ಪ್ರಶಿಕ್ಷಣಾರ್ಥಿ ಪಶಸಿ, ಹೊರಾಂಗಣ ಮತ್ತು ಒಳಾಂಗಣ ವಿಷಯಗಳಲ್ಲಿ ದ್ವಿತೀಯ ಪ್ರಶಸ್ತಿಗಳನ್ನು” ಪಡೆದು ಪೂರ್ಣಗೊಳಿಸಿದ್ದಾರೆ.
ಎಲ್ಲೆಲ್ಲಿ ಕೆಲಸ
ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆ ಮತ್ತು ಕೆಟಿಜೆ ನಗರ ಪೊಲೀಸ್ ಠಾಣೆಗಳಲ್ಲಿ 2017 ರವರೆಗೆ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದು, ದಿನಾಂಕ:25-01-2017 ರಂದು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಮುಂಬಡ್ತಿ ಹೊಂದಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಸಂಚಾರ ನಿಯಮದಲ್ಲಿ ಹೆಚ್ಚು ಜ್ಞಾನ
ಕ್ರಿಯಾಶೀಲ ಪೊಲೀಸ್ ಸಿಬ್ಬಂದಿಯಾಗಿರುವ ಮಂಜುನಾಥ.ಜೆ.ಎಂ ಸಂಚಾರ ನಿಯಮ ಮತ್ತು ಕಾನೂನಿನಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿದ್ದು, ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಹಲವು ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಲೋಕಾಯುಕ್ತ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದಾಗ ಹಲವು ಭ್ರಷ್ಟ ಸರ್ಕಾರಿ ನೌಕರರ ಮಾಹಿತಿ ಸಂಗ್ರಹಿಸಿ ದಾಳಿ ಪ್ರಕರಣಗಳಲ್ಲಿ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇವರ ಉತ್ತಮ ಕವಾಯತು ಹಾಗೂ ಕಾರ್ಯ ನಿರ್ವಹಣೆಯನ್ನು ಗುರುತಿಸಿ ಐಜಿಪಿ ಹಾಗೂ ಎಸ್.ಪಿ ಶ್ಲಾಘನೀಯ ಪತ್ರ ನೀಡಿ ಅಭಿನಂದಿಸಿದ್ದಾರೆ.
ಲೋಕಾಯುಕ್ತದಲ್ಲಿ ಕೆಲಸ
ಮಂಜುನಾಥ 2009 ರಿಂದ 2016ರ ವರೆಗೆ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ವಿಭಾಗದ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿದಾರರಿಗೆ ಸಾಕ್ಷಿ ನುಡಿಯಲು ಮತ್ತು ಅಭಿಯೋಜಕರಿಗೆ ಪ್ರಕರಣ ನಡೆಸಲು ಉತ್ತಮವಾಗಿ ಸಹಕರಿಸಿದ್ದಾರೆ. ಇದರ ಪರಿಣಾಮ 16 ಪ್ರಕರಣಗಳಲ್ಲಿ ಆರೋಪಿಗಳಿಗೆ ಘನ ನ್ಯಾಯಾಲಯದಿಂದ ಶಿಕ್ಷೆಯಾಗಿದ್ದು, ಇವರ ಕರ್ತವ್ಯ ನಿಷ್ಠೆಯನ್ನು ಅಭಿಯೋಜನಾಧಿಕಾರಿಗಳು ಹಾಗೂ ಇಲಾಖೆಯ ಮೇಲಾಧಿಕಾರಿಗಳು ಪ್ರಶಂಸಿದ್ದಾರೆ
ಅಪರಾಧ ಪ್ರಕರಣಗಳ ಪತ್ತೆ ಕಾರ್ಯ
ಕೆಟಿಜೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಟ್ಟು 26 ಮನೆ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ತನಿಖಾಧಿಕಾರಿಗೆ ಸಹಕರಿಸಿದ್ದು, ಆರೋಪಿತರಿಂದ ಸುಮಾರು ರೂ.25.40,000/- ಮೌಲ್ಯದ ಬಂಗಾರ. ಬೆಳ್ಳಿ ಹಾಗೂ ನಗದನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
PUBLIC SAFTEY ACT ಜಾರಿಯಲ್ಲಿ ಮಹತ್ತರ ಕೆಲಸ
ಸರ್ಕಾರದ ‘PUBLIC SAFTEY ACT ಜಾರಿಯಲ್ಲಿ ಮಹತರ ಕೆಲಸ ಮಾಡಿದ್ದಾರೆ. ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ದಾವಣಗೆರೆ ನಗರದ ಸೂಕ್ಷ್ಮ ಪ್ರದೇಶಗಳ ನಾಗರಿಕರಲ್ಲಿ ಕಾನೂನು ಅರಿವು ಮೂಡಿಸಿ ಮತ್ತು ಮನೆ-ಅಂಗಡಿ ಮಾಲೀಕರ ಮನವೊಲಿಸಿ ರಸ್ತೆಗೆ ಅಭಿಮುಖವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿ ‘PUBLIC SAFTEY ACT” ಅನ್ನು ಅತ್ಯುತ್ತಮವಾಗಿ ಜಾರಿಗೊಳಿಸಿ ಸಾರ್ವಜನಿಕರು ಹಾಗೂ ಮೇಲಾಧಿಕಾರಿಗಳಿಂದ ಪ್ರಶಂಸನೆಗೆ ಪಾತ್ರರಾಗಿದ್ದಾರೆ.
ಸುಂದರ ಪೊಲೀಸ್ ಠಾಣಾ ಆವರಣ ನಿರ್ಮಾಣ
ಕೆ.ಟಿ.ಜೆ.ನಗರ ಮತ್ತು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಗಳ ಆವರಣದಲ್ಲಿ ಹಲವು ಸುಂದರ ಮರ-ಗಿಡಗಳನ್ನು ಬೆಳೆಸಿ ಕಾನೂನು ಅರಿವು ಮೂಡಿಸುವ ಬರಹಗಳನ್ನು ಬರೆಯಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಲ್ಲದೇ ಜಿಲ್ಲಾ ಪೊಲೀಸ್ ಕಛೇರಿಯ ಸುತ್ತಲೂ ಸುಮಾರು 2 ಎಕರೆ ಪ್ರದೇಶದಲ್ಲಿ ಸಾವಿರಾರು ಅಡಿಕೆ ಗಿಡ, ಹೂವಿನ ಗಿಡಗಳನ್ನು ನೆಡುವ ಮೂಲಕ ಜನಸ್ನೇಹಿ-ಪರಿಸರಸ್ನೇಹಿ ವಾತಾವರಣ ಸೃಷ್ಟಿಸಿ, ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
* ‘OPEN HOUSE’ ಕಾರ್ಯಕ್ರಮದ ಯಶಸ್ವಿ
ಅನುಷ್ಠಾನ
ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಬರಮಾಡಿಕೊಂಡು ‘ಪೊಲೀಸರ ಕಾರ್ಯವೈಖರಿ-ಸಾರ್ವಜನಿಕರ ಸುರಕ್ಷತೆಯಲ್ಲಿ ಪೊಲೀಸರ ಪಾತ್ರ- ಆಯುಧಗಳ ಬಳಕೆ-ಅಪರಾಧಿಕ ಕೃತ್ಯಗಳು ಮತ್ತು ಶಿಕ್ಷೆ’ ಹೀಗೆ ಹಲವಾರು ವಿಷಯಗಳ ಬಗ್ಗೆ ಜ್ಞಾನಾರ್ಜನೆ ನೀಡಿ ಇಲಾಖೆಯ ‘OPEN HOUSE’ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿರುತ್ತಾರೆ.
ಮಾದಕ ದ್ರವ್ಯ ವಿರೋಧಿ ಮಾಸಾಚರಣೆ ವಿಶೇಷ ಕಾರ್ಯಾಚರಣೆ
ಶಾಲಾ-ಕಾಲೇಜುಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ‘ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಮತ್ತು ದುಶ್ಚಟಗಳಿಗೆ ಬಲಿಯಾಗದಂತೆ’ ಕಾನೂನು ಅರಿವು ಮೂಡಿಸುವಲ್ಲಿ ಇವರ ಕರ್ತವ್ಯ ನಿಷ್ಠೆಯನ್ನು ಶಾಲಾ-ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಶಂಸಿಸಿದ್ದು, ಸರ್ಕಾರದ SPECIAL DRIVE ON DRUG ABUSE MONTH’ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದ್ದಾರೆ.
ಸ್ಥಾಯಿ ಆದೇಶ-1017-ಸುಧಾರಿತ ಗಸ್ತು ಪದ್ದತಿ ಯಶಸ್ವಿ ಅನುಷ್ಠಾನ
ಪ್ರದೇಶಕ್ಕೊಬ್ಬ ಪೊಲೀಸ್’ ಎಂಬ ತತ್ವದಡಿ ಸುಧಾರಿತ ಗಸ್ತು ಪದ್ಧತಿಯ ಬೀಟ್ ಸಿಬ್ಬಂದಿಯಾಗಿ ತಮಗೆ ಹಂಚಿಕೆಯಾದ ಬೀಟ್ ನಲ್ಲಿ ಸಾರ್ವಜನಿಕರ ತೊಂದರೆಗಳಿಗೆ ತುರ್ತಾಗಿ ಸ್ಪಂದಿಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಲು ತುಂಬಾ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದನ್ನು ಸಾರ್ವಜನಿಕರು ಗುರುತಿಸಿ ಇವರನ್ನು ಸನ್ಮಾನಿಸಿದ್ದಲ್ಲದೇ, ದಿನಪತ್ರಿಕೆಗಳು ಸಹ ಪ್ರಶಂಸನೆಯ ಅಂಕಣಗಳು ಪ್ರಕಟಿಸಿರುತ್ತವೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಶ್ರಮ
ಕರೋನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದ ವೇಳೆ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸಿ ಧ್ವನಿವರ್ಧಕದ ಮೂಲಕ ಸಾಂಕ್ರಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳ ಮಾಹಿತಿ ಹಾಗೂ ವೀಡಿಯೋಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ಜನಜಾಗೃತಿ ಮೂಡಿಸಿದ್ದು ಇವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.
ಪೊಲೀಸ್ ಠಾಣೆಗೆ ಭೂಮಿ ಮಂಜೂರಾತಿ
ಸುಮಾರು 5 ಕೋಟಿ ಮೌಲ್ಯದ 10,068 ಚದರ ಅಡಿ ಭೂಮಿಯಲ್ಲಿರುವ ಕೆಟಜೆ ನಗರ ಪೊಲೀಸ್ ಠಾಣಾ ಕಟ್ಟಡವು ಸುಮಾರು 20 ವರ್ಷಗಳಿಂದ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿದ್ದು. ಇವರು ಸದರಿ ಭೂಮಿಯನ್ನು ಭೂಮಾಪನ ಇಲಾಖೆಯಿಂದ ನಕ್ಷೆ ಮಾಡಿಸಿ, ಪಾಲಿಕೆಯ ಸರ್ವಸದಸ್ಯರ ಒಪ್ಪಿಗೆಯೊಂದಿಗೆ ಸರ್ಕಾರದ ಮಂಜೂರಾತಿ ಪಡೆದು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಹೆಸರಿಗೆ ಮಂಜೂರಿಸಲು ಅವಿರತವಾಗಿ ಶ್ರಮಿಸಿರುತ್ತಾರೆ.
ಸಕಾಲ ಯೋಜನೆ’ ಯಶಸ್ವಿ ಜಾರಿ
ಸಕಾಲ ತಂತ್ರಾಂಶದಲ್ಲಿ ಬಂದಿರುವ ಸಾವಿರಾರು ಪಾಸ್‌ಪೋರ್ಟ್ ಹಾಗೂ ಪೊಲೀಸ್ ವೆರಿಫಿಕೇಷನ್ ಅರ್ಜಿಗಳನ್ನು ನಿಗದಿತ ಕಾಲಾವಧಿಯಲ್ಲಿ ಮುಕ್ತಾಯಗೊಳಿಸಿ ‘ಸಕಾಲ ಯೋಜನೆ’ ಯಶಸ್ವಿಯಾಗುವಂತೆ ಮಾಡಿರುತ್ತಾರೆ.
ಜಪ್ತಿಯಾದ ವಾಹನ ಹಾಗೂ ಮುದ್ದೆಮಾಲಿನ ವಿಲೇವಾರಿ
ಠಾಣೆಯಲ್ಲಿ ವಿಲೇವಾರಿಗೆ ಬಾಕಿ ಇದ್ದ 2021 ನೇ ಸಾಲಿನ 53 ಮತ್ತು 2022ನೇ ಸಾಲಿನ 34 ವಾಹನಗಳ ಮಾಲೀಕರನ್ನು ಪತ್ತೆಮಾಡಿ ವಾಹನಗಳನ್ನು ಹಿಂದಿರುಗಿಸುವಲ್ಲಿ ಕ್ರಮವಹಿಸಿದ್ದು, 328 ಮುದ್ದೆಮಾಲನ್ನು ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ಮತ್ತು ಪ್ರಕರಣಗಳಲ್ಲಿ ವಶಪಡಿಸಿಕೊಂಡ ರೂ.18.25,569/- ಮೌಲ್ಯದ ಹಣವನ್ನು ನೋಟುಗಳು ಅಮಾನ್ಯಗೊಂಡಾಗ ಆರ್ ಬಿಐಗೆ ಜಮಾ ಮಾಡಲು ಶ್ರಮಿಸಿದ್ದು, ಮೇಲಾಧಿಕಾರಿಗಳ ಪ್ರಶಂಸನೆಗೆ ಪಾತ್ರರಾಗಿರುತ್ತಾರೆ.
ರೌಡಿ ಚಟುವಟಿಕೆ ನಿಯಂತ್ರಣ, ರೌಡಿ ಕಣುಮನ ವಿರುದ್ದ ಗೂಂಡಾ ಕಾಯಿದೆ
ಕೆ.ಟಿ.ಜೆ ನಗರ ಮತ್ತು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ 14 ಜನ ರೌಡಿ ಅಸಾಮಿಗಳ ವಿರುದ್ಧ ಗಡಿಪಾರು ವರದಿ ಮತ್ತು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿದ್ದ ಸಂತೋಷ ಕುಮಾರ @ ಕಣುಮ ಇವನ ವಿರುದ್ಧ ಗೂಂಡಾ ಕಾಯ್ದೆಯಡಿ ವರದಿ ತಯಾರಿಸಿ ಸರ್ಕಾರದ ಅನುಮೋದನೆಯನ್ನು ಪಡೆದು ಕಾರಾಗೃಹಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದನ್ನು ಗುರುತಿಸಿ ಎಸ್.ಪಿ.. ದಾವಣಗೆರೆ ಜಿಲ್ಲೆರವರು ನಗದು ಬಹುಮಾನ ನೀಡಿ ಪ್ರಶಂಸಿಸಿರುತ್ತಾರೆ.
ಪ್ರಕರಣಗಳ ಶೀಘ್ರ ವಿಲೇವಾರಿ
ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ತನಿಖೆ ಬಾಕಿಯಿರುವ ಪ್ರಕರಣಗಳಲ್ಲಿ ಸೂಕ್ತ ದಾಖಲಾತಿ ಮತ್ತು ಸಾಕ್ಷಾ ಧಾರಗಳನ್ನು ಸಂಗ್ರಹಿಸಲು ಹಾಗೂ ಅತೀ ಹೆಚ್ಚು ಪ್ರಕರಣಗಳ ತನಿಖೆಯನ್ನು ತರಿತವಾಗಿ ಮುಕ್ತಾಯಗೊಳಿಸಿದ್ದಾರೆ ಈ ಮೂಲಕ ಜನಸ್ನೇಹಿ-ಪರಿಸರಸ್ನೇಹಿ ವಾತಾವರಣ ಸೃಷ್ಟಿಸಿ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
‘ಬಂದೋಬಸ್ ಕರ್ತವ್ಯ
ಇವರು ಪ್ರಧಾನ ಮಂತ್ರಿಗಳ, ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ ಮತ್ತು ಚುನಾವಣೆಯಂತಹ ಹಾಗೂ ಕೋಮು ಸೌಹಾರ್ದತೆ ಹದಗೆಡುವಂತಹ ಮಹತ್ವದ ಬಂದೋಬಸ್ತ್ ಗಳಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವಿರತವಾಗಿ ಶ್ರಮಿಸಿರುತ್ತಾರೆ. ಒಟ್ಟಾರೆ ಇವರು ಉತ್ಸಾಹಿ, ಕಿಯಾಶೀಲ, ಉತ್ತಮ ಶಿಸ್ತು ಹಾಗೂ ಇಲಾಖೆಯ ಪರವಾಗಿ ಕಾರ್ಯನಿರ್ವವಹಿಸಿ ಕೆಲಸಮಾಡುವ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದು, ಸಾರ್ವಜನಿಕ ಹಾಗೂ ಉನ್ನತಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ