


ನಂದೀಶ್ ಭದ್ರಾವತಿ ಶಿವಮೊಗ್ಗ
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾಕ್ಕೆ
ಜಿಲ್ಲಾ ಯುವ ಘಟಕವನ್ನು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇಮಕ ಮಾಡಿದ್ದು, ಸಂಘಟನೆಗೆ ಆನೆ ಬಲ ಬಂದಂತೆ ಆಗಿದೆ.

ಶಿವಮೊಗ್ಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಸಚಿನ್ ಎನ್.ಪೂಜಾರ್, ಉಪಾಧ್ಯಕ್ಷರಾಗಿ ನಂದೀಶ್ ಶಿಕಾರಿಪುರ, ಧೃವ ಕುಮಾರ್ ಶಿವಮೊಗ್ಗ, ಶಶಾಂಕ್ ಪಾಟೀಲ್ ಸೊರಬ, ಏಕನಾಥ್ ಭದ್ರಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಸಿ. ಪಾಟೀಲ್ ಶಿವಮೊಗ್ಗ, ಕಾರ್ಯದರ್ಶಿಗಳಾಗಿ ಸುಹಾಸ್ ಪಿ.ಆರ್., ಅವಿನಾಶ್ ಬಿ.ಆರ್., ಅಮೋಘ ಸಜ್ಜನ್ ಶಿವಮೊಗ್ಗ, ಚಂದನ್ ಟಿ.ಎಸ್. ತೀರ್ಥಹಳ್ಳಿ, ಖಜಾಂಚಿಯಾಗಿ ರಾಕೇಶ್ ಎಂ.ಆರ್. ಅವರೊಂದಿಗೆ 20 ನಿರ್ದೇಶಕರ ನೇಮಕ ಮಾಡಿರು ವುದಾಗಿ ಜಿಲ್ಲಾಧ್ಯಕ್ಷರಾದ ರುದ್ರ ಮುನಿ ಸಜ್ಜನ್ ತಿಳಿಸಿದ್ದು, ಯುವ ನೇತಾರ್ ಸಚಿನ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ಈಗಾಗಲೇ ಮಹಾಸಭಾ ಹಲವು ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು ಬರಲಿರುವ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಉಪಯುಕ್ತ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಸಚಿನ್ ಹೇಳುತ್ತಾರೆ.
ಮಹಾಸಭಾವನ್ನು ಎಲ್ಲಾ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಲು ಸಂಘಟನೆ ಯಲ್ಲಿಸಕ್ರಿಯವಾಗಿ ತೊಡಗಿಸಿಕೊಳ್ಳುವ ಇಚ್ಚಾಶಕ್ತಿ ಹೊಂದಿದ್ದೇನೆ.
ಯುವಕರಿಗೆ ಹೆಚ್ಚಿನ ಸಂಘಟನೆಯ ಕೆಲಸ ನೀಡಿ, ಅವರಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವುದು ನನ್ನ ಕೆಲಸ’ ಎಂದು ಅವರು ತಿಳಿಸಿದರು.
ನಮ್ಮ ಸಮಾಜಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿದೆ. ನಾವು ಮಾಡುವ ಸಮಾಜ ಸೇವೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು. ಒಟ್ಟಾರೆ ಸಮಾಜಕ್ಕಾಗಿ ಉತ್ತಮ ಕೆಲಸಗಳು ನಮ್ಮಿಂದ ಆಗಲಿದೆ ಎಂದರು.
‘ನಮ್ಮಲ್ಲಿ ಸಾಕಷ್ಟು ಪ್ರತಿಭಾನ್ವಿತ ಮಕ್ಳಳಿದ್ದು ಚೆನ್ನಾಗಿ ಓದುತ್ತಿದ್ದಾರೆ. ಅವರಲ್ಲಿ ಕೆಲವು ಪೋಷಕರಿಗೆ ಉನ್ನತ ಶಿಕ್ಷಣ ಕೊಡಿಸಲು ಆಗುತ್ತಿಲ್ಲ’. ಆದ್ದರಿಂದ ಸಮಾಜದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ , ಪ್ರತಿಭಾ ಪುರಸ್ಕಾರ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಮಾಡುವ ಚಿಂತನೆ ಇದೆ ಎನ್ನುತ್ತಾರೆ ಸಚಿನ್.
ಸಮಾಜಕ್ಕೆ ಆದಷ್ಟು ಸಮಯ ನೀಡುತ್ತೇನೆ
ವೀರಶೈವ ಮಹಾಸಭಾಗೆ 118 ವರ್ಷಗಳ ಇತಿಹಾಸವಿದೆ. ಯುವಕರು ವ್ಯಾಪಾರ, ಉದ್ಯೋಗ, ಶಿಕ್ಷಣ, ರಾಜಕಾರಣ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕಿದೆ. ಸಮಾಜದ ಅಭಿವೃದ್ಧಿಗೆ ಸಾಕಷ್ಟು ಸಮಯ ನೀಡುತ್ತೇನೆ.ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷರಾದ ಮೇಲೆ ಮಹಾಸಭಾಕ್ಕೆ ಶಕ್ತಿ ಬಂದಂತಾಗಿದೆ ಎಂಬ ಅಭಿಪ್ರಾಯ ಸಚಿನ್ ರದ್ದು.
ಬಡವರಿಗೆ, ಅಸಹಾಯಕರಿಗೆ ಸಹಾಯ
ಯುವಕರು ತಾಲ್ಲೂಕಿನ ಪ್ರತಿ ಹಳ್ಳಿಗೂ ತೆರಳಿ ಸಮಾಜದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕೆಂದಿದ್ದೇನೆ ಎಂದು ಸಚಿನ್ ಹೇಳುತ್ತಾರೆ. ಒಟ್ಟಾರೆ ಸಚಿನ್ ನೇಮಕದಿಂದ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಒಂದು ಶಕ್ತಿ ಬಂದಿದ್ದು, ಸಮಾಜದ ಅಭಿವೃದ್ಧಿಗೆ ಶ್ರಮಿಸಲಿ ಎಂಬುದೇ ಎಲ್ಲರ ಒತ್ತಾಸೆ.
….
ವೀರಶೈವ ಲಿಂಗಾಯತ ಮಹಾಸಭಾ ಸಮಾಜದ ಅಭಿವೃದ್ಧಿಗೆ ನಾನು ಹಗಲಿರುಳು ಶ್ರಮಿಸುವೆ..ಸಂಘಟನೆ ಬಲಪಡಿಸುವುದೇ ನನ್ನ ಮೂಲ ಉದ್ದೇಶ. ಸಮಾಜಕ್ಕೆ ಧಕ್ಕೆ ಬಂದಲ್ಲಿ ಹೋರಾಟದ ಮೂಲಕ ನ್ಯಾಯ ಒದಗಿಸಲು ಶ್ರಮಿಸುವೆ
-ಸಚಿನ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ
….
ಸಚಿನ್ ಬಹಳ ಕಷ್ಟದಿಂದ ಬಂದಿರುವ ಯವಕ, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾರೆ..ಯುವಕರನ್ನು ಸಂಘಟಿಸಿ ಮಹಾಸಭಾದ ಗೌರವ ಹೆಚ್ಚಿಸುತ್ತಾರೆ ಎಂಬ ನಂಬಿಕೆ ಇದೆ.
– ಮೃತ್ಯುಂಜಯ ಆರಾಧ್ಯ, ವೀರಶೈವ ಸಮಾಜದ ನಾಯಕ