ನಂದೀಶ್ ಭದ್ರಾವತಿ, ದಾವಣಗೆರೆ
ಊರು ಹೊಸದಾದರೂ, ಜನಸ್ನೇಹಿ ಪೊಲೀಸ್ ಗೆ ಆದ್ಯತೆ, ಕಾನೂನು ಸುವ್ಯವಸ್ಥೆ ಮೊದಲ ಆದ್ಯತೆ ಎಂದು ನೂತನ ಐಜಿಪಿ ರಮೇಶ್ ಹೇಳಿದರು.
ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ತ್ಯಾಗರಾಜನ್ ರಿಂದ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿ, ನನಗೆ ದಾವಣಗೆರೆ, ಚಿತ್ರದುರ್ಗ , ಶಿವಮೊಗ್ಗ ಹೊಸದಾಗಿದ್ದರೂ, ಹಾವೇರಿ ಹಳೆಯದ್ದು. ಆದ್ದರಿಂದ ಎಲ್ಲ ಎಸ್ಪಿ ಗಳ ಬಗ್ಗೆ ಚರ್ಚೆ ಮಾಡಿ ಎಲ್ಲ ವಿಷಯವನ್ನು ತಿಳಿದುಕೊಂಡು ಕಾನೂನು ಸುವ್ಯವಸ್ಥೆ ಮಾಡುತ್ತೇನೆ, ಅಲ್ಲದೇ ಪೊಲೀಸ್ ಫ್ರೆಂಡ್ಲಿ ಆಡಳಿತ ನಡೆಸುತ್ತೇನೆ ಎಂದರು.
ಇಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ . ಈ ಪ್ರದೇಶವು ನನಗೆ ಹೊಸದು ಮತ್ತು ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ನಾನು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಚಿತ್ರದುರ್ಗಕ್ಕೆ ಎರಡು ಬಾರಿ ಬಂದೋಬಸ್ತ್ ಗೆ ಬಂದಿದ್ದೆ. ಹಾವೇರಿಯ ಬಂಕಾಪುರ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಕೆಲಸ ಮಾಡಿದ ಅನುಭವ ನನಗೆ ಇದೆ. ಎಂಟು ವರ್ಷಗಳ ಹಿಂದಿನದ್ದು. ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ನಾನು ಮಾಹಿತಿ ಪಡೆಯುತ್ತೇನೆ. ನನಗೆ ಎಸ್ಪಿ ಆಗಿ ಕೆಲಸ ಮಾಡಿದ ಅನುಭವ ಇದೆ.
ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭಯಮುಕ್ತ ಸಮಾಜವನ್ನು ಖಚಿತಪಡಿಸಿಕೊಳ್ಳುವುದು ನನ್ನ ಆದ್ಯತೆ. ಅಪರಾಧ ಪರಿಸ್ಥಿತಿಯ ಅವಲೋಕನ ಮತ್ತು ಅಪರಾಧ ಚಟುವಟಿಕೆಗಳನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದರು.
ಬಿ.ರಮೇಶ್ ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದರು. 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಇಂದು ದಾವಣಗೆರೆ ಐಜಿಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ, ಮಂಜುನಾಥ ಜಿ ರವರು ಹಾಗೂ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರು, ಕಚೇರಿ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.