
ನ್ಯಾಮತಿ ಪಟ್ಟಣದ ಜವಳಿ ಸಮಾಜ ಸಹಕಾರ ಸಂಘದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಜವಳಿ ಸಮಾಜ ಸಹಕಾರ ಸಂಘದ ಪದಾಧಿಕಾರಿಗಳು ಪೂಜೆ , ಪುಷ್ವಾ ನಮನ ಸಲ್ಲಿಸುವ ಮೂಲಕ ಆಚರಣೆಯನ್ನು ನಡೆಸಲಾಯಿತು. ಅಧ್ಯಕ್ಷ ಯಲಬುರ್ಗಿ ಸಂತೋಷ್‌ಕುಮಾರ್ , ಉಪಾಧ್ಯಕ್ಷೆ ಎಂ.ಆರ್.ಮಮತ , ನಿರ್ದೇಶಕರಾದ ಕರ್ನೆಲ್ಲಿ ಗಂಗಾಧರ್ , ಎನ್.ಎಸ್.ಶಾರದ , ಎಸ್.ಎಂ.ಟಿ ಶಿವಕುಮಾರ್ , ಹರೀಶ್.ಆರ್. ಗೌರವ ಅಧ್ಯಕ್ಷ ಕುಬಸದ ಷಡಾಕ್ಷರಪ್ಪ ಸೇರಿದಂತೆ ಇತರರು ಇದ್ದರು