ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸುದ್ದಿಕೊಂಡಿರುವ ಮುಡಾ ಹಗರಣ, ಸಿದ್ದರಾಮಯ್ಯರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಹೀಗಾಗಿ ಯಾವುದೇ ಗಟ್ಟಿನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿ ಹೋರಾಟಕ್ಕೆ ಸಿದ್ದು ಮೆತ್ತಗಾಗಿದ್ದಾರೆ ಎನ್ನಲಾಗಿದೆ. ಯೂ ಟರ್ನ್ ಸಿದ್ದು ಎನ್ನುವಂಥ ಲೇವಡಿಯನ್ನು ಬಿಜೆಪಿ ಮಾಡುತ್ತಿದೆ. ಹಾಗಾದ್ರೆ ಸಿದ್ದರಾಮಯ್ಯ ಮೆತ್ತಗಾಗಿದ್ದು ಯಾಕೆ? ರಾಜೀನಾಮೆ ಗುಮ್ಮ ಅವರನ್ನು ಸೈಲೆಂಟ್ ಮಾಡಿತಾ? ಈ ಕುರಿತು ಇನ್ನಷ್ಟು ಮಾಹಿತಿ ನೀಡ್ತಿವಿ.. ಈ ಸ್ಟೋರಿ ನೋಡಿ
ಸಿದ್ದರಾಮಯ್ಯ ಎಂದ್ರೆನೇ ಖಡಕ್ ನಿರ್ಧಾರ, ಎದುರಾಳಿಗಳಿಗೆ ಮಾತಿನ ಬಾಣ ಬಿಡುವ ಮೂಲಕ ಸೈಲೆಂಟ್ ಮಾಡುವ ಖ್ಯಾತಿ ಹೊಂದಿದ್ದರು. ಆದರೆ, ಸಿದ್ದರಾಮಯ್ಯ ವಿರುದ್ಧ ಕೇಳಿಬಂದ ಮುಡಾ ಹಗರಣ ಹಳೇ ಸಿದ್ದರಾಮಯ್ಯರ ಖದರ್ ಕರಗುವಂತೆ ಮಾಡಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಂಬಲಿಗರೇ ಅವರ ದಾರಿ ತಪ್ಪಿಸುತ್ತಿದ್ದಾರಾ? ಎನ್ನುವಂತ ಮಾತು ಕೇಳಿಬರುತ್ತಿವೆ. ಸಿದ್ದರಾಮಯ್ಯ ಮೆತ್ತಗಾಗಲು ವಿಪಕ್ಷಗಳ ಬಿಗಿ ಹೋರಾಟವೂ ಒಂದು ಕಾರಣವಾಗಿದೆ.
ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಕೇಳಿಬಂದ ಸಂದರ್ಭದಲ್ಲಿ ಸ್ವತಃ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ೧೪ಸೈಟ್ ವಾಪಸ್ ಕೊಡಿ ಎಂದು ಸಲಹೆ ನೀಡಿತ್ತು. ಆದರೆ, ಇದನ್ನು ತಿರಸ್ಕಾರ ಮಾಡಿದ್ದ ಸಿದ್ದರಾಮಯ್ಯ, ಸೈಟ್ ವಾಪಸ್ ಕೊಟ್ಟರೆ ಎದುರಾಳಿಗಳಿಗೆ ಅಸ್ತ್ರವಾಗಲಿದೆ. ಅಲ್ಲದೆ ನನಗೆ ಹಿನ್ನಡೆಯಾಗಲಿದೆ ಎಂದು ಮೊಂಡುವಾದ ಮಾಡಿದ್ದರು. ಮುಡಾ ಪ್ರಕರಣ ಯಾವಾಗ ಕೋರ್ಟ್ನಲ್ಲಿ ಹಿನ್ನಡೆಯಾಯಿತೋ ಆಗ ಸಿದ್ದು ನಿಧಾನವಾಗಿ ಮೆತ್ತಗಾದರು. ಅಲ್ಲದೆ ಕೇಸ್‌ನಲ್ಲಿ ಇಡಿ ಎಂಟ್ರಿಯಾದ ನಂತರ ಸಿದ್ದರಾಮಯ್ಯ ದಿಢೀರನೆ ೧೪ಸೈಟ್ ವಾಪಸ್‌ಕೊಟ್ಟು ಯೂ ಟರ್ನ್ ತೆಗೆದುಕೊಂಡಿದ್ದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಹೇಳಿದ್ದರು.
ಎರಡು ದಿನಗಳ ಹಿಂದೆ ೪೩ಹಳೇ ಕೇಸ್ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದ್ದ ರಾಜ್ಯ ಸರ್ಕಾರದ ವಿರುದ್ದ ಪ್ರತಿಪಕ್ಷ ಬಿಜೆಪಿ ಮುಗಿಬಿದ್ದಿದೆ. ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದೆ. ಈ ವಿಚಾರ ಸರ್ಕಾರಕ್ಕೆ ಮುಜುಗರ ತರಿಸಲಿದೆ ಎಂದು ಅರಿತ ಸಿಎಂ ಸಿದ್ದರಾಮಯ್ಯ ಮತ್ತೆ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳ ಪ್ರಶ್ನೆಗೆ ಸಿಎಂ ಸಿದ್ದು ಮೆತ್ತಗಾಗಿದ್ದಾರೆ. ಹುಬ್ಬಳ್ಳಿ ಗಲಭೆ ಕೇಸ್‌ನ್ನು ಕೋರ್ಟ್ ಅನುಮತಿ ನೀಡಿದರೆ ಮಾತ್ರ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಉಲ್ಟಾ ಹೊಡೆದಿದ್ದಾರೆ.
ಇದಲ್ಲದೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಂದಿದ್ದ ದಲಿತರ ಭೂಮಿ ಕಬಳಿಸಿದ ಪ್ರಕರಣ ಸರ್ಕಾರಕ್ಕೆ ಭಾರಿ ಮುಜುಗರ ತರಿಸಿತ್ತು. ಈಗ ಈ ಪ್ರಕರಣದಲ್ಲೂ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವ ಖರ್ಗೆ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಖರ್ಗೆ ಟ್ರಸ್ಟ್ಗೆ ನೀಡಿದ ಭೂಮಿಯನ್ನು ಮರಳಿ ನೀಡಲು ಮುಂದಾಗಿದ್ದು ಖರ್ಗೆ ಕೂಡ ಮೆತ್ತಗಾಗಿದ್ದಾರೆ. ಇದಲ್ಲದೆ ಈ ಹಿಂದೆ ತೆಗೆದುಕೊಂಡಿದ್ದ ಹಲವು ನಿರ್ಧಾರವನ್ನು ಸಿದ್ದು ಸರ್ಕಾರ ಯೂ ಟರ್ನ್ ತೆಗೆದುಕೊಂಡಿತ್ತು.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ದಿನೇದಿನೆ ಮೆತ್ತಗಾಗುತ್ತಿದ್ದು ಪ್ರತಿಪಕ್ಷ ಬಿಜೆಪಿ ಅಗ್ರೆöÊಸಿವ್‌ಆಗಿ ಹೋರಾಟಕ್ಕೆ ದುಮುಕಿದೆ. ಸಿದ್ದ ಯೂ ಟರ್ನ್ ಸರ್ಕಾರವಾಗಿದೆ ಎನ್ನುವ ಆರೋಪ ಕೇಳಿಬರುತ್ತಿವೆ.