
ದಾವಣಗೆರೆ : ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಈಗಾಗಲೇ ಲುಕ್ ಔಟ್ ನೋಟೀಸ್ ಜಾರಿ ಮಾಡಿ ಬಂಧನಕ್ಕೆ ಬಲೆ ಬೀಸಿದೆ. ಮತ್ತೊಂದು ಕಡೆ JDS ಶಾಸಕ, ಪ್ರಜ್ವಲ್ ತಂದೆ HD ರೇವಣ್ಣಗೂ SIT ಶಾಕ್ ಕೊಟ್ಟಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಹೆಚ್ಡಿ ರೇವಣ್ಣ ಅರೆಸ್ಟ್ ಆಗೋ ಸಾಧ್ಯತೆ ಇದೆ. ಹಾಗಾದರೆ ಪ್ರಧಾನಿ ಮೋದಿಗೆ CM ಸಿದ್ದು ಪತ್ರ ಬರೆದಿದ್ದೇಕೆ..? ಏನಿದು ಪ್ರಜ್ವಲ್ ಕೇಸ್ಗೆ ಬಿಗ್ ಟ್ವಿಸ್ಟ್ ಅಂದ್ರಾ..?
ಪ್ರಜ್ವಲ್ ರೇವಣ್ಣ ಜಗತ್ತಿನ ಯಾವುದೇ ಮೂಲೆಯಲ್ಲಿದ್ರೂ ಅವರನ್ನ ಹಿಡಿದು ತರ್ತಿವಿ ಅಂತೇಳಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರ ಈ ಮಾತು ದಳಪತಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದ್ದಂತಾಗಿದೆ. ನಿಮಗೆ ಗೊತ್ತಿರ್ಲಿ, ಸಿದ್ರಾಮಯ್ಯ ಮತ್ತು ದಳಪತಿಗಳ ಮಧ್ಯೆ ಸುಮಾರು ಒಂದೂವರೆ ದಶಕದಿಂದ ಎಣ್ಣೆ ಶೀಗೆಕಾಯಿ ಸಂಬಂಧ ಇದೆ. ದಳಪತಿಗಳು ಸಿದ್ದರಾಮಯ್ಯನವರನ್ನ ಕಾಂಗ್ರೆಸ್ನಲ್ಲೇ ಸೈಡ್ಲೈನ್ ಮಾಡೋದಕ್ಕೆ ನೋಡಿದ್ರೆ ಸಿದ್ರಾಮಯ್ಯ ದಳಪತಿಗಳನ್ನ ಮಟ್ಟ ಹಾಕೋಕೆ ಕಾದು ಕೂತಿದ್ರು. ಇದೀಗ ಅವರ ಕೈಗೆ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್ ಸಿಕಿದ್ದು. ಈ ಪ್ರಕರಣವನ್ನ ಸಿದ್ರಾಮಯ್ಯ ತುಂಬಾ ಸೀರಿಯಸ್ಸಾಗಿ ತಗೊಂಡಿದ್ದಾರೆ. ಹೀಗಾಗಿ ಆರೋಪಿ ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ರೂ ಅವರನ್ನ ಹಿಡಿದು ತರ್ತೀವಿ ಅಂತೇಳಿದ್ದಾರೆ. ಅಷ್ಟೇ ಅಲ್ಲ, ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ಸಂಬಂಧ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಪಾಸ್ಪೋರ್ಟ್ ರದ್ದತಿ ಅಧಿಕಾರವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ ಪ್ರಜ್ವಲ್ ರೇವಣ್ಣ ಅವರನ್ನು ಕೇಂದ್ರ ಸರಕಾರವೇ ರಕ್ಷಣೆ ಮಾಡುತ್ತಿದೆ ಅಂತೇಳಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಪ್ರಜ್ವಲ್ ವಿಷ್ಯದಲ್ಲಿ HDK ಆಗೊಂದು ಮಾತು, ಈಗೊಂದು ಮಾತು!?
ಕುಮಾರಸ್ವಾಮಿ ಮಾತುಗಳ ಬಗ್ಗೆ ಸಿದ್ದರಾಮಯ್ಯ ಆಕ್ರೋಶ!?
ಹೌದು ವೀಕ್ಷಕರೇ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ನನ್ನ ಮಗ ಎಂದು ಹೇಳಿದ್ದರು. ನನ್ನ ಮಗ ನಿಖಿಲ್ ಬೇರೆ ಅಲ್ಲ, ಪ್ರಜ್ವಲ್ ರೇವಣ್ಣ ಬೇರೆ ಅಲ್ಲ ಅಂದಿದ್ದರು. ಈಗ ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂತಿದ್ದಾರೆ. ಪ್ರಜ್ವಲ್ ಪ್ರಕರಣ ಮೊದಲೆ ಬಿಜೆಪಿಗೂ ಗೊತ್ತಿತ್ತು. ಆದರೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರು. ಈಗ ಯಾಕೆ ಕ್ರಮ ವಹಿಸುತ್ತಿಲ್ಲ ಅಂತೇಳಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪ್ರಕರಣದ ತನಿಖೆಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಬಿಜೆಪಿಯವರು ಈಗ ಯಾಕೆ ಯಾರು ಮಾತನಾಡುತ್ತಿಲ್ಲ. ಸಿ.ಟಿ.ರವಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸದಾನಂದಗೌಡ, ಆರ್. ಅಶೋಕ್ ಎಲ್ಲಿ ಹೋದರು.? ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆಂದು ಹೇಳುತ್ತಾರೆ, ಈಗ ಮಹಿಳೆಯರಿಗೆ ಅನ್ಯಾಯ ಆಗಿದೆ. ಯಾಕೆ ಮಾತನಾಡಿಲ್ಲ. ಸಂತ್ರಸ್ತ ಮಹಿಳೆಯರಿಗೆ ಧೈರ್ಯ ಹೇಳುವ ಕೆಲಸ ಮಾಡಲಿ ಅಂತೇಳಿ ಡಿಸಿಎಂ ಡಿಕೆಶಿ ಕಿಡಿಕಾರಿದ್ದಾರೆ. ಇದೇ ವಿಚಾರವಾಗಿ ರಿಯಾಕ್ಟ್ ಮಾಡಿರೋ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸೆಕ್ಷನ್ 41ಎ ಅಡಿಯಲ್ಲಿ ಪ್ರಜ್ವಲ್ಗೆ ನೋಟಿಸ್ ಜಾರಿ ಮಾಡಿದ್ದೇವೆ. ಪ್ರಜ್ವಲ್ ಪರ ವಕೀಲರು ಟೈಂ ಕೊಡಿ ಅಂತ ಕೇಳಿದ್ದಾರೆ. ಸಮಯ ಕೊಡಲು ಅವಕಾಶ ಇಲ್ಲ ಎಂದು ತಿಳಿಸಿದ್ದೇವೆ. ಹೆಚ್ಡಿ ರೇವಣ್ಣ ಕೂಡ 24 ಗಂಟೆ ಸಮಯ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್ ನೀಡಿದ್ದೇವೆ. ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಲುಕ್ ಔಟ್ ನೊಟೀಸ್ ಕೂಡ ಜಾರಿ ಮಾಡಿದ್ದೇವೆ ಅಂತೇಳಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.


ಪ್ರಜ್ವಲ್ ತಂದೆ HD ರೇವಣ್ಣಗೂ ಸಂಕಷ್ಟ?
ನಿಮಗೆ ಗೊತ್ತಿರ್ಲಿ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಬೆನ್ನಲ್ಲೇ ಇದೀಗ ಅವರ ತಂದೆ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣಗೂ ಸಹ SIT ತಂಡ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿರುವ ರೇವಣ್ಣ ದೇಶ ಬಿಟ್ಟು ಹೊಗುವುದನ್ನ ತಡೆಯಲು ಎಸ್ಐಟಿ ಈ ಲುಕ್ ನೋಟಿಸ್ ನೀಡಿದೆ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳಿಂದ ವಿಚಾರಣೆಗೆ ಹಾಜರಾಗದಿದ್ದರಿಂದ ವಿದೇಶಕ್ಕೆ ಹಾರುವ ಯತ್ನ ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಸ್ಐಟಿ ಈ ಲುಕ್ಔಟ್ ಅಸ್ತ್ರ ಪ್ರಯೋಗಿಸಿದೆ. ಇದರಿಂದ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು ಎನ್ನಲಾಗುತ್ತಿದೆ. ಅದೇನೇ ಇದ್ರೂ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ತಂದೆ ಮಕ್ಕಳ ಬಂಧನವಾದರೂ ಅಚ್ಚರಿಯಿಲ್ಲ