ದಾವಣಗೆರೆ : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸಿಎಂ ಆಗಬೇಕಿತ್ತು ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಹಿರಿಯರು ಅವರ ಬಗ್ಗೆ ಅಪಾರ ಗೌರವ ಇದೆ. ಕರ್ನಾಟಕದಲ್ಲಿ ಅವರು ಸಿಎಂ ಆಗಬೇಕಿತ್ತು, ದೇಶದಲ್ಲಿ ಪ್ರಧಾನಿಯಾಗಬೇಕಿತ್ತು ಎಂದರು.
ಮೊನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಏಕೆ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಒಂಥರಾ ತಿರಸ್ಕೃತ ನಾಣ್ಯವಾಗಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ನ ಪರಿಸ್ಥಿತಿ ಏನ್ ಆಗಿದೆ. ಕಾಂಗ್ರೆಸ್ ಅದ್ಯಕ್ಷರು ನೀವು ಹಿರಿಯರಾಗಿದ್ದೀರಿ.ಬಿಜೆಪಿ ಬಗ್ಗೆ ನೀಡಿದ ಹೇಳಿಕೆ ಹಿಂಪಡೆಯಬೇಕು.ಕಾಂಗ್ರೆಸ್ ಒಂದು ಕಡೆ ಒಟ್ ಬ್ಯಾಂಕ್‌ಗೆ ಅಲ್ಪಸಂಖ್ಯಾತರನ್ನು ಭಯೋತ್ಪಾದಕರನ್ನು ಓಲೈಸುತ್ತಿದ್ದಾರೆ. ಹುಬ್ಬಳ್ಳಿಯ ಪೊಲೀಸ್ ಠಾಣೆ ಸುಡಲು ಹೊರಟಿದ್ದವರ ಕೇಸ್ ವಾಪಸ್ಸು ಪಡೆಯಲು ಸರ್ಕಾರ ಮುಂದಾಗಿದೆ.ಇದು ಪಾಪರ್ ಹಾಗೂ ಭಯೋತ್ಪಾದಕರ ಸರ್ಕಾರ. ಸಿಟಿ ರವಿ ಹಾಗೂ ನನ್ನ ಮೇಲೆ ಇದ್ದ ಕೇಸ್ ಕೂಡ ವಾಪಸ್ಸು ತೆಗೆದುಕೊಂಡಿದ್ದಾರೆ.

ಕೇಸ್ ವಾಪಸ್ಸು ಪಡೆಯಿರಿ ಅಂತ ಅರ್ಜಿನೂ ಹಾಕಿಲ್ಲ. ಕಾಂಗ್ರೇಸ್ ಹಾಗೂ ಸಮ್ಮಿಶ್ರ ಸರ್ಕಾರ ಇರುವಾಗ ನನ್ನ ಮೇಲೆ ನೂರಾರು ಕೇಸ್ ಗಳನ್ನು ಹಾಕಿದ್ರು.ಎಲ್ಲಾ ಕೇಸ್ ಖುಲಾಸೆಯಾಗಿವೆ ಇನ್ನೆರಡು ಮೂರು ಕೇಸ್ ಇವೆ ಅವು ಕೂಡ ಖುಲಾಸೆ ಆಗುತ್ತವೆ ಎಂದರು.
ದಾವಣಗೆರೆಯಲ್ಲಿ ಅಂಗನವಾಡಿ ಸಹಾಯಕಿ ಸಂಬಳ ಕೊಡದಿದ್ದಕ್ಕೆ ಆತ್ಮಹತ್ಯೆ ಯತ್ನ ಮಾಡಿದಳು.ಇದಕ್ಕಿಂತ ತಾಜಾ ಉದಾಹರಣೆ ಬೇಕಾ ಇದು ಪಾಪರ್ ಸರ್ಕಾರ ಅನ್ನೋದಕ್ಕೆ. ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ಕೊಡಲು ಹಣ ಇಲ್ಲ. ದಸರಾ ಮುಗಿದಿದೆ ಈಗ ಈ ಸರ್ಕಾರ ಪಥನವಾಗುತ್ತೆ.ಯಡಿಯೂರಪ್ಪ ನನ್ನ ಸಂಬಂಧ ಅಪ್ಪ ಮಕ್ಕಳ ಸಂಬಂಧ.ನಾನು ಯಡಿಯೂರಪ್ಪ ನವರನ್ನು ಇಟ್ಟುಕೊಂಡು ಲಾಭ ಮಾಡಲು ರಾಜಕೀಯಕ್ಕೆ ಬಂದಿಲ್ಲ.ನಾನು ಕಮರ್ಷಿಯಲ್ ರಾಜಕಾರಣಿ ಅಲ್ಲ. ನಮ್ಮ ಬಗ್ಗೆ ಹೇಳಿಕೆ ನೀಡಿದವರು ಕಮರ್ಷಿಯಲ್ ನಾಯಕರು. ಯಾರು ಏನ್ ಬೇಕಾದರೂ ಹೇಳಿಕೆ ನೀಡಲಿ.ಯಡಿಯೂರಪ್ಪ ನವರ ಪರವಾಗಿ ಗಟ್ಟಿಯಾಗಿ ನಿಂತವನು ನಾನು.
ದಾವಣಗೆರೆಯಲ್ಲಿ ನನಗೆ ಯಾವುದೇ ಗೆಸ್ಟ್ ಹೌಸ್ ಗೊತ್ತಿಲ್ಲ ನನಗೆ ಗೊತ್ತಿರೋದು ಬಿಜೆಪಿ ಕಚೇರಿ ಮಾತ್ರ.
ನಾವು ಬಿಜೆಪಿ ಪರವಾಗಿ ರಾಜ್ಯಾಧ್ಯಕ್ಷರ ಪರವಾಗಿ ಇದ್ದೇವೆ.ಅವರ ವಿರುದ್ದ ಇಲ್ಲಿಗೆ ಮೂರು ನಾಲ್ಕು ಜನರನ್ನು ಕರೆಸಿ ಸಭೆ ನಡೆಸಿದವರು ಭಿನ್ನಮತೀಯರು ಎಂದು ಹೇಳಿದರು.
ನಾವು ಬಿಜೆಪಿ ಪರವಾಗಿ ರಾಜ್ಯಾಧ್ಯಕ್ಷರ ಪರವಾಗಿ ಇದ್ದೇವೆ.ಅವರ ವಿರುದ್ದ ಇಲ್ಲಿಗೆ ಮೂರು ನಾಲ್ಕು ಜನರನ್ನು ಕರೆಸಿ ಸಭೆ ನಡೆಸಿದವರು ಭಿನ್ನಮತೀಯರು ಎಂದು ಹೇಳಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡುತ್ತಿದೆ ಎಂದು ಸಿಎಂ ಆರೋಪ ಹಿನ್ನಲೆಗೆ ಉತ್ತರಿಸಿದ ರೇಣುಕಾಚಾರ್ಯ, ನಿಮ್ಮ ಮೇಲೆ ಬಂದಿರುವ ಆರೋಪವನ್ನು ಮುಚ್ಚಿಕೊಳ್ಳುಲು ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದೀರಿ.
ರಾಜ್ಯದ ಜನರು ದಂಗೆ ಏಳುವಂತೆ ಪ್ರಚೋಧನೆ ನೀಡುತ್ತಿದ್ದೀರಿ.ನೀವು ಎಷ್ಟು ಬಾರಿ ಪ್ರಧಾನಿಗಳನ್ನು , ಹಣಕಾಸು ಸಚಿವರನ್ನು ಭೇಟಿ ಮಾಡಿದ್ರಿ.ನೀವು ದೆಹಲಿಗೆ ಹೋಗುವುದು ಕುರ್ಚಿ ಉಳಿಸಿಕೊಳ್ಳಲು ಮಾತ್ರ. ಆ ಪಪ್ಪು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಹೋಗ್ತಿರಿ. ಬಲಿಪಶು ಮಾಡಿದ ಖರ್ಗೆಯವರನ್ನು ಭೇಟಿ ಮಾಡ್ತಿರಿ. ಆ ಎಳಸು ಪಪ್ಪುನಾ ಭೇಟಿ ಮಾಡ್ತಿರಾ ನೀವು ಪ್ರಧಾನಿಗಳನ್ನು ಭೇಟಿ ಮಾಡೋದಿಲ್ಲ ಎಂದು ಹೇಳಿದರು.
..
..