ಶಿವಮೊಗ್ಗ: ಕೋಣಂದೂರು ಸಮೀಪದ ಹುಂಚದ ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತಳ್ಳಿಯ ಗುರುಮೂರ್ತಿ ಅವರ ಅಡಿಕೆ ತೋಟದಲ್ಲಿ ಬೆಳೆದಿದ್ದ 9 ಕೆ.ಜಿ. ತೂಕದ ಗಾಂಜಾದ ಹಸಿ ಗಿಡಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತರ ನೇತೃತ್ವದ ತಂಡ ದಾಳಿ ನಡೆಸಿ ಮನೆಯ ಹಿಂಭಾಗ ಅಡಕೆ ಗಿಡಗಳ ಮಧ್ಯೆ ಬೆಳೆದಿದ್ದ ಅಂದಾಜು 2.50 ಲಕ್ಷ ಮೌಲ್ಯದ 14 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
—–