ದಾವಣಗೆರೆ: ರಾಜ್ಯ ಸರಕಾರ ದಾವಣಗೆರೆ ಎಸ್ಪಿ ಉಮಾಪ್ರಶಾಂತ್‌ಗೆ ಜ್ಯೂನಿಯರ್ ದಾವಣಗೆರೆ ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಗ್ರೇಡ್ ನೀಡಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ವೇತನ ಶ್ರೇಣಿ ಹೆಚ್ಚಳಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯಲ್ಲಿ ಕೇಡರ್ ಆಧಾರದಲ್ಲಿ ಅವರನ್ನು ಪರಿಗಣಿಸಲಾಗುವುದು. ಸದ್ಯ ಮುಂದಿನ ಆದೇಶದವರೆಗೆ ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಮೂರನೇ ಮಹಿಳಾ ಎಸ್ಪಿ
ದಾವಣಗೆರೆಗೆ ಮೊದಲು 2003-2004 ರಲ್ಲಿ ಮಾಲಿನಿ ಕೃಷ್ಣಮೂರ್ತಿ, ನಂತರ 2006 ಮತ್ತು 2008 ರಲ್ಲಿ ಸೋನಿಯಾ ನಾರಂಗ್ ನಂತರ ಉಮಾ ಪ್ರಶಾಂತ್ ಬಂದಿದ್ದು, ದಾವಣಗೆರೆಗೆ ಉಮಾಪ್ರಶಾಂತ್ ಮೂರನೇ ಮಹಿಳಾ ಎಸ್ಪಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಸಾಕಷ್ಟು ಕ್ರಮ ಕೈಗೊಂಡಿದ್ದಾರೆ.
ಮೂಲತಃ ಮೈಸೂರು ಜಿಲ್ಲೆ ಕೆಆರ್ ನಗರದವರಾಗಿದ್ದಾರೆ. ಎಂಎ ಅರ್ಥಶಾಸ್ತ್ರ ಓದಿದ ಉಮಾಪ್ರಶಾಂತ್ ಗೋಲ್ಡ್ ಮೆಡಲ್ ಪಡೆದಿದ್ದಾರೆ. 2010 ನೇ ಬ್ಯಾಚ್ ನ ಕೆಎಸ್‌ಪಿಎಸ್ ಅಧಿಕಾರಿಯಾಗಿದ್ದಾರೆ. ಮೂಲ ಮತ್ತು ಪ್ರಾಯೋಗಿಕ ತರಬೇತಿ ನಂತರ ಕುಣಿಗಲ್ ಉಪವಿಭಾಗದ ಕಾರವಾರ ಕರ್ನಾಟಕ ಲೋಕಾಯುಕ್ತ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ಡಿಸಿಪಿ, ಎಸಿಬಿ ಎಸ್ಪಿಯಾಗಿಯೂ ಆಡಳಿತ ನೀಡಿದ ಅನುಭವವಿದೆ. ವರ್ಷದಿಂದ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾನೂನು, ಶಾಂತಿ, ಸುವ್ಯವಸ್ಥೆ, ಅಪರಾಧ ತಡೆ, ಪತ್ತೆ ಕಾರ್ಯದಲ್ಲಿ ಯಶಸ್ವಿ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಲ್ಯಾಣ ಹೆಚ್ಚು ಒತ್ತು ನೀಡಿದ್ದಾರೆ.ಅಲ್ಲದೇ ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಮಾಡಿದ್ದಾರೆ.
ಜೊತೆಗೆ ಮಾನವೀಯತೆ ಮೌಲ್ಯ ಬೆಳೆಸಿಕೊಂಡು ವೃತ್ತಿಪರ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅಕ್ರಮ ಚಟುವಟಿಕೆ ಸಾಮಾಜಿಕ ಪಿಡುಗುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಹಾಗೂ ಸಾರ್ವಜನಿಕ ಸಂಬAಧ ಸಮಸ್ಯೆ ಬಗೆಹರಿಸಲು ಪಣ ತೊಟ್ಟಿದ್ದಾರೆ. ಜನರ ಪರವಾಗಿ ಕೆಲಸ ಮಾಡುವ ಉಮಾಪ್ರಶಾಂತ್‌ಗೆ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.