ಬೆಂಗಳೂರು.
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಖಜಾಂಚಿ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ 65 ಮತಗಳ ಅಂತರಿAದ ಗೆಲುವು ಸಾಧಿಸಿದ್ದಾರೆ.
ನಗರದ ಕಬ್ಬನ್ ಪಾರ್ಕ್ ಉದ್ಯಾನವನ ಆವರಣದ ನೌಕರರ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ 2024-2029ನೇ ಅವಧಿಯ ಚುನಾವಣೆ ಬೆಳಗ್ಗೆ 9 ಗಂಟೆಯಿAದ ಸಂಜೆ 4 ರವರೆಗೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪಧಿಸಿದ್ದ ಸಿ.ಎಸ್.ಷಡಾಕ್ಷರಿ 507 ಮತಗಳನ್ನು ಪಡೆದುಕೊಂಡಿದ್ದರೆ ಪ್ರತಿಸ್ಪರ್ಧಿ ಬಿ.ಪಿ.ಕೃಷ್ಣೇಗೌಡ 442 ಮತಗಳನ್ನು ಪಡೆದುಕೊಂಡರು. ಖಚಾಂಚಿ ಸ್ಥಾನದ ಆಕಾಂಕ್ಷಿಗಳಾಗಿದ್ದ ವಿ.ವಿ.ಶಿವರುದ್ರಯ್ಯ 485 ಮತ ಪಡೆದರೆ, ನಾಗರಾಜ್ ಆರ್.ಜುಮ್ಮನ್ನವರ 467 ಮತಗಳನ್ನು ಪಡೆದುಕೊಂಡಿದ್ದಾರೆ.
ಖಜಾಂಚಿ ಸ್ಥಾನಕ್ಕೆ ವಿ.ವಿ ಶಿವರುದ್ರಯ್ಯ ಜಯಸಾಧಿಸಿದ್ದಾರೆ ಎಂದು ರಾಜ್ಯ ಚುನಾವಣಾಧಿಕಾರಿ ಎ.ಹನುಮನರಸಯ್ಯ ಘೋಷಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ 5.25 ಲಕ್ಷ ನೌಕರರನ್ನು ಪ್ರತಿನಿಧಿಸುವ ಬಹೃತ್ ಸಂಘಟನೆಯಾಗಿದೆ. 30 ಜಿಲ್ಲಾ ಶಾಖೆ, 3 ಶೈಕ್ಷಣಿಕ ಜಿಲ್ಲೆಗಳು, 186 ತಾಲೂಕು ಶಾಖೆಗಳು ಮತ್ತು 7 ಯೋಜನಾ ಶಾಕೆಗಳನ್ನು ಹೊಂದಿದೆ. ಜಿಲ್ಲಾ ಶಾಖೆಗಳಲ್ಲಿ 66 ನಿರ್ದೇಶಕರುಗಳು, ಜಿಲ್ಲಾಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿತ್ತು.
ಅದೇ ರೀತಿ ತಾಲೂಕು ಶಾಖೆಗಳಲ್ಲಿ 34 ನಿರ್ದೇಶಕರು, ತಾಲೂಕು ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆಗೊಂಡಿದ್ದರು.
ಬೆಂಗಳೂರು ನಗರ ಜಿಲ್ಲೆಯ ವಿವಿಧ ಇಲಾಖೆಗಳಿಂದ 102 ರಾಜ್ಯ ಪರಿಷತ್ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆಗೊಂಡಿದ್ದರು. ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಯಲ್ಲಿ 102 ಪರಿಷತ್ ಸದ್ಯರು, ಜಿಲ್ಲಾಧ್ಯಕ್ಷರು, ಖಜಾಂಚಿ, ಜಿಲ್ಲಾ ಕಾರ್ಯದರ್ಶಿಗಳು ಸೇರಿ ಒಟ್ಟು 971 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದರು.
ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಮತ್ತು ಬೆಂಗಳೂರಿನ ವಿವಿಧ ಇಲಾಖೆಗಳ ರಾಜ್ಯ ಪರಿಷತ್ ಸದಸ್ಯರ ಆಶೀರ್ವಾದಿಂದ ಎರಡನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಸಂಘದ ಮತ್ತು ರಾಜ್ಯದ ಎಲ್ಲ ನೌಕರರ ಕ್ಷೇಯೋಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡುತ್ತೇನೆ.
-ಸಿ.ಎಸ್.ಷಡಾಕ್ಷರಿ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು