ಬೆಂಗಳೂರು: ಹೊಸವರ್ಷದಲ್ಲಿ ಎಂಜಾಯ್ ಮಾಡುವುದಕ್ಕೇಂದೇ ಯುವ ಪಡೆ ಮದ್ಯವನ್ನು ಆಯ್ಕೆ ಮಾಡಿಕೊಂಡಿದ್ದು, ಇಡೀ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಸೇಲ್ ಆಗಿದೆ. ಅಷ್ಟಕ್ಕೂ ಎಷ್ಟು ಮದ್ಯ ಸೇಲ್ ಆಗಿದೆ ಎಂಬುದಕ್ಕೆ ಈ ಸುದ್ದಿ ಓದಿ.
ಕಂಠಪೂರ್ತಿ ಎಣ್ಣೆ, ಹ್ಯಾಪಿ ನ್ಯೂಯರ್ ಎಂದು ವಾಲಾಡುತ್ತಾ ಹೊಸ ವರ್ಷದ ಬರುವಿಕೆಗೆ ಕಾದಿದ್ದ ಯೂತ್ಸ್ ಗಂಟೆ 12 ಆದ ಬಳಿಕ ಇನ್ನಷ್ಟು ಎಣ್ಣೆ ಹೀರಿ ಹೊಸವರ್ಷವನ್ನು ಬರ ಮಾಡಿಕೊಂಡರು.
ಕರ್ನಾಟಕದ ಎಲ್ಲ ಬಾರ್ ಆಂಡ್ ರೆಸ್ಟೋರೇಂಟ್‌ಗಳು ತುಂಬಿ ತುಳುಕಿದವು. ಬೆಂಗಳೂರಿನಲ್ಲಿ ಹೊಸವರ್ಷ ಆಚರಣೆ ಅದ್ಧೂರಿಯಾಗಿ ನಡೆದಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಲಕ್ಷಾಂತರ ಮಂದಿ ಸಂಭ್ರಮಿಸಿದ್ದರು. ಕೆಲವೆಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ, ಒಟ್ಟಾರೆಯಾಗಿ ಹೊಸ ವರ್ಷದ ಸ್ವಾಗತ, ಸಂಭ್ರಮಾಚರಣೆ ಶಾಂತಿಯುತವಾಗಿ ನೆರವೇರಿದೆ. ಈ ವೇಳೆ ಬಾರ್,ಪಬ್,ರೆಸ್ಟೋರೆಂಟ್‌ಗಳಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಸಾಕಷ್ಟು ಹಣ ಹರಿದು ಬಂದ್ದಿದ್ದು, ಕೇವಲ ಅರ್ಧ ದಿನಕ್ಕೆ 193 ಕೋಟಿ ರೂ. ಮದ್ಯ ಸೇಲ್ ಆಗಿತ್ತು.
ಅಬಕಾರಿ ಇಲಾಖೆಯು 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಹೊಂದಿತ್ತು. ಆದರೆ, ನಿರೀಕ್ಷೆಗೂ ಮೀರಿ ಮದ್ಯ ಮಾರಾಟವಾಗಿರುವುದಕ್ಕೆ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಕಳೆದ ವರ್ಷ 2023ರ ಡಿಸೆಂಬರ್ 31 ರಂದು 193 ಕೋಟಿ ರೂಪಾಯಿ ಮದ್ಯ ಮಾರಾಟವಾಗಿತ್ತು. ಆದರೆ, 2024 ಡಿಸೆಂಬರ್ 31 ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ.
ಐಎಂಎಲ್ 4,83,715 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್ ದಾಖಲೆ ಮಟ್ಟದಲ್ಲಿ ಮಾರಾಟವಾಗಿದ್ದು ಸುಮಾರು 92,339 ಲಕ್ಷ ಬಾಕ್ಸ್ ಮಾರಾಟದಿಂದ 57.75 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಹೆಚ್ಚಿದ್ದ ಮದ್ಯ ಮಾರಾಟ:
ಹೊಸ ಆರಂಭಕ್ಕೂ ಮುನ್ನು ಸಾಲು ಸಾಲು ರಜೆ ಇದ್ದ ಹಿನ್ನೆಲೆಯಲ್ಲಿ ಡಿ.27 ರಂದು ಸುಮಾರು 408.58 ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿತ್ತು. ಐಎಂಎಲ್ 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327,50 ಕೋಟಿ ರೂ ಆದಾಯ ಸಂಗ್ರಹವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಬಿಯರ್ 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80,58 ಕೋಟಿ ರೂ ಆದಾಯ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರೂ ಆದಾಯ ಹರಿದುಬಂದಿತ್ತು.
—