ದಾವಣಗೆರೆ: ಈಗಿನ ಖಾಸಗಿ ಬದುಕಿನಲ್ಲಿ ಎಲ್ಲರಿಗೂ ಅರ್ಜೆಂಟ್, ಸಮಯ ಪರಿಪಾಲನೆ ಮುಖ್ಯ. ಹೀಗಿರುವಾಗ ಕಚೇರಿಗೆ ಹೋಗಬೇಕಾದರೆ ಅಥವಾ ಅಪಘಾತವಾದರೆ ನಮ್ಮನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಬೀದಿಗೆ ಬರುತ್ತದೆ. ಆದರೆ ಇನ್ಮುಂದೆ ಈ ಚಿಂತೆ ಇಲ್ಲ.
ಹೌದು…ಸಮೂಹ ಅಪಘಾತ ಸುರಕ್ಷಾ ಪಾಲಿಸಿ ಎಂಬ ವಿಮಾ ಸೌಲಭ್ಯವನ್ನು ಕೆಲ ಮಾಪಾರ್ಡುಗಳೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ವರ್ಷಕ್ಕೆ 529 ರೂ.ಕಟ್ಟಿದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೇ ಆತನ ಕುಟುಂಬಕ್ಕೆ 10 ಲಕ್ಷ ರೂ.ಸಿಗಲಿದೆ.
ಏನಿದು ಸಮೂಹ ಅಪಘಾತ ಸುರಕ್ಷಾ ಪಾಲಿಸಿ
ಈ ಬಗ್ಗೆ ಅಂಚೆ ಇಲಾಖೆಯ ದಾವಣಗೆರೆ ಶಾಖೆಯ ಉಪ ಅಧೀಕ್ಷಕರಾದ ಗುರುಪ್ರಸಾದ್ ದಾವಣಗೆರೆ ಅಂಚೆ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮೂಹ ಅಪಘಾತ ಸುರಕ್ಷಾ ಪಾಲಿಸಿ
ಇದು ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಅಪಘಾತ ವಿಮಾ ಯೋಜನೆ .ಈ ಯೋಜನೆಯ ಮೊತ್ತ ಈ ಮೊದಲು 396 ರೂ ಪ್ರೀಮಿಯಂ ಇತ್ತು.ಈಗ 529 ರೂಗೆ ಹೆಚ್ಚಳ ಮಾಡಲಾಗಿದೆ ಎಂದರು.
“ಈ ಪಾಲಿಸಿಯಿಂದ ಆಗುವ ಪ್ರಯೋಜನ”
ಯಾವುದೇ ಒಬ್ಬ ವ್ಯಕ್ತಿ ಮರಣಿಸಿದಾಗ ವಿಮಾ ಮೊತ್ತ ಹತ್ತು ಲಕ್ಷ ರೂ ಅವರ ನಾಮಿನಿಗೆ ಸಲ್ಲುತ್ತದೆ.ಮೊದಲಿಗಿಂತ ಹಲವಾರು ಪ್ರಯೋಜನ ಈಗ ಪಡೆಯಬಹುದು.ಅಪಘಾತ ವಿಮೆ ಪಡೆಯಲು ಒಳರೋಗಿ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರೆ 1 ಲಕ್ಷ ರೂ ನೀಡಲಾಗುವುದು. ಅಪಘಾತದಲ್ಲಿ ಮರಣಿಸಿದರೆ ಮಾತ್ರವಲ್ಲದೇ ಗಾಯಾಳುಗಳಾದರೂ ಕೂಡ ಸೌಲಭ್ಯ ನೀಡಬಹುದಾಗಿದೆ.
ಏನೇನು ಸೌಲಭ್ಯ ಸಿಗಲಿದೆ
ಅಪಘಾತದಿಂದ ಕೋಮಾಗೆ ಹೊದರೆ ಹತ್ತು ಲಕ್ಷ ನೀಡಲಾಗುವುದು.ಇದರಲ್ಲಿ ಎರಡು ಉಪಯೋಗಗಳಿದ್ದು 520 ರೂ ವಿಮೆ ಪಾವತಿಸಿದರೆ ಹತ್ತು ಲಕ್ಷ ರೂ ಹಾಗೂ 320 ರೂಗೆ 5 ಲಕ್ಷ ರೂ ಅಪಘಾತ ವಿಮೆ ನೀಡಲಾಗುವುದು. ಅಪಘಾತದಲ್ಲಿ ಮರಣಿಸಿದವರ ಮಕ್ಕಳಿಗೆ 1 ಲಕ್ಷ ರೂ ವಿದ್ಯಾಭ್ಯಾಸದ ಖರ್ಚು ನೀಡಲಾಗುತ್ತದೆ. ಜೊತೆಗೆ ವೈದ್ಯಕೀಯ ವೆಚ್ಚ 30 ಸಾವಿರ ರೂ,ಕುಟುಂಬದ ಸದಸ್ಯರಿಗೆ ಸಾರಿಗೆ ವೆಚ್ಚವಾಗಿ 25 ಸಾವಿರ ನೀಡಲಾಗುವುದು.
ಅಂಚೆ ಇಲಾಖೆಯಲ್ಲಿ ಹಲವಾರು ಉಪಯುಕ್ತ ವಿಮಾ ಸೌಲಭ್ಯಗಳಿವೆ.ಉತ್ತಮ ಯೋಜನೆಗಳಿವೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
“ದಾಖಲಾತಿಗಳು ಏನೇನು ಬೇಕು”
ಅಂಚೆ ಇಲಾಖೆಯಲ್ಲಿ ಪಾಲಿಸಿ ಮಾಡಿಸಲು ಮೊದಲುಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಮಾಡಿಸಬೇಕು.ಹಾಗೂ ಖಾತೆಯಲ್ಲಿ ಕನಿಷ್ಠ ಐದು ನೂರು ರೂ. ಡಿಪಾಸಿಟ್ ಮಾಡಬೇಕು. ಜೊತೆಗೆ ಪಾಲಿಸಿಯ ಪ್ರೀಮಿಯಂ 520 ರೂ ಪಾವತಿಸಬೇಕು.1020 ರೂ ಗಳೊಂದಿಗೆ ಖಾತೆ ತೆರೆಯಬೇಕು. ನಂತರ ಪಾಲಿಸಿ ಪಡೆಯಲು ಅರ್ಜಿ ನೀಡಲಾಗುತ್ತದೆ ಅದಕ್ಕೆ ದಾಖಲಾತಿಗಳನ್ನು ನೀಡಿ ಅರ್ಜಿ ಭರ್ತಿ ಮಾಡಿಕೊಡಬೇಕು ಎಂದು ಗುರುಪ್ರಸಾದ್ ಹೇಳುತ್ತಾರೆ.
ವಿಮೆ ಹಣ ಹೇಗೆ ಪಡೆಯುವುದು
ಪಾಲಿಸಿ ಮೊತ್ತ ಒಂದು ವರ್ಷಕ್ಕೆ 520 ರೂ ಪಾವತಿ ಮಾಡಬೇಕು.ಈ ಸೌಲಭ್ಯ ಪಡೆಯಲು ಪಾಲಿಸಿದಾರರು ಮರಣಿಸಿದರೆ ಎಲ್ಲಾ ದಾಖಲಾತಿಗಳೊಂದಿಗೆ ಅಂಚೆಇಲಾಖೆಗೆ ಸಂಬಂಧಿಸಿದ ಪೋಸ್ಟ್ ಮಾಸ್ಟರ್ ನ್ನು ಸಂಪರ್ಕಿಸಬೇಕು. ಪಾಲಿಸಿಯ ಅಕೌಂಟ್ ನಂಬರ್ ನೊಂದಿಗೆ ಪಾಲಿಸಿದಾರರ ಮರಣ ಪ್ರಮಾಣಪತ್ರ ಅಪಘಾತಕ್ಕೆ ಕಾರಣ ಸೇರಿದಂತೆ ಸೂಕ್ತ ದಾಖಲಾತಿಗಳನ್ನು ನೀಡಿ ಪಾಲಿಸಿ ಮೊತ್ತ ಪಡೆಯಬಹುದಾಗಿದೆ.
ಈ ಎಲ್ಲ ಪ್ರಕ್ರಿಯೆಗಳು ಮೇಲಾಧಿಕಾರಿಗಳು ಪರಿಶೀಲಿಸಿದ ನಂತರ ಪಾಲಿಸಿ ಮೊತ್ತ ಬಿಡುಗಡೆ ಮಾಡಲಿದ್ದಾರೆಂದು
ಅಂಚೆ ಇಲಾಖೆಯ ಉಪ ಅಧೀಕ್ಷಕರಾದ ಗುರುಪ್ರಸಾದ್ ಹೇಳಿದರು.
ಮ್ಯಾನೇಜರ್ ಶ್ರೀನಿವಾಸ್ ಹೇಳೋದೇನು?
ಇಂಡಿಯಾ ಪೋಸ್ಟ್ ಬ್ಯಾಂಕ್ ದಾವಣಗೆರೆ ಶಾಖೆಯ ಮ್ಯಾನೇಜರ್ ಶ್ರೀನಿವಾಸ್ ಮಾತನಾಡಿ, ಅಪಘಾತ ಪಾಲಿಸಿಯಲ್ಲಿ ಕೇವಲ ಮರಣ ಮಾತ್ರವಲ್ಲ ಯಾವುದೇ ರೀತಿ ಅಂಗವೈಕಲ್ಯವಾದಲ್ಲಿ ಪೂರ್ಣ ಹಾಗೂ ಭಾಗಶಃ ವೈಕಲ್ಯಕ್ಕೆ ಹತ್ತು ಲಕ್ಷ ವಿಮೆ ಅನ್ವಯವಾಗುತ್ತದೆ.ಅದರ ಜೊತೆ ಅಪಘಾತವಾದ ಬಳಿಕ ಉಂಟಾಗುವ ತೊಂದರೆಗಳು ಅಂದರೆ ಪಾರ್ಶ್ವವಾಯು ಅಥವಾ ಕೈಕಾಲುಗಳಿಗೆ ಊನವಾದಲ್ಲಿ ಅದಕ್ಕೂ ಹತ್ತು ಲಕ್ಷ ವಿಮೆ ಸೌಲಭ್ಯ ಇರುತ್ತದೆ.
ಅಪಘಾತದಿಂದ ಸಾವು,ಸಂಪೂರ್ಣ ವೈಕಲ್ಯ,ಭಾಗಶಃ ವೈಕಲ್ಯ,ಪಾರ್ಶ್ವ ವಾಯು ಅಂತಹ ಪರಿಸ್ಥಿತಿ ಬಂದರೆ ಅವರ ಮಕ್ಕಳಿಗೆ ಶೈಕ್ಷಣಿಕ ಉಪಯೋಗಕ್ಕಾಗಿ ಒಂದು ಲಕ್ಷದ ಮಿತಿಯಲ್ಲಿ ವಿಮಾ ಸೌಲಭ್ಯ ಇರುತ್ತದೆ.ಶೈಕ್ಷಣಿಕ ಸೌಲಭ್ಯಕ್ಕಾಗಿ ಶಾಲಾ ದಾಖಲಾತಿಗಳು ಶುಲ್ಕ ಪಾವತಿಯ ರಸೀದಿ ನೀಡಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಸಂತೋಷ್ ಇದ್ದರು.