


ನಂದೀಶ್ ಭದ್ರಾವತಿ, ದಾವಣಗೆರೆ
ಅದೊಂದು ರಾತ್ರಿ ಇಡೀ ಚನ್ನಗಿರಿ ಪಟ್ಟಣ ಹೊತ್ತು ಉರಿಯುತ್ತಿತ್ತು, ಪೊಲೀಸ್ ಠಾಣೆಯನ್ನೇ ಕಿಡಿಗೇಡಿಗಳು ಧ್ವಂಸ ಮಾಡಿದ್ದರು..ನಗರದಲ್ಲಿ ಪ್ರಕ್ಷುಬ್ಧ ವಾತಾವರಣ. ಇಲ್ಲಿನ ಗಲಾಟೆ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ನಡುವೆ ಒಬ್ಬ ಮಹಿಳಾ ಅಧಿಕಾರಿಯಾಗಿ ಎಸ್ಪಿ ಉಮಾಪ್ರಶಾಂತ್ ರಾತ್ರೋ ರಾತ್ರಿ ಪಟ್ಟಣಕ್ಕೆ ನುಗ್ಗಿ ಕಿಡಿಗೇಡಿಗಳನ್ನು ಮಟ್ಟ ಹಾಕಿದರು. ಎಲ್ಲ ಕಡೆ ಸೂಕ್ತ ಬಂದೋ ಬಸ್ತ್ ಮಾಡಿ ಶಾಂತಿ ನೆಲೆಸುವಂತೆ ಮಾಡಿದರು..

ಇನ್ನು ದಾವಣಗೆರೆ ದಕ್ಷಿಣದಲ್ಲಿ ಗಣಪತಿ ವಿಸರ್ಜನೆ ವೇಳೆ ಆದ ಕೋಮು ಗಲಾಟೆಯಲ್ಲಿ ಎಸ್ಪಿ ಉಮಾಪ್ರಶಾಂತ್ ಸ್ವತಃ ಲಾಠಿ ಹಿಡಿದು ಕಿಡಿಗೇಡಿಗಳನ್ನು ಮಟ್ಟ ಹಾಕಿದರು. ದಾವಣಗೆರೆ ವೆಂಕಾ ಭೋವಿ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಅಲ್ಲದೇ
ಯಾವುದೇ ಸಮಸ್ಯೆಗೆ ಅವಕಾಶ ಕೊಡದೆ ಕಠಿಣ ಕ್ರಮ ತೆಗೆದುಕೊಂಡಿದ್ದರು. ಹೀಗಾಗಿ ಬೆಣ್ಣೆನಗರಿ ದಾವಣಗೆರೆ ಸಹಜ ಸ್ಥಿತಿಗೆ ಮರಳಿತ್ತು.ದಾವಣಗೆರೆ ನಗರದಲ್ಲಿ ಶಾಂತಿ ನೆಲೆಸುವಲ್ಲಿ ಪೊಲೀಸರ ಕಾರ್ಯವೈಖರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಹಳೆ ದಾವಣಗೆರೆಯ ಬೇತೂರು ರಸ್ತೆ ಹಾಗೂ ಅರಳಿಮರದ ವೃತ್ತದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಣೇಶ ಮೂರ್ತಿಯನ್ನು ಸುಗಮವಾಗಿ ವಿಸರ್ಜನೆ ಮಾಡುವಂತೆ ನೋಡಿಕೊಂಡರು.

ಉತ್ತರ ಪ್ರದೇಶದ ದರೋಡೆಕೋರರಿಗೆ ಗುಂಡು
ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ಮೇಲೆ ದಾವಣಗೆರೆ ಪೊಲೀಸರು ಗುಂಡು ಹಾರಿಸಿ ನಾಲ್ವರನ್ನು ಸೆರೆ ಹಿಡಿದಿದ್ದರು. ರಾಜ್ಯದಲ್ಲಿ ನಡೆದಿದ್ದ ಕೋಟ್ಯಾಂತರ ರೂ. ಮೌಲ್ಯದ ದರೋಡೆ ಪ್ರಕರಣಗಳು ಬಯಲಿಗೆ ಬಂದಿತ್ತು. ಮುಂಜಾನೆ 1.40ರ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಉತ್ತರ ಪ್ರದೇಶ ಮೂಲದ ಹಜರತ್ ಆಲಿ (50), ಅಸ್ಲಾಂ ಟನ್ ಟನ್ (55), ಕಮರುದ್ದೀನ್ ಅಲಿಯಾಸ್ ಬಾಬು ಸೆರಲಿ (40) ಎಂಬುವವರನ್ನು ಬಂಧಿಸಲಾಗಿತ್ತು.
ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಬಂದಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದಿದ್ದರು. ಹೊನ್ನಾಳಿ ಬಳಿ ಪೊಲೀಸರ ತಂಡ ನಾಕಬಂಧಿ ಮಾಡಿ ಕಳೆದ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದರು. ಎರೆಟಿಗಾ ಹಾಗೂ ಮಹೀಂದ್ರ ಎಸ್‌ಯುವಿ 500 ಉತ್ತರ ಪ್ರದೇಶ ನೋಂದಣಿಯ ಕಾರು ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಹೋಗುತ್ತಿತ್ತು. ಈ ವೇಳೆ ಇವರನ್ನು ಹೊನ್ನಾಳಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಡೆಯಲು ಪೊಲೀಸರು ಯತ್ನಿಸಿದ್ದರು. ಆದರೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದರು. ನಂತರ ಪೊಲೀಸರು ಅವರ ಕಾರನ್ನು ಬೆನ್ನಟ್ಟಿದಾಗ ಅರಬಘಟ್ಟ ಬಳಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಕಾನ್‌್ಸಟೇಬಲ್ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು.
ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತರಕ್ಷಣೆಗಾಗಿ ಇನ್‌ಸ್ಪೆಕ್ಟರ್ ರವಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ನಂತರ ಆತರಕ್ಷಣೆಗಾಗಿ ಹಾರಿಸಿದ ಒಂದು ಗುಂಡು ಗುಡ್ಡು ಅಲಿಯಾನ್ (45) ಕಾಲಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದ. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದರು.
ಗ್ಯಾಂಗ್‌ನ ನಾಯಕ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದರು. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿತ್ತು. ಒಂದು ವಾರದ ಹಿಂದೆ ಕರ್ನಾಟಕಕ್ಕೆ ಬಂದ ಇವರು ದಾವಣಗೆರೆಯಲ್ಲಿ ಬಿಡಾರ ಹೂಡಿ ಸವಳಂಗ ಗ್ರಾಮದ ಎಸ್‌ಬಿಐ ಬ್ಯಾಂಕ್ ದರೋಡೆ ಮಾಡಲು ಸಂಚು ರೂಪಿಸಿದ್ದರು.
ಈ ತಂಡ ಫೆಬ್ರುವರಿಯಲ್ಲಿ ಕೇರಳ, ಹಿಮಾಚಲ ಪ್ರದೇಶ, ಹರಿಯಾಣ, ಆಂಧ್ರಪ್ರದೇಶ ತಮಿಳುನಾಡಿಗೂ ತನಿಖಾ ತಂಡ ಭೇಟಿ ನೀಡಿತ್ತು. ಮಾರ್ಚ್‌ನಲ್ಲಿ ಮತ್ತೊಮ್ಮೆ ಉತ್ತರಪ್ರದೇಶದ ಕಕ್ರಾಳ್‌ಗೆ ತೆರಳಿತ್ತು. ಈ ಗ್ಯಾಂಗ್ ಕರ್ನಾಟಕಕ್ಕೆ ಬಂದಿರುವ ಸುಳಿವು ಲಭ್ಯವಾಗುತ್ತಿದ್ದಂತೆ ಮಾರ್ಚ್ 16ರಂದು ಜಿಲ್ಲೆಯ ಎಲ್ಲೆಡೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ನಿಗಾ ಇಡಲಾಗಿತ್ತು. ಆಗ ಉತ್ತರಪ್ರದೇಶದ ಗ್ಯಾಂಗ್ ಸಿಕ್ಕಿಬಿದ್ದಿತ್ತು’ .
ಈ ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ 3.33,82.940 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದರೆಂದು ಗೊತ್ತಾಗಿತ್ತು. . ಇದಲ್ಲದೇ ಕೊಪ್ಪಳದ ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ 1.46,55,905 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತಿತ್ತರ ವಸ್ತುಗಳ ಪ್ರಕರಣ ಕೂಡ ಬಳಕಿಗೆ ಬಂದಿತ್ತು.
ಶಿವಮೊಗ್ಗದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳತನ, ಹಾವೇರಿ ಜಿಲ್ಲೆಯ ತಡಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದು ತಿಳಿದುಬಂದಿತ್ತು
ತಮಿಳುನಾಡಿನ ಕೃಷ್ಣಗಿರಿ, ಜಾರ್ಖಂಡ್‌ನ ಪಳಮು ಜಿಲ್ಲೆಯಲ್ಲೂ ಇವರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಆರೋಪಿಗಳು ಕರ್ನಾಟಕದಲ್ಲಿ 2014ರಿಂದ 2024ರವರೆಗೆ ರಾಜ್ಯದ ಹಲವೆಡೆ ಬ್ಯಾಂಕ್‌ಗಳು ಸೇರಿದಂತೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ವಾಹನದಲ್ಲಿ ಮಾರಕಾಸ್ತ್ರಗಳು, 4 ಜೀವಂತ ಗುಂಡುಗಳು, ಅಕ್ಸಿಜನ ಸಿಲೆಂಡರ್ ರೆಗ್ಯುಲೇಟರ್, 3 ಕಬ್ಬಿನ ರಾಡ್, 5 ಪ್ಯಾಕೆಟ್ ಮೆಣಸಿನ ಪುಡಿ, 5 ಜೋತೆ ಹ್ಯಾಂಡ್ ಗ್ಲೌಸ್, ಒಂದು ಮಚ್ಚು ವಶಪಡಿಸಿಕೊಳ್ಳಲಾಗಿತ್ತು. ಈ ಘಟನೆಯಲ್ಲಿ ಸಿಬ್ಬಂದಿಗಳದ್ದೇ ಪಾತ್ರ ಇದ್ದರೂ, ಎಸ್ಪಿ ಉಮಾಪ್ರಶಾಂತ್ ತಮ್ಮದೇ ಚಾಣಾಕ್ಷತೆ ಮೆರೆದಿದ್ದರು.
ಬ್ಯಾಂಕ್ ದರೋಡೆ, 15.30 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆ ಮಾಡಿದ್ದ ಎಸ್ಪಿ ಉಮಾಪ್ರಶಾಂತ್ ತಂಡ
ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್‌ಬಿಐ) ನೆಹರೂ ರಸ್ತೆಯ ಶಾಖೆಯ ರೂ. 15.30 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸುವಲ್ಲಿ ಉಮಾಪ್ರಶಾಂತ್ ನೇತೃತ್ವದ ತಂಡ ಭೇದಿಸಿತ್ತು. ಬಂಧಿತ ಆರೋಪಿಗಳು ಬ್ಯಾಂಕ್ ದರೋಡೆಗೆ ಸಂಬಂಧಿಸಿದ ‘ಮನಿ ಹೀಸ್ಟ್’ ವೆಬ್ ಸರಣಿಯಿಂದ ಪ್ರೇರಣೆ ಪಡೆದಿದ್ದರು.
ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಬ್ಯಾಂಕ್ ಕಳವಿಗೆ ಸಂಬಂಧಿಸಿದ ವಿಡಿಯೊಗಳನ್ನು ಗಮನಿಸಿ 6 ಜನ ಆರೋಪಿಗಳು ವೃತ್ತಿಪರತೆ ಮೈಗೂಡಿಸಿಕೊಂಡಿದ್ದರು. ಸಿನಿಮೀಯ ಮಾದರಿಯಲ್ಲಿ ಬ್ಯಾಂಕ್‌ನಿಂದ ಕಳವು ಮಾಡಿದ್ದ 17 ಕೆ.ಜಿ. 750 ಗ್ರಾಂ ಚಿನ್ನಾಭರಣದಲ್ಲಿ 17 ಕೆ.ಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಮೊದಲು ಐವರನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆಯ ನಂತರ ದೊರೆತ ಸುಳಿವಿನ ಮೇರೆಗೆ ತಮಿಳುನಾಡಿನ ಮಧುರೆಗೆ ತೆರಳಿ ಅಲ್ಲಿನ ಬಸ್ ನಿಲ್ದಾಣದಲ್ಲಿ ಇನ್ನೊಬ್ಬ ಆರೋಪಿ ಪರಮಾನಂದ (30) ಎಂಬುವನನ್ನು ಸೆರೆ ಹಿಡಿದಿದ್ದರು.
‘ಪ್ರಮುಖ ಆರೋಪಿ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯ ವಿಜಯ್‌ಕುಮಾರ್ (30) ಮಹಾತ್ವಾಕಾಂಕ್ಷೆ ಹೊಂದಿದ್ದ ವ್ಯಾಪಾರಿ. ಬೇಕರಿ ವ್ಯವಹಾರದ ವಿಸ್ತರಣೆಗೆ ಸಾಲ ಸೌಲಭ್ಯ ಸಿಗದ ಬಳಿಕ ಬ್ಯಾಂಕ್ ಕಳವಿಗೆ ಆಲೋಚಿಸಿದ್ದ. ‘ಮನಿ ಹೀಸ್ಟ್’ ಸೇರಿದಂತೆ ಹಲವು ವೆಬ್ ಸರಣಿ, ಸಿನಿಮಾ ಹಾಗೂ ವಿಡಿಯೊಗಳನ್ನು 6 ತಿಂಗಳು ನೋಡಿ ಬ್ಯಾಂಕ್ ಕಳವಿಗೆ ಯೋಜನೆ ರೂಪಿಸಿದ್ದ. ‘ದಿಢೀರ್ ಶ್ರೀಮಂತನಾಗುವ ಬಯಕೆ ವಿಜಯ್‌ಕುಮಾರ್‌ಗೆ ಇತ್ತು. ಇದಕ್ಕೆ ನ್ಯಾಮತಿಯ ಎಸ್‌ಬಿಐ ಶಾಖೆಯ ಕಳವಿನ ಆಲೋಚನೆಯನ್ನು ಸಹಚರರೊಂದಿಗೆ ಹಂಚಿಕೊಂಡು ಸಂಚು ರೂಪಿಸಿದ್ದ. ಅಗತ್ಯ ಸಾಮಗ್ರಿಗಳನ್ನು ಶಿವಮೊಗ್ಗ ಹಾಗೂ ನ್ಯಾಮತಿಯಲ್ಲಿ ಖರೀದಿಸಿದ್ದ. ಬ್ಯಾಂಕ್ ಬಳಿಗೆ ತೆರಳಿ ಸಿ.ಸಿ. ಟಿವಿ ಎಲ್ಲಿದೆ? ಕಟ್ಟಡಕ್ಕೆ ನುಗ್ಗಲು ಯಾವ ಸ್ಥಳ ಸುಲಭ? ಚಿನ್ನಾಭರಣವನ್ನು ಎಲ್ಲಿ ಭದ್ರಪಡಿಸಲಾಗಿದೆ? ಎಂಬ ವಿವರವನ್ನು ಅರಿತುಕೊಂಡಿದ್ದ’ .
‘ಕೃತ್ಯ ಎಸಗುವುದಕ್ಕೂ 15 ದಿನಗಳ ಮುನ್ನ ವಿಜಯ್‌ಕುಮಾರ್ ಹಾಗೂ ಅಭಿಷೇಕ್ ಬ್ಯಾಂಕ್ ಕಳವಿಗೆ ಸಂಬಂಧಿಸಿದಂತೆ ಅಣಕು ಪ್ರದರ್ಶನ ನಡೆಸಿದ್ದರು. ಸಣ್ಣ ವಿಚಾರಕ್ಕೂ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ ವೇಳೆ ಯಾವ ಸಮಯದಲ್ಲಿ ಪೊಲೀಸರು ಬ್ಯಾಂಕ್ ಬಳಿಗೆ ಗಸ್ತಿಗೆ ಬರುತ್ತಾರೆ ಎಂಬುದನ್ನೂ ಗಮನಿಸಿದ್ದರು. ಆದರೆ ಯಾರೊಬ್ಬರೂ ಮೊಬೈಲ್ ಫೋನ್ ಬಳಸಿರಲಿಲ್ಲ’
‘ಕೃತ್ಯ ಎಸಗಿದ ಬಳಿಕ ಸಣ್ಣ ಸಾಕ್ಷ್ಯವೂ ಸಿಗದಂತೆ ಎಚ್ಚರವಹಿಸಿದ್ದರು. ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್‌ಗ್ಲೌಸ್‍ಗಳನ್ನು ನಾಶಪಡಿಸಿದ್ದರು. ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲಿಂಡರ್ ಸೇರಿ ಇತರ ವಸ್ತುಗಳನ್ನು ಕೆರೆಗೆ ಎಸೆದಿದ್ದರು. ಬ್ಯಾಂಕಿನಿಂದ ತಂದಿದ್ದ ಹಾರ್ಡ್‌ಡಿಸ್ಕ್, ಡಿವಿಆರ್‌ಗಳನ್ನು ಕಲ್ಲಿನಿಂದ ಜಜ್ಜಿ ಹಾಳು ಮಾಡಿದ್ದರು’ .
‘ಕೃತ್ಯ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಒತ್ತು ನೀಡಿದ್ದರು. ಬ್ಯಾಂಕ್ ಸುತ್ತಲಿನ 8 ಕಿ.ಮೀ ವ್ಯಾಪ್ತಿಯ ಇಂಚಿಂಚು ಸ್ಥಳವನ್ನೂ ಶೋಧಿಸಿದ್ದರು. ಸಣ್ಣ ಸುಳಿವು ಸಿಗದಿರುವುದನ್ನು ನೋಡಿ ವೃತ್ತಿಪರ ದರೋಡೆಕೋರರು ಈ ಕೃತ್ಯ ಎಸಗಿರಬಹುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.
ಆದರೆ ಇದು ಹೊರ ರಾಜ್ಯದ ಕೃತ್ಯವಲ್ಲ ಎಂದು ಗೊತ್ತಾದಾಗ ಸ್ಥಳೀಯರ ಮೇಲೆ ಅನುಮಾನ ಮೂಡಿತ್ತು.
‘ಕೃತ್ಯ ಎಸಗಿದ ಬಳಿಕ ಚಿನ್ನಾಭರಣವನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದರು. ಕೆಲ ದಿನಗಳ ಬಳಿಕ ವಿಜಯ್‌ಕುಮಾರ್ ಈ ಚಿನ್ನವನ್ನು ತಮಿಳುನಾಡಿನ ಮಧುರೆ ಜಿಲ್ಲೆಯ ಸ್ವಗ್ರಾಮಕ್ಕೆ ಸಾಗಿಸಿದ್ದ. ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಭದ್ರಪಡಿಸಿ ಮನೆ ಸಮೀಪದ 30 ಅಡಿ ಆಳದ ಬಾವಿಗೆ ಎಸೆದಿದ್ದ’ ಈ ನಡುವೆ ‘ಚಿನ್ನದ ಒಂದಷ್ಟು ಭಾಗವನ್ನು ಮಾತ್ರ ಬ್ಯಾಂಕ್ ಮತ್ತು ಚಿನ್ನಾಭರಣ ಮಳಿಗೆಗಳಲ್ಲಿ ಅಡಿವಿಟ್ಟಿದ್ದ. ಇದರಿಂದ ಬಂದ ಹಣದಲ್ಲಿ ಅಭಿಷೇಕ್, ಮಂಜುನಾಥ್ ಹಾಗೂ ಚಂದ್ರುಗೆ ತಲಾ ರೂ.1 ಲಕ್ಷ ನೀಡಿದ್ದ. ಇನ್ನೂ ಒಂದೂವರೆ ವರ್ಷ ಅಥವಾ ಪ್ರಕರಣದ ತನಿಖೆ ಮುಗಿಯುವವರೆಗೂ ಚಿನ್ನಾಭರಣವನ್ನು ಬಾವಿಯಿಂದ ಹೊರತೆಗೆಯದಂತೆ ನಿರ್ಧರಿಸುವಷ್ಟರಲ್ಲಿ ಎಸ್ಪಿ ಉಮಾಪ್ರಶಾಂತ್ ನೇತೃತ್ವದ ತಂಡ ಭೇದಿಸಿತ್ತು.
ರೌಡಿ ಶೀಟರ್ ಕಣುಮ ಮರ್ಡರ್, ಆರೋಪಿಗಳ ಸೆರೆ
ದಾವಣಗೆರೆ ರೌಡಿ ಶೀಟರ್ ಕಣುಮ ಮರ್ಡರ್ ಇಡೀ ದಾವಣಗೆರೆಯನ್ನೇ ಬೆಚ್ಚಿ ಬೀಳಿಸಿತ್ತು.ಈ ನಡುವೆ ಅಂದು ಜನಗಳನ್ನೇ ಕಂಟ್ರೋಲ್ ಮಾಡೋದು ಕಷ್ಟವಾಗಿತ್ತು. ಈ ನಡುವೆ ಎಸ್ಪಿ ಉಮಾಪ್ರಶಾಂತ್ ಸೂಕ್ತ ಬಂದೋ ಬಸ್ತ್ ಮಾಡಿ ಮಹಜರು ಮಾಡಿಸಿದ್ದರು. ಅಲ್ಲದೇ ಆರೋಪಿಗಳು ಸ್ವತಃ ಅರೆಸ್ಟ್ ಆದರೂ, ಕೊಲೆ ಹಿಂದಿನ ರಹಸ್ಯ ಹಿಂದೆ ಇದ್ದವರನ್ನು ಬೇದಿಸಿದ್ದರು. ಇವೆಷ್ಟು ಪ್ರಕರಣಗಳು ಎಸ್ಪಿ ಉಮಾಪ್ರಶಾಂತ್ ನೇತೃತ್ವದಲ್ಲಿ ಆದ ನೈಜ ಘಟನೆಗಳ ಹೈಲೈಟ್ಸ್ ಅಷ್ಟೇ..ಹೇಳುತ್ತಾ ಹೋದರೆ ಸಾಕಷ್ಟು ಪ್ರಕರಣಗಳಿವೆ.
ಮೂವರಿಗೆ ಕಮೆಂಡೇಶನ್ ಡಿಸ್ಕ್ ಪದಕ
ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಉಮಾಪ್ರಶಾಂತ್ ಗೆ ಸೇರಿ ಮೂವರಿಗೆ DG & IGP ಕಮೆಂಡೇಶನ್ ಡಿಸ್ಕ್ 2025-26 ಸಾಲಿನ ಪದಕ ಸಿಕ್ಕಿದೆ
ಸೇವೆಯಲ್ಲಿ ಗಣನೀಯವಾಗಿ ಕೆಲಸ ಮಾಡಿದವರಿಗೆ ಈ ಪದಕ ನೀಡಲಾಗುತ್ತಿದೆ. ಮಹಿಳಾ ಎಸ್ಪಿಯಾಗಿ ಜಿಲ್ಲೆಯಲ್ಲಿ ಕೈಗೊಂಡ ಕಾರ್ಯಗಳಿಂದ ಈ ಪದಕ ನೀಡಲಾಗಿದೆ.ಈ ವರ್ಷದಿಂದ ಆರಂಭಗೊಂಡಿರುವ ಈ ಪದಕವನ್ನ ದಾವಣಗೆರೆ ಜಿಲ್ಲೆಯಲ್ಲಿ ಮೂವರು ಪಡೆದಿರುವುದು ಗಮನಾರ್ಹವಾಗಿದೆ
ಪೊಲೀಸ್ ಮಹಾ ನಿರ್ದೇಶಕರಿಂದ ಪದಕ ಸ್ವೀಕಾರ
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ. ಸಲೀಂ ಅವರಿಂದ ಎಸ್ಪಿ ಉಮಾಪ್ರಶಾಂತ್ ಬೆಂಗಳೂರಿನಲ್ಲಿ ಪದಕ ಸ್ವೀಕಾರ ಮಾಡಿದರು. ಇಲಾಖೆಯ ಸುಧಾರಣೆ, ಕ್ರಿಯಾಶೀಲತೆ, ಸಾಮರ್ಥ್ಯ ವೃದ್ಧಿ ಸಂಬಂಧ ಈ ಪದಕ ಕೊಡಲಾಗುತ್ತಿದ್ದು, ದಾವಣಗೆರೆಯಲ್ಲಿ ಎಸ್ಪಿ ಉಮಾಪ್ರಶಾಂತ್ ಸೇರಿದಂತೆ ಇನ್ನಿಬ್ಬರಿಗೆ ಬಂದಿದೆ.
ಯಾಕಾಗಿ ಪದಕ
ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ಪಾರದರ್ಶಕತೆ ತರಲು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಂತ್ರಸ್ತ ಕೇಂದ್ರಿತ ವಿಧಾನವನ್ನು ಅಳವಡಿಕೆ. ತಮ್ಮ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗೆ ಕರ್ತವ್ಯದಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿದವರಿಗೆ ಡಿಜಿ- ಐಜಿಪಿ ಪದಕ ನೀಡಲಾಗುತ್ತಿದೆ.
ಶಾಂತಿ ಸೌಹಾರ್ದತೆ, ಸುರಕ್ಷತೆ
ಶಾಂತಿ-ಸೌಹಾರ್ದಯುತ, ಸುರಕ್ಷತೆಯ ವಾತಾವರಣ ನಿರ್ಮಿಸುವ ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಿಸಿ ಆಧುನೀಕರಣದೆಡೆಗೆ ಕೊಂಡೊಯ್ಯಲು ಸಾಮರ್ಥ್ಯ ಮೀರಿ ಎಸ್ಪಿ ಉಮಾಪ್ರಶಾಂತ್ ದುಡಿದಿದ್ದಾರೆ. ಅವರ ಗುರಿ ಸಾಧನೆಗೆ, ಪೊಲೀಸ್ ಇಲಾಖೆಯ ಅಡಿಪಾಯವಾಗಿರುವ ಕಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳವರೆಗಿನ ಎಲ್ಲಾ ಸಹೋದ್ಯೋಗಿಗಳಿಂದ ಸದಾ ಬೆಂಬಲವನ್ನು ಎಸ್ಪಿ ಉಮಾಪ್ರಶಾಂತ್ ಅಪೇಕ್ಷೇಸುತ್ತಾರೆ.
ಸಂಕಷ್ಟದಲ್ಲಿ ಇರೋರಿಗೆ ನೆರವು
ಸಮಾಜದಲ್ಲಿ ನೆಮ್ಮದಿ ಹೆಚ್ಚಿಸುವ, ಶಾಂತಿ ಸ್ಥಾಪಿಸುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ, ದುರ್ಬಲ ವರ್ಗದವರು ಮತ್ತು ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಜನತೆಯ ಒಳಿತಿಗಾಗಿ ಶಕ್ತಿ ಮೀರಿ ಪಾರದರ್ಶಕತೆ, ವೃತ್ತಿಪರತೆಯಿಂದ ಸೇವೆ ಸಲ್ಲಿಸಿ ಅತಿ ಹೆಚ್ಚು ಸುರಕ್ಷಿತ ವಾತಾವರಣವನ್ನು ಉಮಾಪ್ರಶಾಂತ್ ಸೃಷ್ಟಿಸಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ಹೋರಾಟ, ಜಾಗೃತಿ
ಮಾದಕ ವಸ್ತುಗಳ ವಿರುದ್ಧ ಹೋರಾಡುವುದು. ಎಲ್ಲಾ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಎಸ್ಪಿ ಮೊದಲ ಆದ್ಯತೆಯಾಗಿದೆ. ಒಟ್ಟಾರೆ ಇಡೀ ಜಿಲ್ಲೆಯನ್ನು ಒಬ್ಬ ಮಹಿಳಾ ಅಧಿಕಾರಿಯಾಗಿ ರಾತ್ರಿ ಹಗಲನ್ನೇದೇ ಸಂಸಾರದ ಭಾರದ ಜತೆ ಸಮಾಜದ ಹಿತವನ್ನು ಎಸ್ಪಿ ಉಮಾ ಪ್ರಶಾಂತ ನಿಭಾಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.