


ದಾವಣಗೆರೆ : ಪ್ರಿಯ ಓದುಗರೇ, ಬರ ಬರುತ್ತಾ ಪತ್ರಿಕೆಗಳ ಮೇಲೆ ಇದ್ದ ನಂಬಿಕೆ ನಿಧಾನವಾಗಿ ಕಾಣೆಯಾಗುತ್ತಿದೆ….ಅದಕ್ಕೂ ಕಾರಣವೂ ಇದೆ..ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಇದ್ದ ಬೆಲೆ ಮನುಷ್ಯನಿಗೆ ಇಲ್ಲ ಎಂಬುದಕ್ಕೆ ದಾವಣಗೆರೆ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಸುದ್ದಿಯೊಂದು ಬಿತ್ತಾರವಾಗಿರೋವುದೇ ಸಾಕ್ಷಿ..
ಹೌದು…ನಾನೊಬ್ಬ ಓದುಗನಾಗಿ ಪ್ರತಿಷ್ಠಿತ ಪತ್ರಿಕೆಯೊಂದರ ಸಂಪಾದಕರಿಗೆ ಪ್ರಶ್ನೆಯೊಂದು ಕೇಳುತ್ತಿದ್ದೇನೆ… ಸಾಮಾನ್ಯವಾಗಿ ಮನೆ ಮುಂದೆ ನಾಯಿ ಇದೆ ಎಚ್ಚರಿಕೆ ಎಂಬ ಬೋರ್ಡ್ ನೋಡಿದ್ದೇವೆ..ಆದರೀಗ ನಾಯಿ ಕಾಣೆಯಾದ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ನೋಡಬೇಕಾದ ಸ್ಥೀತಿ ಇದೆ. ಇದು ಯಾಕಾಗಿ?

ನಮ್ಮ ದಾವಣಗೆರೆಯ ಮೊದಲ ಪೇಜ್ ನಲ್ಲಿ ನಾಯಿ ಕಾಣೆಯಾಗಿದೆ ಎಂಬ ಬಗ್ಗೆ ಸುದ್ದಿಯೊಂದನ್ನು ಪ್ರಕಟಿಸಿದ್ದೀರಿ..ಈ ಬಗ್ಗೆ ನನ್ನದೇನೂ ತಕರಾರು ಇಲ್ಲ…ಆದರೆ ಮನುಷ್ಯರು, ಅದರಲ್ಲಿ ವಯೋ ವೃದ್ಧರು, ಮಕ್ಕಳು, ಯುವತಿಯರು ಕಾಣೆಯಾದರೆ ಯಾಕೆ ಪೋಟೋ ಹಾಕಿ ಸುದ್ದಿ ಮಾಡೋದಿಲ್ಲ? ಇದನ್ನು ಜಾಹೀರಾತು ರೂಪದಲ್ಲಿ ತೆಗೆದುಕೊ ಳ್ಳಬಹುದಿತ್ತು..ಆದರೆ ಮೊದಲ ಪೇಜ್ ನಲ್ಲಿ ನಾಯಿ ಪೋಟೋ ಹಾಕಿ ಪೋನ್ ನಂಬರ್ ಬಿತ್ತರಿಸಿ ಸುದ್ದಿ ಮಾಡಿರುವ ಉದ್ಧೇಶವಾದರೂ ಏನು?ಇದರಲ್ಲಿ ನಿಮ್ಮ ವೈಯಕ್ತಿಕ ಹಿತಾಸಕ್ತಿ ಕಾಣುತ್ತಿದೆ..

ದೇವರಿಗೆ ಬಿಟ್ಟ ಕೋಣ ಕಾಣೆಯಾದ ವೇಳೆ ಯಾಕೆ ಸುದ್ದಿ ಮಾಡಲಿಲ್ಲ
ನಾಯಿ ಕಾಣೆಯಾಗಿದೆ ಎಂಬ ಸುದ್ದಿ ಪ್ರಕಟಿಸಿದ ನೀವು, ಹೊನ್ನಾಳಿ ತಾಲೂಕಿನಲ್ಲಿ ಕೋಣ ಕಾಣೆಯಾದಾಗ ಯಾಕೆ ಪೋಟೋ ಹಾಕಿ ಕೋಣ ಕಾಣೆಯಾಗಿದೆ ಅಂತ ಸುದ್ದಿ ಮಾಡಲಿಲ್ಲ ಬದಲಾಗಿ ಎರಡು ಗ್ರಾಮಗಳ ನಡುವೆ ತಿಕ್ಕಾಟ ಶುರುವಾದ ವೇಳೆ ಅದನ್ನು ಸುದ್ದಿ ಮಾಡಿದ್ದೀರಿ..ಹೋಗಲಿ ಸಾಕಿದ ನಾಯಿ ಬಗ್ಗೆ ಇರುವ ಕಾಳಜಿಯನ್ನು ಬೀದಿ ನಾಯಿಗಳ ಬಗ್ಗೆ ಯಾಕೆ ತೋರಿಸಿಲ್ಲ. ಮುಂದಿನ ದಿನಗಳಲ್ಲಿ ಕೋಳಿ, ಕುರಿ, ಎತ್ತು ಹೀಗೆ ಇತರೆ ಪ್ರಾಣಿಗಳು ಕಳೆದು ಹೋದರೆ ಸುದ್ದಿ ಮಾಡುತ್ತೀರಾ?
ಪ್ರತಿ ದಿನ ಅಂದಾಜು ಪ್ರಕಾರ ಕನಿಷ್ಠ ಐದು ಜನ ಕಾಣೆಯಾಗುತ್ತಾರೆ? ಎಷ್ಟು ಸುದ್ದಿ ಮಾಡಿದ್ದೀರಿ?
ದಾವಣಗೆರೆ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಅಂದಾಜು ಕನಿಷ್ಠ ಐದು ಜನ ಕಾಣೆಯಾಗುತ್ತಿರುವ ಪ್ರಕರಣ ದಾಖಲಾಗುತ್ತಿದೆ…ಈ ಸುದ್ದಿ ಪ್ರಕಟಿಸದೇ ಇರಲು ಕಾರಣವೇನು? ಮುಂದಿನ ದಿನಗಳಲ್ಲಿ ಪ್ರಾಣಿಗಳು ಕಾಣೆಯಾದರೆ ನೀವು ಸುದ್ದಿ ಪ್ರಕಟಣೆ ಮಾಡುತ್ತೀರಾ? ಇದರ ಹಿಂದೆ ನಿಮ್ಮ ವೈಯಕ್ತಿಕ ಹಿತಾಸಕ್ತಿ ಇದೆಯೇ? ಒಂದು ಪ್ರತಿಷ್ಠಿತ ಪತ್ರಿಕೆ ಸಂಪಾದಕಾರದ ನೀವು ನಾಯಿ ಕಾಣೆಯಾಗಿರುವ ಸುದ್ದಿ ಪ್ರಕಟಿಸಿರುವುದೇ ಸರಿಯೇ?
ಬ್ರಾಡರ್ ರಿಟ್ರೈವರ್ ಜಾತಿ ನಾಯಿಗಳು ಒಂದೇ ರೀತಿ ಇರುತ್ತದೆ ಹುಡಕಲು ಸಾಧ್ಯವೇ?
ಸಾಮಾನ್ಯವಾಗಿ ಬ್ರಾಡರ್ ರಿಟ್ರೈವರ್ ಜಾತಿ ನಾಯಿಗಳು ಒಂದೇ ರೀತಿ ಇರುತ್ತದೆ, ಬಣ್ಣ, ಗುಣ ಎಲ್ಲವೂ ಒಂದೇ ರೀತಿ ಇರುತ್ತದೆ. ತನ್ನ ಮಾಲೀಕ ಬಂದಾಗ ಮಾತ್ರ ಅದು ಕಂಡು ಹಿಡಿಯಲಿದ್ದು, ಬೇರೆಯವರು ಆ ನಾಯಿಯನ್ನು ಹುಡುಕಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ..ಆದ್ದರಿಂದ ಇನ್ನಾದರೂ ಸಂಪಾದಕರು ನಾಯಿ ಕಳೆದಿದೆ ಸುದ್ದಿ ಬಿಟ್ಟು, ದಮನಿತರ ಧ್ವನಿ ಎತ್ತುವ, ಮಾನವೀಯ, ರೈತರ ಸಂಕಷ್ಟದ ಬಗ್ಗೆ ಆದಷ್ಟು ಗಮನಹರಿಸಿ ಎಂಬುದಷ್ಟೇ ನಮ್ಮ ಸಲಹೆ…