Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ದಾವಣಗೆರೆ ವಿಶೇಷ»ಚನ್ನಪಟ್ಟಣ ಗೆದ್ದರೆ ಡಿಕೆಶಿ ಮುಂದಿನ ಮುಖ್ಯಮಂತ್ರಿ? ಡಿಸಿಎಂ ಶಿವಕುಮಾರ್ , ಹೊಸ ಗೇಮ್ ಶುರು *ತಮ್ಮ ಸೇಫ್, ಕಾಂಗ್ರೆಸ್ ಸ್ಥಾನವೂ ಸೆಫ್ *ಸಿಎಂ ಸಿದ್ದುಗೆ ಆಘಾತ?
ದಾವಣಗೆರೆ ವಿಶೇಷ

ಚನ್ನಪಟ್ಟಣ ಗೆದ್ದರೆ ಡಿಕೆಶಿ ಮುಂದಿನ ಮುಖ್ಯಮಂತ್ರಿ? ಡಿಸಿಎಂ ಶಿವಕುಮಾರ್ , ಹೊಸ ಗೇಮ್ ಶುರು *ತಮ್ಮ ಸೇಫ್, ಕಾಂಗ್ರೆಸ್ ಸ್ಥಾನವೂ ಸೆಫ್ *ಸಿಎಂ ಸಿದ್ದುಗೆ ಆಘಾತ?

ಒಂದು ವರ್ಷದ ಒಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ
davangerevijaya.comBy davangerevijaya.com25 October 2024Updated:25 October 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

ದಾವಣಗೆರೆ : ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಶಿವಕುಮಾರ, ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅದರಲ್ಲೂ ಬದ್ಧ ವೈರಿ ಜೆಡಿಎಸ್ ವಿರುದ್ಧ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಡಿಕೆಶಿ ಚನ್ನಪಟ್ಟಣದಲ್ಲಿ ರಣತಂತ್ರ ಎಣೆದಿದ್ದಾರೆ. ಗೆಲ್ಲಲ್ಲೇಬೇಕು ಎನ್ನುವ ಹಠಕ್ಕೆ ಬಿದ್ದು ಬಿಜೆಪಿಯ ಸಿಪಿ ಯೋಗೇಶ್ವರ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಆ ಮೂಲಕ ಸಿಎಂ ಹುದ್ದೆ ಮೇಲೆ ಮತ್ತೊಮ್ಮೆ ಟವೆಲ್ ಹಾಕುವ ಮೂಲಕ ಹೈಕಮಾಂಡ್ ಹಾಗೂ ತಮ್ಮದೇ ಪಕ್ಷ ವಿರೋಧಿಗಳಿಗೆ ಸಂದೇಶ ಕಳಿಸಿದ್ದಾರೆ. ಹಾಗಾದ್ರೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ ಸಿಎಂ ಆಗ್ತಾರಾ ಡಿಕೆಶಿ? ಸಿದ್ದು ನಡೆಯೇನು? ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ರಾಮನಗರ ಕ್ಷೇತ್ರದಿಂದ ಹೊರಗಟ್ಟಬೇಕು ಎನ್ನುವ ಹಠಕ್ಕೆ ಬಿದ್ದಿರುವ ಡಿಸಿಎಂ ಡಿಕೆಶಿ ಸಾಮರ್ಥ್ಯ ಸಾಬೀತುಪಡಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಯಾಗುವ ಗುರಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ಎಚ್ಚರಿಕೆಯ ಆಟವಾಡುತ್ತಿದ್ದಾರೆ.

ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಕುಟುಂಬವನ್ನು ಚುನಾವಣಾ ಕದನದಲ್ಲಿ ನೇರವಾಗಿ ಎದುರಿಸಲು ಪಣತೊಟ್ಟಿದ್ದಾರೆ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ತಿಳಿದಿದ್ದ ಶಿವಕುಮಾರ್, ಸುರೇಶ್ ಅವರನ್ನು ಕಣಕ್ಕಿಳಿಸದೆ ಮುಂಬರುವ ಅಪಾಯದಿಂದ ದೂರ ಉಳಿದಿದ್ದಾರೆ. ಇದೀಗ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ಗೆ ತೆರಳಿ ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅವರಿಗೆ ಬೆಂಬಲ ನೀಡಿರುವುದರಿಂದ ಡಿಕೆಶಿ ಬ್ರದರ್ಶ್ ನಿರಾಳರಾಗಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಇದೇ ತಂತ್ರವನ್ನು ಅನುಸರಿಸಿ ರಾಮನಗರದಲ್ಲಿ ನಿಖಿಲ್ ಅವರನ್ನು ಸೋಲಿಸಿ ತಮ್ಮ ಬೆಂಬಲಿಗ ಎಚ್‌ಎ ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿದ್ದರು. ಅಧಿಕಾರದಲ್ಲಿದ್ದ ಪಕ್ಷ ಉ¥ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ‘ಪರಂಪರೆ’ಯನ್ನು ಮುಂದುವರಿಸುವ ಸವಾಲು ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿಸಿದಾಗ ಡಿ.ಕೆ ಬ್ರದರ್ಸ್ ಆಶ್ಚರ್ಯಚಕಿತರಾಗಿದ್ದರು ಆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ ಸುರೇಶ್ ಪರಾಭವಗೊಂಡರು.

ಸಿದ್ದರಾಮಯ್ಯನವರ ನಂತರ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಶಿವಕುಮಾರ್‌ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದ ಒಪ್ಪಂದಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಒಂದು ವೇಳೆ ಚನ್ನಪಟ್ಟಣದಲ್ಲಿ ಮತ್ತೆ ಸುರೇಶ್ ಸ್ಪರ್ಧಿಸಿ ಸೋತಿದ್ದರೆ ಶಿವಕುಮಾರ್ ಇಮೇಜ್‌ಗೆ ಧಕ್ಕೆಯಾಗುತ್ತಿತ್ತು. ಆದ್ದರಿಂದ, ಅವರು ತಮ್ಮ ಆರಾಧ್ಯ ದೈವ ‘ಅಜ್ಜಯ್ಯ ಸ್ವಾಮಿ’ಯ ಸಲಹೆಯ ಪಾಲಿಸುತ್ತಿದ್ದಾರೆ.

ಚನ್ನಪಟ್ಟಣದ ಜನರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 85,000 ಮತ ಪಡೆದರೆ ಬಿಜೆಪಿ 1ಲಕ್ಷ ಮತ ಗಳಿಸಿತ್ತು. ಯೋಗೇಶ್ವರ ಅವರು ಇದನ್ನು ಅರಿತು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಎನ್‌ಡಿಎ ಮಿತ್ರಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಬದಲಾಗಿರುವ ಕುಮಾರಸ್ವಾಮಿ ದೇವೇಗೌಡರಂತೆಯೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ, ಹೀಗಾಗಿ ಎಚ್ ಡಿಕೆ ಹಣಿಯಲು ಡಿ.ಕೆ ಸಹೋದರರು ಬಯಸಿದ್ದಾರೆ.

ಒಟ್ಟಿನಲ್ಲಿ ಇನ್ನು ಒಂದು ವರ್ಷದ ಒಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದ್ದು ಅದಕ್ಕೆ ಡಿಕೆಶಿ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಗಾದಿಗಾಗಿ ಡಿಕೆಶಿ ನಾನಾ ತಂತ್ರ ಹೆಣೆಯುತ್ತಿದ್ದಾರೆ.

Congress seat also safe *Shocked by CM Siddhu? DKC will be the next Chief Minister? DCAA Shivkumar starts a new gap *Him safe Featured If Channapatna wins Top news ದಾವಣಗೆರೆ
Share. WhatsApp Facebook Twitter Telegram
davangerevijaya.com
  • Website

Related Posts

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,655 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,328 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,590 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
Blog

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

By davangerevijaya.com29 June 20250

ನಂದೀಶ್ , ಭದ್ರಾವತಿ ಉಕ್ಕಿನ ನಗರಿ ಭದ್ರಾವತಿಯಲ್ಲಿ ಒಂದೊಂದೇ ಸಂತಸದ ಕ್ಷಣಗಳು ಕಾಣುತ್ತಿವೆ..ಅತ್ತ ವಿಎಸ್ಐಎಲ್ ಕಾರ್ಖಾನೆ ಓಪನ್ ಆಗಲಿದೆ ಎಂಬ…

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,655 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,328 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

Subscribe to Updates

Get the latest creative news from SmartMag about art & design.

Recent Posts
  • ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.