ದಾವಣಗೆರೆ: ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ರಾಜ್ಯಮಟ್ಟದಿಂದ ವೀಕ್ಷಕರು ಬಂದಿದ್ದಾರೆ. ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದರು.

ದಾವಣಗೆರೆಯ ಕೆಬಿ ಬಡಾವಣೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ರಾಜ್ಯಾಧ್ಯಕ್ಷರು ರಾಜ್ಯವರಿಷ್ಠರು ಸೇರಿ ಚರ್ಚೆ ಮಾಡಿ ಸೂಕ್ತವಾದ,ಸಂಘಟನೆಗೆ ಪೂರಕವಾದ ಹಾಗೂ ಮುಖ್ಯವಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬಲ್ಲ ಅರ್ಹರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಿದ್ದಾರೆ.

ನಾನು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿಯನ್ನೂ ಸಲ್ಲಿಸಿಲ್ಲ ಹಾಗೂ ನಾನು ಆಕಾಂಕ್ಷಿಯೂ ಅಲ್ಲ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ಪಷ್ಟ ಪಡಿಸಿದರು.

ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತರ ಸಿಎಂ ಅಲ್ಲ

ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಹತ್ತು ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ಅಭಿವೃದ್ಧಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಅಧಿವೇಶನ ನಡೆಯುವ ವೇಳೆ ಘೋಷಿಸಿರುವುದು ಸರಿಯಲ್ಲ. ಸಿಎಂಗೆ ಕಾನೂನಿನ ಅರಿವಿದೆ.

ಅಧಿವೇಶನ ನಡೆಯುವ ಸಮಯದಲ್ಲಿ ಬಹಿರಂಗವಾಗಿ ಮುಕ್ತವಾಗಿ ಮಾತನಾಡುವಂತಿಲ್ಲ ಆದರೆ ಸಿಎಂ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ರೈತರಿಗೆ ಪರಿಹಾರ ಬಿಡುಗಡೆ ಮಾಡಿ ಎಂದರೆ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತಾರೆ.ಚುನಾವಣೆ ಸಮಯದಲ್ಲಿ ಘೋಷಿಸಿದ ಯಾವುದೇ ಯೋಜನೆಗಳು ಅನುಷ್ಠಾನವಾಗಿಲ್ಲ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರಿಗೆ 1 ಸಾವಿರ ಕೋಟಿ ಅನುದಾನ

ಅಧಿವೇಶನ‌ಮುನ್ನ ಬೆಂಗಳೂರಿನಲ್ಲಿ ರೈತನ‌ಖಾತೆಗೆ ಕೇವಲ ೨೦೦೦. ಬಿಡುಗಡೆ ಮಾಡುವುದಾಗಿ ಹೇಳಿದ್ದರು ಆದರೆ ಬಿಡಿಗಾಸು ಬಂದಿಲ್ಲ. ಆದರೆ ಮೌಲ್ವಿಗಳ ಸಮಾವೇಶದಲ್ಲಿ ಹೇಳಿದಂತೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ ಹಾಗೂ ಅಲ್ಪಸಂಖ್ಯಾತರಿಗೆ ೧ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಒಂದು ವರ್ಗಕ್ಕೆ ಮಾತ್ರ ಮುಖ್ಯಮಂತ್ರಿಗಳೋ ಅಥವಾ ಇಡೀ ಕರ್ನಾಟಕದ ಮುಖ್ಯಮಂತ್ರಿಗಳೋ ಸ್ಪಷ್ಟ ಪಡಿಸಬೇಕು ಎಂದರು.

ಎಲ್ಲಾ ವರ್ಗದ ಹಿತ ಕಾಯುವ ಬದಲಾಗಿ ಕೇವಲ ಅಲ್ಪ ಸಂಖ್ಯಾತರ ಮತಗಳ ಓಲೈಕೆಗಾಗಿ ಅವರನ್ನು ತೃಪ್ತಿ ಪಡಿಸಲು ಹೊರಟಿದ್ದಾರೆಂದರು. ಸಿಎಂ ಮೈಸೂರಿನ ಟಿಪ್ಪು ವಿಮಾನ‌ನಿಲ್ದಾಣಕ್ಕೂ ಒಪ್ಪಿಗೆ ನೀಡುತ್ತಾರೆ ಬೆಳಗಾವಿ ಸುವರ್ಣಸೌಧದಲ್ಲಿ ವೀರಸಾರ್ವಕರ್ ಫೊಟೊ ತೆಗೆಲು ಸಮ್ಮತಿಸುತ್ತಾರೆ.ಸಭಾಪತಿಗೆ ಸಲಾಮ್ ಹಾಕುವುದನ್ನು ಸಮರ್ಥಿಸುತ್ತಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಎಲ್ಲಾ ಬೇಡಿಕೆಗೂ ತಥಾಸ್ತು ಎನ್ನುತ್ತಾರೆ.

ಅವರಿಗೆ ಬಿಡುಗಡೆ ಮಾಡಲು ಹಣವಿದೆ ಆದರೆ ರೈತರಿಗೆ ಬಿಡುಗಡೆ ಮಾಡಲು ಹಣವಿಲ್ಲ.ಟಿಪ್ಪು ಬಾಬರ್ ಫೋಟೊ ಹಾಕಿದರೆ ಒಪ್ಪುತ್ತಾರೆ. ಇದೆಲ್ಲಾ ಬಿಟ್ಟು ರೈತರಿಗೆ ಬರಪರಿಹಾರದ ಹಣ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದರು.

Share.
Leave A Reply

Exit mobile version