ಶಿವಮೊಗ್ಗ : ಜರಿ, ತೊರೆ, ಹಕ್ಕಿ ಪಕ್ಷಿಗಳ ಕಲರವ, ಪ್ರಕೃತಿ ಮಾತೆಯ ಸುಂದರ ನೋಟ ಸವಿಯ ಬೇಕಾದವರು ಚಾರಣಕ್ಕೆ ಹೋಗಲೇಬೇಕು ಎಂದುತರುಣೋದಯ ಮಾಜಿ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ತರುಣೋದಯ ಘಟಕ ಆಯೋಜಿಸಿದ ಮತ್ತಿಘಟ್ಟ ಫಾಲ್ಸ್ ಚಾರಣಕ್ಕೆ ಹೊರಟ ಚಾರಣಿಗರಿಗೆ ಶುಭ ಹಾರೈಸಿ ಮಾತನಾಡಿದ ಅವರು, ಈ ರೀತಿ ಚಾರಣಕ್ಕೆ ಮನೆ ಮಂದಿಯೆಲ್ಲ ಹೋದಾಗ ಒಂದು ರೀತಿ ಸಂತೋಷ ಸಿಗುತ್ತದೆ. ಹೊಸ ಸದಸ್ಯರೊಂದಿಗೆ ಸ್ನೇಹ ಬೆಳೆಸಲು ಇಂತಹ ಚಾರಣ ಸಹಕಾರಿ. ದಿನವಿಡೀ ಜೊತೆಗೆ ಇದ್ದು, ಊಟ, ತಿಂಡಿ, ಚಾರಣದ ಸಮಯದಲ್ಲಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು, ತಮಾಷೆಯಾಗಿ ಸಮಯ ಕಳೆಯುವುದನ್ನು ವರ್ಣಿಸಲು ಸಾಧ್ಯವಿಲ್ಲ ಎಂದರು.

ಛೇರ್ಮನ್ ವಾಗೇಶ್ ಮಾತನಾಡಿ, ನಾವು ಸಂತೋಷ ಪಡಲು ಪ್ರವಾಸ ಹೋಗುವುದು ಸಾಮಾನ್ಯ, ಆದರೆ ಇತರರ ಸಂತೋಷಕ್ಕೆ ಚಾರಣ ಕಳೆದುಕೊಂಡು ಹೋಗುವುದು ಸಾಹಸದ ಕೆಲಸವೆ ಸರಿ. ಬಂದವರನ್ನು ಎಲ್ಲಾ ರೀತಿಯಲ್ಲಿ ಸಮಾಧಾನ ಪಡಿಸುವುದು ಕಷ್ಟಾಸಾಧ್ಯ ಎಂದರು.

ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿ, ಹೊಸ ಹೊಸ ಪ್ರದೇಶಗಳನ್ನು ಗುರುತಿಸಿ, ಅಲ್ಲಿಯ ವ್ಯವಸ್ಥೆಗಳನ್ನು ನೋಡಿಕೊಂಡು ಚಾರಣ ಮಾಡುತ್ತೇವೆ. ಚಾರಣಿಗರಿಗೆ ಉತ್ತಮ ಆಹಾರ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಹಾಗೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದು ಕೊಳ್ಳುತ್ತೇವೆ. ಇಂದು ಹಲವು ಹೊಸ ಸದಸ್ಯರು ಆಗಮಿಸಿದ್ದು ಚಾರಣದ ನಂತರ ತಮ್ಮ ಅನಿಸಿಹಂಚಿಕೊಳ್ಳಬೇಕಾಗಿ ಕೋರಿದರು.

ಈ ವೇಳೆ ಉಪಾಧ್ಯಕ್ಷೆ ಡಾ. ಪ್ರಕೃತಿ, ನಿರ್ದೇಶಕರಾದ ನಾಗರಾಜ್, ಭಾರತಿ, ಗಿರೀಶ್, ಹರೀಶ್, ರಜನಿ, ಬಸವಪ್ಪ, ವೀರಭದ್ರಪ್ಪ ಸೇರಿದಂತೆ ಎಪ್ಪತ್ತೇಳರಿಂದ ಐದು ವರ್ಷದ ಮಗುವರೆಗೂ ಒಟ್ಟು ಐವತ್ತು ಸದಸ್ಯರು ಭಾಗವಹಿಸಿದ್ದರು.
==================

Share.
Leave A Reply

Exit mobile version