ದಾವಣಗೆರೆ : ಭ್ರಷ್ಟಾಚಾರ ಆರೋಪ ಹಿನ್ನೆಲೆ ನಗರದ ಆರ್ ಟಿಓ ಕಚೇರಿ ಎದುರು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಪ್ರತಿಭಟನೆ ನಡೆಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್, ಪ್ರಮುಂತೇಶ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಮೊಹಮ್ಮದ್ ಖಾಲೀದ್ ಹಾಗೂ ಟಿ ಎಸ್ ಸತೀಶ್ ಇವರುಗಳ ವಿರುದ್ದ ಆರೋಪ ಕೇಳಿ ಬಂದಿದೆ.

ಈ ಅಧಿಕಾರಿಗಳು ಈ ಹಿಂದೆ ದಾವಣಗೆರೆ ಕಛೇರಿಯಲ್ಲಿ 5 -6 ವರ್ಷ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಸಾರಿಗೆ ಅಧಿಕಾರಿಗಳಾಗಿ ಇದೇ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಅಲ್ಲದೆ ಮೊಹಮ್ಮದ್ ಖಾಲೀದ್ ಹಿರಿಯ ಮೋಟರ್ ವಾಹನ ನೀರಿಕ್ಷಕರು. ಇವರು ಸುಮಾರು 13 ವರ್ಷಗಳಿಂದ ದಾವಣಗೆರೆ ಸಾರಿಗೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಟಿ ಎಸ್ ಸತೀಶ್ ಹಿರಿಯ ಮೋಟರ್ ವಾಹನ ನೀರಿಕ್ಷಕ. ಇವರು ಕೂಡ ಸುಮಾರು 6 ವರ್ಷಗಳಿಂದ ದಾವಣಗೆರೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಈ ಮೂವರು ಅಧಿಕಾರಿಗಳು ಯಾರಿಗೂ ಭಯಪಡದೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಣಿ ಸರ್ಕಾರ್ ಆರೋಪಿಸಿದ್ದಾರೆ.

ಸಾರಿಗೆ ಅಧಿಕಾರಿ,ಸಿ,ಎಸ್.ಪ್ರಮುಂತೇಶ್,  ತುಮಕೂರು ನಗರದಲ್ಲಿ ನಿವೇಶನ ಹಾಗೂ ಮನೆ ಜಮೀನುಗಳನ್ನು ಮತ್ತು ಬೆಂಗಳೂರು ನಗರದಲ್ಲಿ ನಿವೇಶನಗಳನ್ನು ಹೊಂದಿರುತ್ತಾರೆ. ಮಹಮದ್ ಖಾಲೀದ್ ಇವರು ದಾವಣಗೆರೆ ನಗರದಲ್ಲಿ ಹಾಗೂ ಚಿತ್ರದುರ್ಗ ನಗರದಲ್ಲಿ ಸಂಬಂಧಿಗಳ ಹೆಸರಿನಲ್ಲಿ ನಿವೇಶನ ಮತ್ತು ಮನೆಗಳನ್ನು ಅಕ್ರಮವಾಗಿ ಮಾಡಿರುತ್ತಾರೆ.   ಟಿ.ಎಸ್ ಸತೀಶ್ ಮೈಸೂರು ನಗರದಲ್ಲಿ ನಿವೇಶನ ಮತ್ತು ಮನೆಗಳನ್ನು ಮಾಡಿರುತ್ತಾರೆ.

ಈ ಮೂರು ಭ್ರಷ್ಟ ಅಧಿಕಾರಿಗಳ ಮೇಲೆ ಬೆಂಗಳೂರು ಲೋಕಾಯುಕ್ತ ಕೊರ್ಟ್‌ನಲ್ಲಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಶ್ರೀರಾಮ ಸೇನೆ, ಜಿಲ್ಲಾಧ್ಯಕ್ಷರಾದ ಮಣಿಸರ್ಕಾ‌ರ ಪ್ರಕರಣ ದಾಖಲಿಸಿದ್ದಾರೆ.

ಈ ಅಧಿಕಾರಿಗಳನ್ನು ಶೀಘ್ರವಾಗಿ ವರ್ಗಾವಣೆ ಮಾಡಬೇಕು,   ಈ ಮೂರು ಅಧಿಕಾರಿಗಳಿಗೆ ಸಾರಿಗೆ ಸಚಿವರು, ಸಾರಿಗೆ ಆಯುಕ್ತರು, ಮತ್ತು ಜಂಟಿ ಆಯುಕ್ತ ಶಿವಮೊಗ್ಗ, ಇವರ ಬೆಂಬಲವಿದೆ ಎಂದು ತಿಳಿದು ಬಂದಿರುತ್ತದೆ, ಇವರ ಮೇಲೆ ಸಾರಿಗೆ ಇಲಾಖೆ ತನಿಖೆ ಮಾಡಬೇಕೆಂದು ಆಗ್ರಹಿಸಿದರು.

ಸುಮಾರು ವರ್ಷಗಳಿಂದ ಒಂದೇ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಇವರಿಗೆ ಅನುಮತಿ ನೀಡಿದ ಅಧಿಕಾರಿಗಳು ಯಾರೆಂದು ತಿಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಎನ್.ಎಚ್.4 ಹಾಗೂ ಎನ್.ಎಚ್. 13 ರಲ್ಲಿ ಪ್ರತಿದಿನ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ, ಹಾಗೂ ದಾವಣಗೆರೆ ನಗರದಲ್ಲಿ ವಾಹನ ಚಾಲನೆ ಪರವಾನಿಗೆ ತೆಗೆದು ಕೊಳ್ಳಬೇಕಾದರೆ ನೇರವಾಗಿ ಹೋದರೆ ದಾಖಲಾತಿ ಸರಿಯಲ್ಲ ಎಂದು ಹೇಳಿ ಈ ಅಧಿಕಾರಿಗಳು ಮದ್ಯವರ್ತಿಗಳ ಮುಖಾಂತರ ಹೆಚ್ಚಿನ ಹಣ ಕೊಟ್ಟು, ಎಲ್ಲಾ ಕೆಲಸ ಮಾಡಿಸಿ ಕೊಳ್ಳಬೇಕು.

ಇದರ ಬಗ್ಗೆ ಕೇಳಿದರೆ ಈ ಹಣದಲ್ಲಿ ಸಾರಿಗೆ ಸಚಿವರು ಸಾರಿಗೆ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಕಾರಣದಿಂದ ಈ ಅಧಿಕಾರಿಗಳ ವಿರುದ್ದ ಸೂಕ್ತವಾಗಿ ಸರ್ಕಾರವು ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲೆಯ ಸಾರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Share.
Leave A Reply

Exit mobile version