
ಶಿವಮೊಗ್ಗ : ಶಿವಮೊಗ್ಗ ಮಲೆನಾಡಿನ ತವರೂರು ಹೋರಾಟಗಾರರು, ನಾಡು ಕಂಡ ಅದ್ಬುತ ಊರು..ಆದರೀಗ ಈಗ ಇಲ್ಲಿ ದೊಡ್ಡ, ದೊಡ್ಡ ಖಾಸಗಿ ಆಸ್ಪತ್ರೆಗಳು ತಲೆ ಎತ್ತಿದ್ದು, ಬಡವರು ಇಂತಹ ಆಸ್ಪತ್ರೆಗೆ ಸೇರಿಸೋದಕ್ಕೆ ಆಗೋದಿಲ್ಲ..ಅದಕ್ಕೂ ಕಾರಣವಿದೆ.
ಹೌದು…ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಿದ್ದು, ಕಾಯಿಲೆ ವಾಸಿಗಾಗಿ ಇಂತಹ ದೊಡ್ಡ, ದೊಡ್ಡ ಆಸ್ಪತ್ರೆಗಳಿಗೆ ಸೇರಿಸುತ್ತಾರೆ..ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ಆಸ್ಪತ್ರೆ ಧನದಾಹಿಗಳು ಮೆಡಿಸಿನ್ ಗೆ ದುಪ್ಪಟ್ಟು, ತ್ರಿಪಟ್ಟು ಹಣ ಕೀಳುತ್ತಿದ್ದಾರೆ..ಇದಕ್ಕೆ ತಾಜಾ ಉದಾಹರಣೆ ಶಿವಮೊಗ್ಗದಲ್ಲಿನ ಖಾಸಗಿ ಮ್ಯಾಕ್ಸ್ ಆಸ್ಪತ್ರೆ.
ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಗ್ಲೌಸ್…ಈ ಆಸ್ಪತ್ರೆಯಲ್ಲಿ ಒಂದು ಗ್ಲೌಸ್ ಗೆ ಒಂಭತ್ತು ರೂಪಾಯಿ ಬಿಲ್ ಹಾಕುತ್ತಾರೆ. ಇದೇ ಗ್ಲೌಸ್ ಜನೌಷಧಿ ಕೇಂದ್ರಗಳಲ್ಲಿ ನಾಲ್ಕರಿಂದ ಐದು ರೂಪಾಯಿ..ವೋಲ್ ಸೆಲ್ ದರದಲ್ಲಿ ಸಿಗುವುದು ಕೇವಲ ಎರಡು ರೂಪಾಯಿ. ಅಂದ್ರೆ ಕನಿಷ್ಠ ಐಸಿಯು ವಾರ್ಡ್ ನಲ್ಲಿನ ಪೇಶೇಂಟ್ ಗೆ ಇಪ್ಪತ್ತು ಗ್ಲೌಸ್ ಬರೆಯುತ್ತಾರೆ..ಇನ್ನು ಜನರಲ್ ವಾರ್ಡ್, ಡಿಲಕ್ಸ್ ವಾರ್ಡ್, ನಾರ್ಮಲ್ ವಾರ್ಡ್ ಸೇರಿದಂತೆ ಇತರೆ ವಾರ್ಡ್ ಗಳಲ್ಲಿನ ಪೇಶೇಂಟ್ ಸೇರಿದಂತೆ ಕನಿಷ್ಠ ಎಪ್ಪತ್ತರಿಂದ ಎಂಭತ್ತು ಜನ ಪೇಶೇಂಟ್ ಇರುತ್ತಾರೆ..ಅಲ್ಲಿಗೆ ಸಣ್ಣದಾಗಿ ಲೆಕ್ಕ ಹಾಕಿದರೂ ಒಂದು ದಿನಕ್ಕೆ ಒಬ್ಬರಿಗೆ ಇಪ್ಪತ್ತರಂತೆ ಎಂಭತ್ತು ಜನರಿಗೆ 14400 ರೂ. ಅಲ್ಲಿಗೆ ತಿಂಗಳಿಗೆ ನಾಲ್ಕು ಲಕ್ಷದ ಮೂವತ್ತೇರಡು ಸಾವಿರ ರೂಪಾಯಿ ಆಗುತ್ತದೆ.ಇದು ಕೇವಲ ಒಂದೇ ಒಂದು ಗ್ಲೌಸ್ ನಿಂದ ಆಸ್ಪತ್ರೆಗೆ ಬರುವ ಆದಾಯ..
ಖಾಸಗಿಯಾಗಿ ಗ್ಲೌಸ್ ತೆಗೆದುಕೊಳ್ಳೋದಕ್ಕೆ ಬಿಡೋದಿಲ್ಲ
ಒಬ್ಬ ಪೇಶೇಂಟ್ ನ್ನು ಐಸಿಯು ವಾರ್ಡ್ ಗೆ ಹಾಕಿದ ಸಂದರ್ಭದಲ್ಲಿ ಅಲ್ಲಿ ಪೇಶೇಂಟ್ ಗೆ ಒಂದು ನಂಬರ್ ನೀಡಲಾಗುತ್ತದೆ. ಮೆಡಿಸಿನ್ ಬೇಕಾದಾಗ ಆಸ್ಪತ್ರೆಯಲ್ಲಿ ಫಾರ್ಮಸಿಗೆ ಒಂದು ಚೀಟಿ ಕೊಡುತ್ತಾರೆ.. ಅದರಲ್ಲಿ ಪೇಶೇಂಟ್ ನಂಬರ್ ಬರೆದಿರುತ್ತಾರೆ. ಅಲ್ಲಿಗೆ ಹೋದ ವೇಳೆ ಗ್ಲೌಸ್ ಗೆ ಹಣ ಕೊಟ್ಟು ತೆಗೆದುಕೊಳ್ಳಬೇಕು.. ಗ್ರಾಹಕರು ಬೇರೆ ಕಡೆ ತೆಗೆದುಕೊಳ್ಳೋದಕ್ಕೆ ಬಿಡೋದಿಲ್ಲ..ವೈದ್ಯರು ಸಹ ಇಲ್ಲೇ ತೆಗೆದುಕೊಳ್ಳುವಂತೆ ರೆಫರ್ ಮಾಡುತ್ತಾರೆ. ಅನಿವಾರ್ಯವಾಗಿ ರೋಗಿಗಳ ಸಂಬಂಧಿಕರು ಇಲ್ಲಿಯೇ ಗ್ಲೌಸ್ ಖರೀದಿಸುತ್ತಾರೆ..
ಯಾರಿದ್ದಾರೆ ಇದರ ಹಿಂದೆ?
ಮೆಡಿಕಲ್ ಮಾಫಿಯಾ ಎಂಬುದು ಕೇವಲ ಮ್ಯಾಕ್ಸ್ ಆಸ್ಪತ್ರೆ ಯದ್ದು ಮಾತ್ರವಲ್ಲ..ರಾಜ್ಯದ ನಾನಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಇದೇ ಸ್ಥಿತಿ.ಈ ಆಸ್ಪತ್ರೆಗಳು ಬಹುತೇಕ ರಾಜಕಾರಣಿ ಗಳಾದ್ದಾಗಿರುತ್ತವೆ..ರಾಜಕಾರಣಿಗಳದ್ದು ಅಲ್ಲವಾದರೂ ರಾಜಕಾರಣಿಗಳ ಶ್ರೀ ರಕ್ಷೆ ಆಸ್ಪತ್ರೆ ನಡೆಸುವ ಮಾಲೀಕರಿಗೆ ಇರುತ್ತದೆ..ಅಲ್ಲದೇ ಅವರಿಗೆ ಅವರದ್ದೇ ಆದ ಪಟಾಲಂ ಇರುತ್ತದೆ..ಯಾರು ಏನು ಮಾಡದ ಸ್ಥಿತಿಯನ್ನು ಅವರು ಉದ್ಬವಿಸುತ್ತಾರೆ.
ಬಡವರು ಈ ಆಸ್ಪತ್ರೆಗೆ ಬರುವ ಮುನ್ನ ಎಚ್ಚರ?
ಪ್ರತಿಯೊಬ್ಬರು ಕೂಡ ವೈದ್ಯರನ್ನು ದೇವರಂತೆ ಕಾಣುತ್ತಾರೆ..ವಾಸ್ತವದಲ್ಲಿ ಜೀವ ಉಳಿಸುವ ವೈದ್ಯರು ಖಂಡಿತವಾಗಿಯೂ ದೇವರ ರೀತಿಯೇ..ಆದರೆ ಹೆಚ್ಚು ಲಾಭದ ಉದ್ದೇಶ ಇರುವುದು ಬಡವರಿಗೆ ನುಂಗಲಾರದ ತುತ್ತಾಗಿದೆ.
ಈ ಬಗ್ಗೆ ಡಿಎಚ್ ಒ ಮೌನವೇಕೆ
ಜಿಲ್ಲಾ ಆರೋಗ್ಯಧಿಕಾರಿಗೆ ಈ ಬಗ್ಗೆ ಗೊತ್ತಿದ್ದರೂ ಮೌನವಾಗಿದ್ದಾರೆ. ಇದರ ಹಿಂದೆ ರಾಜಕೀಯ ಪ್ರಭಾವವೂ ಇರಬಹುದು. ಆದರೆ ಒಂದಿಷ್ಟಾದರೂ ಬಿಸಿ ಮುಟ್ಟಿಸಿದರೆ ಇತರೆ ಆಸ್ಪತ್ರೆ ಖಂಡಿತವಾಗಿಯೂ ಪಾಠ ಕಲಿತುಕೊಳ್ಳಲಿವೆ.
ಇಎಸ್ಐ ಗೆ ಗ್ಲೌಸ್ ಬಿಲ್ ಬರೋದಿಲ್ಲ
ಆಸ್ಪತ್ರೆಗೆ ಸೇರುವ ರೋಗಿಗಳು ನೀಡುವ ಇಎಸ್ ಐ ಗೆ ಗ್ಲೌಸ್ ಬಿಲ್ ಬರೋದಿಲ್ಲ. ಹಾಗಾಗಿ ಹಣ ಕೊಟ್ಟು ಗ್ಲೌಸ್ ಖರೀದಿಸಬೇಕಾಗಿದೆ..ಇನ್ನಾದರೂ ಆಸ್ಪತ್ರೆ ಆಡಳಿತ ಮಂಡಳಿ ಹೆಚ್ಚಿನ ಲಾಭದ ಉದ್ದೇಶ ಬಿಟ್ಟು..ಕಡಿಮೆ ಲಾಭವನ್ನಿಟ್ಟು ನೀಡಿದರೆ…ರೋಗಿಗಳು ನೆನಸಿಕೊಳ್ಳುತ್ತಾರೆ ಇಲ್ಲದೇ ಹೋದರೆ?…ನೀವೆ ತಿಳಿದುಕೊಳ್ಳಿ..
…
ಗ್ಲೌಸ್ ಬಗ್ಗೆ ಹೆಚ್ಚಿನ ಬಿಲ್ ತೆಗೆದುಕೊಳ್ಳೊದು ನನಗೆ ಗೊತ್ತಿಲ್ಲ. ಸಾಕ್ಷಿ ಸಮೇತ ದೂರು ನೀಡಿದರೆ ಖಂಡಿತ ಕ್ರಮ ಕೈಗೊಳ್ಳುತ್ತೇನೆ.
-ನಟರಾಜ್, ಡಿಎಚ್ಓ
….