
ಹಾಲೇಶಪ್ಪ ನಾಮಪತ್ರ ಸಲ್ಲಿಕೆ
ದಾವಣಗೆರೆ: ಹರಿಹರ ತಾಲೂಕು ಎ ವರ್ಗಕ್ಕೆ ಸಿರಿಗೆರೆ ಭದ್ರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿ.ಹಾಲೇಶಪ್ಪ ನಾಮಪತ್ರ ಸಲ್ಲಿಸಿದರು. ಹರಿಹರದ ಯಲವಟ್ಟಿ ಪ್ರಾಥಮಿಕ ಕೃಷಿ ಸಂಘದ ಜೆ.ಆಂಜನೇಯ ಸೂಚಕರಾಗಿದ್ದರು.
ಟಿ.ಜೆ.ಜೀವನಪ್ರಕಾಶ್ ನಾಮಪತ್ರ ಸಲ್ಲಿಕೆ
ದಾವಣಗೆರೆ ಎ ವರ್ಗದಿಂದ ಟಿ.ಜೆ.ಜೀವನಪ್ರಕಾಶ್ ಈಚಘಟ್ಟ ಪ್ರಾಥಮಿಕ ಕೃಷಿ ಸಂಘದಿಂದ ನಾಮ ಪತ್ರ ಸಲ್ಲಿಸಿದರು. ಕುರ್ಕಿ ಪ್ರಾಥಮಿಕ ಸಂಘದಿಂದ ಕೆ.ಎಸ್.ಕರಿಬಸಪ್ಪ ಸೂಚಕರಾಗಿದ್ದರು.
ಗೊಪ್ಪೇನಹಳ್ಳಿ ಜಿ.ಎಸ್.ದೀಪಕ್ ಎರಡು ನಾಮಪತ್ರ ಸಲ್ಲಿಕೆ
ಚನ್ನಗಿರಿ ತಾಲೂಕು ಎ ವರ್ಗದಿಂದ ಜಿ.ಎಸ್.ದೀಪಕ್ ನಾಮಪತ್ರ ಸಲ್ಲಿಸಿದರು. ಸೋಮ್ಲಾಪುರ ಪ್ರಾಥಮಿಕ ಸಂಘದ ಟಿ.ಎಚ್.ತಮ್ಮಯ್ಯ, ಮೇದಗೊಂಡನಹಳ್ಳಿ ಸಂಘದ ಎಂ.ಟಿ..ತ್ಯಾಗರಾಜ್ ಸೂಚಕರಾಗಿದ್ದರು.

ಜಿ.ಎಸ್.ಸಂತೋಷ್ ನಾಮಪತ್ರ ಸಲ್ಲಿಕೆ
ಚನ್ನಗಿರಿ ತಾಲೂಕಿನ ಎ ವರ್ಗದಿಂದ ದಾಗಿನಕಟ್ಟೆಯ ಜಿ.ಎಸ್.ಸಂತೋಷ್ ದಾಗಿನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಾಮ ಪತ್ರ ಸಲ್ಲಿಸಿದರು. ಬಸವಾಪಟ್ಟಣ ಕೃಷಿ ಸಂಘದ ಎಸ್.ಜಿ.ಸತೀಶ್ ಸೂಚಕರಾಗಿದ್ದರು.
ಬೇತೂರು ರಾಜಣ್ಣ ನಾಮಪತ್ರ ಸಲ್ಲಿಕೆ
ಎಲೆಬೇತೂರು ಟಿ.ರಾಜಣ್ಣ ಮರುಳ ಸಿದ್ದೇಶ್ವರ ಸಂಘದ ಇ ವರ್ಗದಿಂದ ನಾಮಪತ್ರ ಸಲ್ಲಿಸಿದರು. ದಾವಣಗೆರೆ ನರಸರಾಜವರಸ್ತೆಯ ಬಸವೇಶ್ವರ ವಿವಿಧ್ಧೋದ್ದೇಶ ಡಿ.ತಿಪ್ಪಣ್ಣ ಸೂಚಕರಾಗಿದ್ದರು.
ಐಗೂರು ಚಂದ್ರಣ್ಣ ನಾಮಪತ್ರ ಸಲ್ಲಿಕೆ
ದಾವಣಗೆರೆ ಶಿವ ಸಹಕಾರಿ ಬ್ಯಾಂಕ್ ನ ಸಿ.ಚಂದ್ರಶೇಖರ್ ಸಿ ವರ್ಗದಿಂದ ನಾಮಪತ್ರ ಸಲ್ಲಿಸಿದರು. ದಾವಣಗೆರೆ ದಿ.ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೆ.ಎನ್.ಶಿವಲಿಂಗಪ್ಪ ಸೂಚಕರಾಗಿದ್ದರು.
ವಿ.ಮಂಜುನಾಥ್ ನಾಮಪತ್ರ ಸಲ್ಲಿಕೆ
ದಾಬಣಗೆರೆ ಮಹರಾಜ್ ಪೇಟ್ ಸಂಘದ ವಿ.ಮಂಜುನಾಥ್ ಇವರ್ಗದಿಂದ ನಾಮ ಪತ್ರ ಸಲ್ಲಿಸಿದರು. ದೇವರಾಜ್ ನಗರ ಪ್ರಾಥಮಿಕ ಬಳಕೆದಾರರ ಸಂಘದ ಎ.ಅಜ್ಮಲ್ ಖಾನ್ ಸೂಚಕರಾಗಿದ್ದರು.
ಬಿ.ಸಿ.ಶೀಲಾ ನಾಮಪತ್ರ ಸಲ್ಲಿಕೆ
ದಾವಣಗೆರೆ ಸರ್ವೋದಯ ಸಂಘದ ಬಿ.ಸಿ.ಶೀಲಾ ಇ ವರ್ಗದಿಂದ ನಾಮ ಪತ್ರ ಸಲ್ಲಿಸಿದರು. ಕನಕ ಪ್ರಾಥಮಿಕ ಸಹಕಾರ ಸಂಘದ ಜೆ.ಎಸ್.ರೂಪಾ ನಾಮಪತ್ರ ಸಲ್ಲಿಸಿದರು.