Author: davangerevijaya.com

ಬೆಂಗಳೂರು:ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮುಂದಾಗಿದೆ. ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪದವಿ ಪಡೆಯುವ ಅವಕಾಶ ನೀಡುವ ನಿಟ್ಟಿನಲ್ಲಿ ನಾಲ್ಕು ವರ್ಷದ ಪದವಿ ವ್ಯಾಸಂಗವನ್ನು ಮೂರು ವರ್ಷ ಹಾಗೂ ಮೂರು ವರ್ಷಗಳ ಡಿಗ್ರಿ ಕೋರ್ಸ್ನ್ನು ಎರಡೂವರೆ ವರ್ಷದಲ್ಲಿ ಪೂರ್ಣಗೊಳಿಸುವ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಮಾಡಲು ಆಯೋಗ ರೂಪಿಸಿದೆ. ಚನ್ನೈನಲ್ಲಿ ನಡೆದ ದಕ್ಷಿಣ ವಲಯ ಕಾಲೇಜುಗಳ ಸಮಾವೇಶದಲ್ಲಿ ಯುಜಿಸಿ ಅಧ್ಯಕ್ಷ ಪ್ರೊ.ಎಂ. ಜಗದೀಶ್ ಮಾತನಾಡಿ, ಶೈಕ್ಷಣಿಕ ಅವಧಿಯನ್ನು ಕಡಿಮೆಗೊಳಿಸುವ ಚಿಂತನೆಯು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ನೇತೃತ್ವದ ಸಮಿತಿ ನೀಡಿದ ಶಿಫಾರಸು ಆಧರಿಸಿದೆ. ಈಗಾಗಲೇ ಹೊಸ ಯೋಜನೆಯನ್ನು ಯುಜಿಸಿ ಸಾಮಾನ್ಯ ಸಭೆ ಅಂಗೀಕರಿಸಿದೆ. ಈ ನಿಟ್ಟಿನಲ್ಲಿ ವಿಸ್ತೀರ್ಣ ಮಾರ್ಗಸೂಚಿಗಳನ್ನು ಶೀಘ್ರದಲ್ಲಿ ಹೊರಡಿಸಲಾಗುವುದು ಎಂದು ಜಗದೀಶ್ ಕುಮಾರ್ ಮಾಹಿತಿ ಹಂಚಿಕೊAಡಿದ್ದಾರೆ. ಕೋರ್ಸ್ನ್ನು ಎಷ್ಟು ತ್ವರಿತವಾಗಿ ಪೂರ್ಣಗೊಳಿಸುತ್ತಾರೆ ಎಂಬುದು ವಿದ್ಯಾರ್ಥಿಗಳ ಸಾಮರ್ಥ್ಯ ಆಧರಿಸಿದೆ. ಎರಡೇ ವರ್ಷದಲ್ಲಿ ಅಗತ್ಯ ಕ್ರೆಡಿಟ್‌ಗಳನ್ನು (ಅಂಕ) ಗಳಿಸಿ ಎಂದರೆ ವಿದ್ಯಾರ್ಥಿಗಳಲ್ಲಿ ಒತ್ತಡಕ್ಕೆ ಕಾರಣವಾಗಬಹುದು.…

Read More

ಬೆಂಗಳೂರು :ಕುಳ್ಳ ಪದ ಬಳಕೆ ಮಾಡೋದು ಸರಿಯಲ್ಲ, ಅವರವರ ಸಂಸ್ಕೃತಿ ಆಧಾರದ ಮೇಲೆ ಮಾತನಾಡಿರುತ್ತಾರೆ. ಅವರ ಹಿನ್ನೆಲೆ ಹೇಗಿರಬೇಕು ಗೊತ್ತಿಲ್ಲ. ಅದು ಕೆಟ್ಟದಾಗಿ ಕೇಳಿಸುತ್ತೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧದ ಪದಬಳಕೆ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದರು. ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿಗೆ ಕರಿಯ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿಕೆ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿ, ಜಮೀರ್ ಅಹಮ್ಮದ್ ವಿರುದ್ಧ ಕ್ರಮದ ಬಗ್ಗೆ ಅಧ್ಯಕ್ಷರೇ ಹೇಳಿದ್ದಾರೆ. ಶಿಸ್ತು ಕ್ರಮಕ್ಕೆ ಕಮಿಟಿ ಇದೆ. ಅವರಿಗೆ ರೆಫರ್ ಮಾಡಿದ್ರೆ ತನಿಖೆ ಮಾಡುತ್ತಾರೆ. ಶಿಸ್ತು ಸಮಿತಿಗೆ ದೂರು ಬಂದರೆ ಸ್ಪಷ್ಟೀಕರಣ ಕೇಳುತ್ತಾರೆ. ಅಲ್ಲಿ ಕರೆದು ನೋಟಿಸ್ ಕೊಟ್ಟು ಕೇಳ್ತಾರೆ ಎಂದು ಹೇಳಿದರು. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿ, ಯೋಗೇಶ್ವರ್ ಈಗಾಗಲೇ ಹೇಳಿದ್ದಾರೆ. ಅಲ್ಲಿನ ಮತ ಹಾಕಿದ ಜನಗಳಿಗೆ ಗೊತ್ತಿದೆ, ಅವರೇ ಹೇಳುತ್ತಿದ್ದಾರೆ. ನಾವು ಗೆಲ್ಲಿಸುತ್ತಿದ್ದೇವೆ ಅಂತ ಮತದಾರರೇ ಹೇಳುತ್ತಿದ್ದಾರೆ. ಲೀಡ್ ಎಷ್ಟು ಅಂತ ಹೇಳಲು ಆಗಲ್ಲ,…

Read More

ಬೆಂಗಳೂರು:ಏಳು ಐಪಿಎಸ್ ಅಧಿಕಾರಿಗಳನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶಿಸಿದೆ.  ಶಾಂತನು ಸಿನ್ಹಾ ಅವರನ್ನು ಸಿಐಡಿ ವಿಭಾಗದ ಖಾಲಿ ಇದ್ದ ಡಿಐಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಯಾದಗಿರಿಯ ಎಸ್‌ಪಿ ಜಿ.ಸಂಗೀತಾ ಅವರನ್ನು ಅಪರಾಧ ತನಿಖಾ ಇಲಾ ಖೆಯ ಎಸ್‌ಪಿಯಾಗಿ ಹಾಗೂ ಅಪರಾಧ ತನಿಖಾ ಇಲಾಖೆಯ ಎಸ್‌ಪಿ ಪೃಥ್ವಿಕ್ ಶಂಕರ್ ಅವರನ್ನು ಯಾದಗಿರಿ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಸಿಟಿ ಕೈಂ ವಿಭಾಗದ ಡಿಸಿಪಿ ಅಬ್ದುಲ್ ಅಹ್ಮದ್ ಅವರನ್ನು ಬಿಎಂ ಭದ್ರತಾ ಮತ್ತು ವಿಚಕ್ಷಣೆ ವಿಭಾಗದ ಗದ ನಿರ್ದೇಶಕರಾಗಿದ್ದ ಸದಾಶಿವ ಪ್ರಭು ಬಿ. ವರ್ಗಾವಣೆ ಹಿನ್ನೆಲೆ ಆ ಜಾಗಕ್ಕೆ ವರ್ಗಾ ವಣೆ ಮಾಡಲಾಗಿದೆ.ಬೆಂಗಳೂರು ರಾಜ್ಯ ಅಪರಾಧ ದಾಖಲೆ ಬ್ಯೂರೋದ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರನ್ನು ನೇಮಕ ಮಾಡಲಾಗಿದೆ. ಶಿಖಾ ಕೇಂದ್ರ ಸೇವೆಗೆ ಹಲವು ವರ್ಷಗಳಿಂದ ರಾಜ್ಯ ಸೇವೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ.ಶಿಖಾ ಅವರನ್ನು ಕೇಂದ್ರ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ಕಾರ್ಯ…

Read More

 ಬೆಂಗಳೂರು:ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಖನ್ನ ಹಾಕುತ್ತಿದ್ದ ರಾಜಸ್ಥಾನದ ನಾಲ್ವರು ಮಧ್ಯವರ್ತಿಗಳನ್ನು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು, ಬಂಧಿಸಿದ್ದಾರೆ. ರಾಜಸ್ಥಾನದ ಜೈಸಲ್ಮೇರ್‌ನ ಪವನ್ ಬಿಷ್ಣೋಯಿ(18), ಸವಾಯಿ ಸಿಂಗ್(21) ಹಾಗೂ ಜೋಧಪುರದ ಅರವಿಂದ್ ಕುಮಾರ್ (19), ಅಭಯ್ ಚರಣ್(19) ಬಂಧಿ ತರು. ಇಬ್ಬರನ್ನು ರಾಜಸ್ಥಾನ, ಮತ್ತಿಬ್ಬ ರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ರಾಜಸ್ಥಾನದ ಉದಯಪುರ ದಲ್ಲಿ ಆರೋಪಿಗಳು ಬಾಡಿಗೆ ಮನೆ ಮಾಡಿ ಕೊಂಡಿದ್ದರು. ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದರು. ಆ ಮನೆಯಲ್ಲಿದ್ದ 19 ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್, 20 ಸಿಮ್ ಕಾರ್ಡ್ಗಳು, ವಿದ್ಯಾರ್ಥಿಗಳ ಮೂಲಕ ತೆರೆಸಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ 34 ಬ್ಯಾಂಕ್ ಪಾಸ್‌ಬುಕ್, 106 ಕ್ರೆಡಿಟ್/ಡೆಬಿಟ್ ಕಾರ್ಡ್, 39 ಬ್ಯಾಂಕ್ ಚೆಕ್‌ಬುಕ್, 75 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಅಕ್ಟೋಬರ್ 6ರಂದು ವ್ಯಕ್ತಿಯೊಬ್ಬ ರನ್ನು ಸಂಪರ್ಕಿಸಿದ್ದ ಮಧ್ಯವರ್ತಿಗಳು, ಅರೆಕಾಲಿಕ…

Read More

ವಿಶೇಷಚೇತನರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಧ್ವನಿ ಸೇವೆ ಬೆಂಗಳೂರು: ವಿಶೇಷಚೇತನರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಧ್ವನಿ ಸೇವೆ ಅಳವಡಿಸಲಾಗಿದೆ ಎಂದು ಹೈಕೋರ್ಟ್ಗೆ ಸರಕಾರ ತಿಳಿಸಿದೆ 928 ಬಸ್‌ಗಳಲ್ಲಿ ವಿಕಲಚೇತನರು ಮತ್ತು ದೃಷ್ಟಿದೋಷವುಳ್ಳವರ ಸಹಾಯಕ್ಕಾಗಿ ಧ್ವನಿ ಪ್ರಕಟಣೆ ವ್ಯವಸ್ಥೆ ಅಳವಡಿಸಲಾಗಿದೆ. ರಾಜ್ಯ ಮತ್ತು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಮೆಟ್ರೋ ರೈಲುಗಳಲ್ಲಿ ಧ್ವನಿ ಪ್ರಕಟಣೆ ಸೇವೆ ಪುನರಾರಂಭಿಸುವAತೆ ಕೋರಿ ದೃಷ್ಟಿದೋಷವುಳ್ಳ ಎನ್.ಶ್ರೇಯಸ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠಕ್ಕೆ ಬಿಎಂಟಿಸಿ ಪರ ವಕೀಲರು ಈ ಬಗ್ಗೆ ಮಾಹಿತಿ ನೀಡಿದರು. ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರ ಮನವಿ ಈಡೇರಿದೆ. ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಸಾರಿಗೆ ಸಂಸ್ಥೆ ಜಾರಿ ಮಾಡಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರಿಂದಲೇ ವಾದ ಮಂಡನೆ: ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ್ದ ಅರ್ಜಿದಾರ ಶ್ರೇಯಸ್, ಪ್ರಾರಂಭಿಕ ಹಂತದಲ್ಲಿ ಕೆಎಸ್‌ಆರ್ ಟಿಸಿ, ಬಿಎಂಟಿಸಿ ಬಸ್‌ಗಳು ಮತ್ತು ಮೆಟ್ರೋ ರೈಲಿನಲ್ಲಿ…

Read More

ಬೆಂಗಳೂರು:ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು 12 ಮಂದಿ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಒಟ್ಟು 60 ಲಕ್ಷ ರೂ. ಮೌಲ್ಯದ 62 ದ್ವಿಚಕ್ರ ವಾಹನ, 25 ಮೊಬೈಲ್ ಹಾಗೂ 34 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರ್‌ಟಿ ನಗರ: ರಾತ್ರಿ ವೇಳೆ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಬೀಗ ಹಾಕಿ ನಿಲ್ಲಿಸಿದಂತಹ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಇಬ್ಬರನ್ನು ಆರ್‌ಟಿ ನಗರ ಠಾಣೆ ಪೊಲೀಸರು ಬಂಧಿಸಿ, ಅನಂತಪುರ ಜಿಲ್ಲೆಯ ಹಿಂದುಪುರದ ಗ್ಯಾರೇಜ್ ನಲ್ಲಿ ನಿಲ್ಲಿಸಿದಂತಹ 12 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಅನಂತಪುರ ಜಿಲ್ಲೆಯವರಾಗಿದ್ದು, ಒಬ್ಬಾತ ಮೆಕಾನಿಕ್ ಅಂಗಡಿ ಇಟ್ಟುಕೊಂಡಿದ್ದಾನೆ. ದ್ವಿಚಕ್ರ, ವಾಹನಗಳ ಬಿಡಿ ಭಾಗಗಳನ್ನು ಖರೀದಿಸಲು ಆಗಾಗ್ಗೆ ನಗರಕ್ಕೆ ಬರುತ್ತಿದ್ದಾಗ ವಾಪಸ್ ಹೋಗುವ ಸಮಯದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅವುಗಳ ಚಾರ್ಸಿ ನಂಬರ್ ಆಳಿಸಿ ನಕಲಿ ನಂಬರ್ ಅಳವಡಿಸುತ್ತಿದ್ದುದು ತನಿಖೆಯಿಂದ ಸೋಲದೇವನಹಳ್ಳಿ ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾ ಕಳವು…

Read More

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🐬📖ದಿನ ಭವಿಷ್ಯ 17/11/2024 ಭಾನುವಾರ📖🐬* *01, ♈🐏,⚜️,ಮೇಷ ರಾಶಿ*⚜️ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ವಿವಾದಗಳಿಂದ ದೂರವಿರುವುದು ಉತ್ತಮ. ವೃತ್ತಿ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ ಮತ್ತು ನಿರುದ್ಯೋಗಿಗಳ ಶ್ರಮ ವ್ಯರ್ಥವಾಗಿ ಉಳಿಯುತ್ತದೆ . ಆರ್ಥಿಕ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ ಅದೃಷ್ಟದ ದಿಕ್ಕು:ಉತ್ತರ ಅದೃಷ್ಟದ ಸಂಖ್ಯೆ:9 ಅದೃಷ್ಟದ ಬಣ್ಣ:ಕೆಂಪು *02, ♉🐂,⚜️,ವೃಷಭ ರಾಶಿ*⚜️ ಬಾಲ್ಯದ ಗೆಳೆಯರ ಆಗಮನ ಸಂತಸ ತರುತ್ತದೆ. ಸ್ಥಿರಾಸ್ತಿಯ ವಿಷಯಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಸಂಬಳದ ಬಗ್ಗೆ ಶುಭ ಸುದ್ದಿ ಸಿಗುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ದೈವಿಕ ದರ್ಶನವನ್ನು ಪಡೆಯುತ್ತೀರಿ, ಅದೃಷ್ಟದ ದಿಕ್ಕು:ದಕ್ಷಿಣ ಅದೃಷ್ಟದ ಸಂಖ್ಯೆ:3 ಅದೃಷ್ಟದ ಬಣ್ಣ:ಕಂದು *03,♊👥,⚜️,ಮಿಥುನ ರಾಶಿ*⚜️ ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಸ್ನೇಹಿತರ ನೆರವಿನಿಂದ ಸಾಲದ ಸಮಸ್ಯೆಗಳಿಂದ ಹೊರಬರುವಿರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯಲಿವೆ. ವೃತ್ತಿಪರ ವ್ಯವಹಾರಗಳು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ.…

Read More

ಶಿವಮೊಗ್ಗ:ಮೈಸೂರು ಕಾಗದ ಕಾರ್ಖಾನೆಯ (ಎಂಪಿಎA) ನಿವೃತ್ತ ಉದ್ಯೋಗಿ ಎಲ್.ಎಸ್. ಆನಂದ್(72) ಅವರಿಂದ ‘ಡಿಜಿಟಲ್ ಅರೆಸ್ಟ್’ ಮೂಲಕ 41 ಲಕ್ಷ ಸುಲಿಗೆ ಮಾಡಿದ್ದ ಉತ್ತರ ಪ್ರದೇಶದ ಇಬ್ಬರನ್ನು  ಸಿಇಎನ್ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಉತ್ತರ ಪ್ರದೇಶದ ವಲೀದ್‌ಪುರ ನಗರದ ಮೊಹಮ್ಮದ್ ಅಹಮದ್ (45), ಅಜಂಗಡ ಜಿಲ್ಲೆಯ ಮೊಹುಡಿಯಾ ಗ್ರಾಮದ ಅಭಿಷೇಕ್ ಕುಮಾರ್ ಶೇಟ್ (27) ಬಂಧಿತರು. ಆರೋಪಿಗಳಿಂದ 23,89,751 ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಇಂಟರ್‌ಪೋಲ್ ನೆರವು ಕೋರಲಾಗಿದೆ. ಘಟನೆಯ ವಿವರ ಶಿವಮೊಗ್ಗ ಗೋಪಾಲಗೌಡ ಬಡಾವಣೆ (ಗೋಪಾಳ) ನಿವಾಸಿ ಎಲ್.ಎಸ್. ಆನಂದ್ ಅವರಿಗೆ ಸೆಪ್ಟೆಂಬರ್ 27ರಂದು ವಿಡಿಯೊ ಕರೆ ಮಾಡಿದ್ದ ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು.‘ ನಿಮ್ಮ ಆಧಾರ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಂತೆಯೇ ನಿಮ್ಮ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಬಂಧನಕ್ಕೆ ವಾರಂಟ್ ಜಾರಿ ಆಗಿದೆ. ನಿಮಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪ್ರಕರಣದಿಂದ…

Read More

ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಬಹುತೇಕ ಪ್ರಕರಣಗಳಿಗೆ ಮುಕ್ತಿ ತಕರಾರು ಅರ್ಜಿಗಳ ವಿಲೇಗೆ 18ಜನ ವಿಶೇಷ ‘ಎಸಿ’ಗಳ ನೇಮಕ ಜನವರಿ-ಫೆಬ್ರವರಿಯೊಳಗೆ ಎಲ್ಲಾ ಹಳೆ ಪ್ರಕರಣಗಳಿಗೂ ಇತ್ಯರ್ಥದ ಗುರಿ. ಎಸಿ ನ್ಯಾಯಾಲಯಗಳಲ್ಲಿ ಹಿಂದಿನ ಸರಕಾರದಲ್ಲಿದ್ದ ಬಾಕಿ ಇದ್ದ ಪ್ರಕರಣ  ಶೇ.70ರಷ್ಟು ತಕರಾರು ಅರ್ಜಿಗಳ ವಿಲೇವಾರಿ ಬೆಂಗಳೂರು; ಕಂದಾಯ ನ್ಯಾಯಾಲಯ (ಎಸಿ) ಕೋರ್ಟ್ನಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ ಶೇ.80ರಷ್ಟು ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದರು. ಶನಿವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿ ಮಾತನಾಡಿದ ಅವರು, “ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿಗದಿಪಡಿಸಿರುವ ಕಾಲಮಿತಿ 6 ತಿಂಗಳು ಮಾತ್ರ. ಆದರೆ ಕಳೆದ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ನ್ಯಾಯಾಲಯಗಳ ಪ್ರಕರಣಗ ವಿಳಂಬದ…

Read More

ದಾವಣಗೆರೆ : ಮಧ್ಯ ಕರ್ನಾಟಕದ ಕೇಂದ್ರ ಬಿಂದು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ನೆಲೆಯುರಿಸಿದ ಶ್ರಮ ಜಿ.ಎಂ ಸಿದ್ದೇಶ್ವರ ಅವರಿಗೆ ಸೇರಬೇಕು. ಸಂಸದರಾಗಿ, ಕೇಂದ್ರದ ರಾಜ್ಯ ಸಚಿವರಾಗಿ ವಿಶ್ವಮಟ್ಟದಲ್ಲಿ ದಾವಣಗೆರೆಯನ್ನು ನೋಡುವಂತೆ ಮಾಡಿದ ಕೀರ್ತೀ ಅವರಿಗೆ ಸಲ್ಲುತ್ತದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಅದ್ಯಕ್ಷರಾದ ಬಾಡದ ಆನಂದರಾಜು ತಿಳಿಸಿದರು. ಜಿಎಂಐಟಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಈ ವಿಷಯ ತಿಳಿಸಿದರು. ಸೋಲಿಲ್ಲದ ಸಂಸತ್ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಸಿದ್ದೇಶ್ವರ ಅವರು ಇಂದಿಗೂ ಜಿಲ್ಲೆಯಲ್ಲಿ ಸಂಘಟನೆ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಎಂದರು. ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಅನೂನ್ಯ ಬಾಂಧವ್ಯ ಹೊಂದಿರುವ ಸಿದ್ಧಣ್ಣ ಪಕ್ಷದ ಸಂಘಟನೆ ವಿಚಾರದಲ್ಲಿ ಮಾತ್ರ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂದರು. ವಯಸ್ಸು 70 ದಾಟಿದರೂ ಸಹ ಯುವಕರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ, ಸಾಮಾನ್ಯ ಕಾರ್ಯಕರ್ತರಿಗೂ ಮಾರ್ಗದರ್ಶಕರಾಗಿ ಪಕ್ಷವನ್ನು ಸಂಘಟನೆ ಮಾಡುವ ಮೂಲಕ ಬಿಜೆಪಿಗೆ…

Read More