


ಶಿವಮೊಗ್ಗ : ಸರಕಾರಿ ಆಸ್ಪತ್ರೆ ದೇವರ ಆಸ್ಪತ್ರೆ ಅಂತ ಬಡವರು ಹೇಳುತ್ತಾರೆ..ಅದು ನಿಜ ಕೂಡ ಇರಬಹುದು.ಅಲ್ಲಿ ರೋಗಿಗಳ ಸಂಬಂಧಿಗಳು ನೆಮ್ಮದಿಯಿಂದ ಮಲಗಬಹುದು..ಆದರೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಬಂದ್ರೆ ಇರುವ ನೆಮ್ಮದಿ ಕೂಡ ಹಾಳಾಗುತ್ತದೆ..ಇಲ್ಲಿ ರೋಗಿಗಳ ಸಂಬಂಧಿಕರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ…ಇದು ಸ್ವತಃ ಪತ್ರಕರ್ತನೊಬ್ಬನಿಗೆ ಆದ ಅನುಭವ.
ಹೌದು..ಈ ಆಸ್ಪತ್ರೆಗೆ ನೀವೇನಾದರೂ ಅಪ್ಪಿ ತಪ್ಪಿ ಹೋದರೆ ಒಂದಿಷ್ಟು ಜೋಕೆ…ಹೋಗುವಾಗಲಿ ತಲೆ ದಿಂಬು, ಬೆಡ್ ಶೀಟ್ ಹೆಚ್ಚು ಕಮ್ನಿಯಾದರೆ ಮಂಚನೇ ತೆಗೆದುಕೊಂಡು ಹೋಗಬೇಕು.

ವೈದ್ಯೋ ನಾರಾಯಣ ಹರಿ ಅಂತ ವೈದ್ಯರನ್ಬು ದೇವರೆಂದು ಭಾವಿಸಿ ಹಣ ಖರ್ಚಾದರೂ, ಆರೋಗ್ಯ ಕಾಪಾಡಿಕೊಳ್ಳಲು ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ..ತಮ್ಮ ಸಂಬಂಧಿಕರು, ಹಿತೈಷಿಗಳು ಹುಷಾರಾಗಿಲಿ ಎಂದು ಸಾಲ, ಮನೆ, ಮಾರಿ ಈ ಆಸ್ಪತ್ರೆಗೆ ಕಟ್ಟುತ್ತಾರೆ. ಇಲ್ಲಿ ಏನೇ ತೆಗೆದುಕೊಂಡರೂ ದುಪ್ಪಟ್ಟು ದರ. ಅಲ್ಲ ತ್ರಿಪಟ್ಟು ಕೂಡ ತೆಗೆದುಕೊಳ್ಳುತ್ತಾರೆ.. ಉದಾಹರಣೆಗೆ ಉತ್ತಮ ಗುಣಮಟ್ಟದ ಹ್ಯಾಂಡ್ ಗ್ಲೌಸ್ ಗೆ ಜಾಸ್ತಿ ಅಂದ್ರೆ ನಾಲ್ಕು ರೂಪಾಯಿ ಇರುತ್ತದೆ.ಆದರೆ ಇಲ್ಲಿ ಒಂಭತ್ತು ರೂಪಾಯಿ ಹಾಕುತ್ತಾರೆ..ಇದು ಕೇವಲ ಸ್ಯಾಂಪಲ್ ಅಷ್ಟೇ ಇನ್ನೂ ಬೇರೆ ಮೆಡಿಸಿನ್ ಬಗ್ಗೆ ಕೇಳಲೇಬೇಡಿ ರೇಟ್, ರೇಟ್…ಬಡವ ಏನಾದರೂ ಈ ಆಸ್ಪತ್ರೆಗೆ ಬಂದ್ರೆ ಕಥೆ ಮುಗಿದೇ ಹೋಯಿತು…

ಈ ಮ್ಯಾಕ್ಸ್ ಆಸ್ಪತ್ರೆಯಲ್ಲಿ ರೋಗಿಗೆ ಒಂದು ದಿಂಬು ಕೊಡೋದಿಲ್ಲ
ಈ ಬ್ಲೇಡ್ ಮ್ಯಾಕ್ಸ್ ಆಸ್ಪತ್ರೆಗೆ ಲಕ್ಷಾಂತರ ಹಣ ನೀಡಿದರೂ ಸಂಬಂಧಿಗಳು ಮಲಗಲು ಜನರಲ್ ವಾರ್ಡ್ ನಲ್ಲಿ ಒಂದು ದಿಂಬು ಕೊಡೋದಿಲ್ಲ…ದಿಂಬು ಕೇಳಿದರೆ ರೋಗಿಗಳಿಗೆ ಮಾತ್ರ ಅನ್ನುತ್ತಾರೆ. ಈ ಕಾರಣದಿಂದ ರೋಗಿಗಳ ಸಂಬಂಧಿಕರು ನೆಲದ ಮೇಲೆ ಅಥವಾ ಚೇರ್ ಮೇಲೆ ಮಲಗಬೇಕು…ಅಲ್ಲಿ ಕೂಡ ನೆಮ್ಮದಿಯಿಂದ ಮಲಗುವಾಗಿಲ್ಲ..ಹೋಗಲಿ ನೆಮ್ಮದಿಯಾಗಿ ಊಟ ಕೂಡ ಮಾಡುವ ಹಾಗೆ ಇಲ್ಲ..ಏನಾದರೂ ಕೇಳಿದ್ರೆ ಮ್ಯಾನೆಜ್‌ಮೆಂಟ್ ರೂಲ್ಸ್ ಹಾಗೆ ಇರೋದು ಅವರನ್ನೇ ಕೇಳಿ ಅನ್ನುತ್ತಾರೆ.
ಮೌನವಹಿಸಿರುವ ಶಿವಮೊಗ್ಗದ ಡಿಎಚ್ ಒ
ಶಿವಮೊಗ್ಗದ ಡಿಎಚ್ ಓ ಈ ಖಾಸಗಿ ಒಡೆತನದ ಆಸ್ಪತ್ರೆಯಲ್ಲಿ ನಡೆಯುವ ದಂಧೆ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ…ವಿಸಿಟ್ ಕೂಡ ಹಾಕೋದಿಲ್ಲ…ಅವರು ವಿಸಿಟ್ ಮಾಡಬೇಕೆಂದರೆ ದೂರು ಕೊಡಬೇಕಂತೆ..ಅಲ್ಲಿಯವರೆಗೆ ಇವರು ಯಾವುದೇ ಕ್ರಮ ತೆಗೆದುಕೊಳ್ಳೋದಿಲ್ಲವಂತೆ…ಇವೆಲ್ಲ ನೋಡಿದರೆ ಡಿಎಚ್ಓ ಮೇಲೆ ಹೆಚ್ಚು ಅನುಮಾನ ಬರುತ್ತಿದೆ.
ಮ್ಯಾಕ್ಸ್ ಆಸ್ಪತ್ರೆಗೆ ಇದೆ ರಾಜಕಾರಣಿಗಳ ಕೃಪಾಕಟಾಕ್ಷ
ಹೀಗೆ ಬೃಹದ್ ಕಾರವಾಗಿ ಬೆಳೆದಿರುವ ಮ್ಯಾಕ್ಸ್ ಆಸ್ಪತ್ರೆಗೆ ರಾಜಕಾರಣಿಗಳ ಕೃಪಾಕಟಕ್ಷವಿದೆ..ಇವರು ಏನೇ ಮಾಡಿದರೂ ಕ್ಯಾರೇ ಅನ್ನೋರು ಇಲ್ಲ….ಯಾರು ಏನೇ ದೂರು ನೀಡಿದರೂ ಅಲ್ಲಿಯೇ ಮುಚ್ಚಿ ಹೋಗುತ್ತದೆ..ಒಟ್ಟಾರೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಹೋಗುವ ಮುನ್ನ ತುಸು ಜಾಗೃತವಾಗಿಯೇ ಇರಿ….ಒಂದು ವೇಳೆ ಹೋದರು ಮಲಗಲು ತಲೆ ದಿಂಬು ತೆಗೆದುಕೊಂಡು ಹೋಗಿ...ಎಚ್ಚರ….ಎಚ್ಚರ..ಡೋಂಟು ಮಿಸ್..