


ದಾವಣಗೆರೆ : ಉತ್ತರ ಕರ್ನಾಟಕದ ಮಂದಿ ಹವಾನೇ ಬೇರೆ, ಅವರದ್ದು ಗತ್ತು ಗಮತ್ತೇ ಬೇರೆ…ಒಮ್ಮೆ ಕೈ ಇಟ್ಟರೇ ಆ ಕೆಲಸ ಆಗೋದೇ ಇಲ್ಲ ಎಂಬ ಮಾತಿದೆ..ಈ ಮಾತಿಗೆ ಸೂಟ್ ಆಗೋದು ದಾವಣಗೆರೆ ಗ್ರಾಮಾಂತರ ಡಿ.ಎಸ್ಪಿ.ಬಸವರಾಜ್…ಅಷ್ಟಕ್ಕೂ ಅವರಿಗೆ ಈ ಮಾತು ಹೇಳೋದಕ್ಕೂ ಕಾರಣವಿದೆ..ಅದೇನೂ ಅಂತೀರಾ ಈ ಸ್ಟೋರಿ ನೋಡಿ.
ಡಿಎಸ್ಪಿ ಬಸವರಾಜ್ ದಾವಣಗೆರೆ ಜಿಲ್ಲೆಯಲ್ಲಿ ತಮ್ಮದೇ ಹೆಸರು ಮಾಡಿರುವ ಆಫೀಸರ್. ಮೂಲತಃ ಉತ್ತರ ಕರ್ನಾಟಕದವರಾದ ಇವರು. ಕ್ರೈಂ ಗಳನ್ನು ಭೇದಿಸುವಲ್ಲಿ ಅನುಭವಿ. ಅಲ್ಲದೇ ಲಂಬಾಣಿ ಸಮುದಾಯದ ಇವರು, ಕಲೆ, ಸಂಸ್ಕೃತಿಗೂ ಆದ್ಯತೆ ನೀಡುವರು.ತಾಯಿ ಇಂದುಮತಿ ಪ್ರಖ್ಯಾತ ದಲಿತ ಕವಿ..ಎಲ್ಲೆ ಅನ್ಯಾಯವಾದರೂ ತನ್ನ ಕಾದಂಬರಿಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ..ಇಂತಹವರ ಮಗ ಡಿವೈಎಸ್ಪಿ ಬಸವರಾಜ್ ಪಾತಕಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಕಾರಣ ಸಿಎಂ ಪದಕ ಸಿಕ್ಕಿದೆ.

ನ್ಯಾಮತಿ ಬ್ಯಾಂಕ್ ದರೋಡೆ 17 ಕೆಜಿ ಬಂಗಾರ ಭೇದಿಸಿದ ಪ್ರಕರಣಕ್ಕೆ ಸಿಕ್ತು ಸಿಎಂ ಪದಕ
ಇಡೀ ರಾಜ್ಯಾದ್ಯಂತ ಈಗ ಬ್ಯಾಂಕ್ ದರೋಡೆ ಪ್ರಕರಣ ನಡೆಯುತ್ತಿದೆ..ಆದರೆ ಇದಕ್ಕೂ ಮುಂಚೆ ನ್ಯಾಮತಿಯಲ್ಲಿ ಬ್ಯಾಂಕ್ ದರೋಡೆ ನಡೆದಿತ್ತು..ಸುಮಾರು 17 ಕೆಜಿ ಬಂಗಾರ ಕಳವು ಆಗಿತ್ತು..ಸ್ಥಳದಲ್ಲಿ ಯಾವುದೇ ಸಿಸಿ ಟಿವಿ ಇರಲಿಲ್ಲ..ಖಾರದ ಪುಡಿ ಹಾಕಿದ್ದ ಕಾರಣ ಪೊಲೀಸ್ ಡಾಗ್ ಗೂ ಕಳ್ಳರ ಜಾಡು ಹಿಡಿಯೋದಕ್ಕೆ ಸಾಧ್ಯವಾಗಲಿಲ್ಲ. ಇನ್ನು ದರೋಡೆಕೋರರು ಇದೇ ಮೊದಲ ಬಾರಿಗೆ ಬ್ಯಾಂಕ್ ನ್ನು ದರೋಡೆ ಮಾಡಿದ್ದರು. ಇವರಿಗೆ ಯಾವುದೇ ಅಪರಾಧ ಪ್ರಕರಣ ಇರಲಿಲ್ಲ..ಇಷ್ಟು ಕ್ಲೀಷ್ಟ ಪ್ರಕರಣವನ್ನು ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ವಹಿಸಿತ್ತು…ತದ ನಂತರ ಅನುಭವಿ ಡಿಎಸ್ಪಿ ಬಸವರಾಜ್ ಮೊದಲು ಸ್ಥಳೀಯರನ್ನು ವಿಚಾರಿಸಿದರು…ಬ್ಯಾಂಕ್ ನ ಬಗ್ಗೆ ಸ್ಥಳೀಯರಿಗೆ ಮಾತ್ರ ಗೊತ್ತಿರುತ್ತದೆ, ಬೇರೆ ಯಾರಿಗೂ ಗೊತ್ತಿರೋದಿಲ್ಲ ಎಂಬುದು ಅವರ ಊಹೆಯಾಗಿತ್ತು. ಈ ಊಹೆ ಸರಿಯಾಗಿಯೇ ಇತ್ತು. ನಂತರ ಸಿಡಿಆರ್, ಸಿಸಿ ಕ್ಯಾಮೆರಾ ಹೀಗೆ ಹತ್ತಾರು ಸಂಗತಿಗಳನ್ನು ಭೇದಿಸುತ್ತಾ ಹೋದಾಗ ದರೋಡೆಕೋರರು ಯಾರು ಅಂತ ಗೊತ್ತಾಯ್ತು..ಸೀದಾ ತಮಿಳುನಾಡಿಗೆ ಹೊರಟು ಅಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಪಾಳು ಬಾವಿಯಲ್ಲಿ ಬಚ್ಚಿಟ್ಟ 17 ಕೆ.ಜಿ.ಬಂಗಾರವನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರು.ಇದರಲ್ಲಿ ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾಪ್ರಶಾಂತ್ ಶ್ರಮ ಕೂಡ ಬಹಳ ಇತ್ತು. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್ಪಿ ಬಸವರಾಜ್ ಗೆ ಸಿಎಂ ಪದಕ ಸಿಕ್ರು.

2 ಕೋಟಿ 68 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ವಂಚನೆ ಪ್ರಕರಣ ಭೇದಿಸಿದ್ದ ಡಿಎಸ್ಪಿ ಬಸವರಾಜ್
ದಾವಣಗೆರೆ ಇತಿಹಾಸದಲ್ಲಿಯೇ 2 ಕೋಟಿ 68 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ವಂಚನೆ ಪ್ರಕರಣವನ್ನು ಎಸ್ಪಿ ರಿಷ್ಯಂತ್ ನೇತೃತ್ವದಲ್ಲಿ ಡಿಎಸ್ಪಿ ಬಸವರಾಜ್ ತಂಡ ಭೇದಿಸಿತ್ತು.ಇಂತಹ ಕೇಸ್ ಮೊದಲನೆಯದಾಗಿದ್ದು, ಎಸ್ಪಿ ಸಿಬಿ ರಿಷ್ಯಂತ್, ಡಿಎಸ್ಪಿ ಬಸವರಾಜ್ ತಂಡ ಈ ಕೆಲಸ ಮಾಡಿತ್ತು.ಹೀಗೆ ಸಾವಿರಾರು ರೈತರಿಗೆ ವಂಚನೆ ಮಾಡುವುದು ಇವರ ಕೆಲ್ಸಾ. ಇದಕ್ಕಾಗಿಯೇ ಇವರೊಂದು ಜಿಎಂಸಿ ಎಂದು ಕಂಪನಿ ಮಾಡಿಕೊಂಡಿದ್ದರು. ನಂತರ 96 ಜನ ರೈತರ ಹಾಗೂ 29 ಜನ ವರ್ತಕರಿಂದ 125 ಜನರಿಂದ ಮೆಕ್ಕೆಜೋಳ ಖರೀದಿಸಿ ಕಳೆದ ಒಂದುವರೆ ವರ್ಷದಿಂದ ಹಣ ನೀಡದೇ ವಂಚಿಸಿ ತಲೆ ಮರೆಸಿಕೊಂಡಿದ್ದರು. ಇಂತಹ ಪ್ರಕರಣವನ್ನು ಡಿಎಸ್ಪಿ ಬಸವರಾಜ್ ತಂಡ ಭೇದಿಸಿತ್ತು.
ಇದು ಸ್ಯಾಂಪಲ್ ಅಷ್ಟೇ..ಇಂತಹ ಹಲವಾರು ಪ್ರಕರಣಗಳನ್ನು ಈ ತಂಡ ಬೇಧಿಸಿದೆ.
ನವ ಜಾತ ಶಿಶುವನ್ನು ಸಾಕಿ ಶಿಕ್ಷಣ ಕೊಡಿಸಿ ಮಾನವೀಯತೆ ಮೆರೆದಿರುವ ಡಿಎಸ್ಪಿ ಬಸವರಾಜ್
ಡಿಎಸ್ಪಿ ಬಸವರಾಜ್ ಕೇವಲ ಒಬ್ಬ ಅಧಿಕಾರಿ ಮಾತ್ರ ಅಲ್ಲ ಮಾನವೀಯ ಮೌಲ್ಯಗಳನ್ನು ಹಿಡಿದು ಇಟ್ಟುಕೊಂಡಿರುವ ವ್ಯಕ್ತಿ.ತನ್ನ ಬಳಿ ಯಾರೇ ಕಷ್ಟ ಅಂತ ಹೇಳಿಕೊಂಡು ಬಂದರೂ ಅವರಿಗೆ ಧನ ಸಹಾಯ ಮಾಡುವ ಶ್ರೇಷ್ಠ ವ್ಯಕ್ತಿ…ಹೀಗಾಗಿಯೇ ಅವರು ಅಜಾತ ಶತ್ರು ಅಂತ ಬಿರುದು ಪಡೆದುಕೊಂಡವರು. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಕೆಲ ವರ್ಷಗಳ ಹಿಂದೆ ಒಂದೂರಿನಲ್ಲಿ ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಎಂದು ಯಾರು ನವಜಾತ ಶಿಶು ಎಂದು ಬಿಸಾಡಿ ಹೋಗಿದ್ದರು..ಆಗ ಡಿಎಸ್ಪಿ ಬಸವರಾಜ್ ಆ ಹೆಣ್ಣು ಮಗುವನ್ನು ಸಾಕಿ ಉತ್ತಮ ಶಿಕ್ಷಣ ಕೊಡಿಸಿದ ಪರಿಣಾಮ ಇಂದು ಆ ಹೆಣ್ಣು ಮಗು ಬೆಳೆದು ದೊಡ್ಡವಳಾಗಿ ಉನ್ನತ ಹುದ್ದೆಯಲ್ಲಿ ಇದ್ದಾಳೆ.
ಪತ್ರಕರ್ತನ ಪತ್ನಿ ನೇಣಿಗೆ ಶರಣು, ಶವ ಸಂಸ್ಕಾರಕ್ಕೆ ಗೊತ್ತಿಲ್ಲದೇ ಹಣ ನೀಡಿದ್ದ ಡಿಎಸ್ಪಿ ಬಸವರಾಜ್
ಡಿಎಸ್ಪಿ ಬಸವರಾಜ್ ಕೇವಲ ಅಧಿಕಾರಿ ಮಾತ್ರವಲ್ಲ..ಎಲ್ಲ ಎಸ್ಪಿಗಳ ಮೆಚ್ಚುಗೆಯ ಅಧಿಕಾರಿ ಕೂಡ ಆಗಿದ್ದು, ಸಹಾಯ ಬೇಡದೇ ಹೋದರೂ, ಅವರಿಗೆ ತಾನಾಗಿಯೇ ಸಹಾಯ ಮಾಡುವ ವ್ಯಕ್ತಿ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಪತ್ರಕರ್ತನನೊಬ್ಬನ ಹೆಂಡ್ತಿ ನೇಣಿಗೆ ಶರಣಾದ ವೇಳೆ ಚಿಗಟೇರಿ ಆಸ್ಪತ್ರೆಗೆ ಖುದ್ದಾಗಿ ಬಂದ ಡಿಎಸ್ಪಿ ಬಸವರಾಜ್ ಪತ್ನಿ ಶವ ಸಂಸ್ಕಾರಕ್ಕೆ ಗೊತ್ತಿಲ್ಲದಂತೆ ಹಣ ನೀಡಿದ್ದರು.
ಪ್ರೇಮಲೋಕ ಹಾಡು ಹಾಡಿದ್ದ ಡಿ ಎಸ್ಪಿ ಕಲಾವಿದರು ಹೌದು
ದಾವಣಗೆರೆ ಪೊಲೀಸ್ ಕವಾಯತು ಮೈದಾನದಲ್ಲಿ ಕಳೆದ ವರ್ಷ ಏರ್ಪಡಿಸಿದ್ದ ಪೊಲೀಸ್ ಕ್ರೀಡಾಕೂಟ ವೇಳೆ ರಾತ್ರಿ ಮನೋರಂಜನೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಿಎಸ್ಪಿ ಬಸವರಾಜ್ ಪ್ರೇಮಲೋಕ ಹಾಡು ಹಾಡಿ ನೋಡುಗರನ್ನು, ಕೇಳುಗರನ್ನು ರಂಜಿಸಿದ್ದು, ಇನ್ನು ಮರೆತಿಲ್ಲ.
ವಿಷ್ಣುವರ್ಧನ್ ಪಾತ್ರದಲ್ಲಿ ಕ್ರೈಂ ಡಿವೈಎಸ್ಪಿ ಬಸವರಾಜ್ ನಟನೆ ಮಾಡಿದರೆ, ನಾಯಕಿ ಜೂಹಿಚಾವ್ಲಾ ಪಾತ್ರದಲ್ಲಿ ವೈರ್ ಲೆಸ್ ಸಿಪಿಐ ತೇಜಾವತಿ, ರವಿಚಂದ್ರನ್ ಪಾತ್ರದಲ್ಲಿ ಹದಡಿ ಪಿಎಸ್ಐ ಸಂಜೀವ್ ಮತ್ತಿತರ ಸಿಬ್ಬಂದಿಗಳು ಈ ಹಾಡಿನಲ್ಲಿ ತೆರೆಯ ಮೇಲೆ ವಿದ್ಯಾರ್ಥಿಗಳಾಗಿ ಪಾತ್ರ ವಹಿಸಿದ್ದರು. ಈ ಹಾಡು ಅದ್ಭುತವಾಗಿ ಮೂಡಿಬಂತು. ನುರಿತ ಕಲಾವಿದರಂತೆ ನಟಿಸಿದ ಇವರ ಅಭಿನಯಕ್ಕೆ ವೇದಿಕೆಯ ಮೇಲಿನ ಲೈಟಿಂಗ್ ವ್ಯವಸ್ಥೆಯು ನೋಡುಗರನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿತ್ತು.
ಮಲೆ ಬೆನ್ನೂರಿನಲ್ಲಿ ಮೇರಿ ಸಪನೋ ರಾನೀ ಕಬ್ ಆಯೇಂಗೀ ತು
ಮಲೆಬೆನ್ನೂರಿನಲ್ಲಿ ಇತ್ತೀಚೆಗೆ ನಡೆದ ಕ್ವಾರ್ಟಸ್ ಸಮಾರಂಭದಲ್ಲಿ ಡಿಎಸ್ಪಿ ಬಸವರಾಜ್ ಮೇರಿ ಸಪನೋ ಕೆ ರಾನೀ ಕಬ್ ಆಯೇಂಗೀ ತು ಆಇ ಋತ ಮಸ್ತಾನೀ ಕಬ್ ಆಯೇಂಗೀ ತು ಬಿತಿ ಜಾನೇ ಜೀದಾಗಾನಿ ಕಬ್ ಆಯೇಂಗೀ ತು ಚಾಲೀ ಆ, ಆ ತು ಚಾಲೀ ಆ ಮೇರಿ ಸಪನೋ ಕೆ ರಾನೀ ಕಬ್ ಆಯೇಂಗೀ ತು ಆಇ ಋತ ಮಸ್ತಾನೀ ಕಬ್ ಆಯೇಂಗೀ ತು ಬಿತಿ ಜಾನೇ ಜೀದಾಗಾನಿ ಕಬ್ ಆಯೇಂಗೀ ತು ಚಾಲೀ ಆ, ಆ ತು ಚಾಲೀ ಹಾಡು ಹಾಡಿದ್ದರು. ಒಟ್ಟಾರೆ ಯಾವಾಗಲು ಕ್ರೈಂ, ಕೇಸು, ಕಾನೂನು ಸುವ್ಯವಸ್ಥೆ ಎಂದು ಜಂಜಾಟದಲ್ಲಿದ್ದ ಪೊಲೀಸರಿಗೆ ಆಗಾಗ ಡಿಎಸ್ಪಿ ಮನರಂಜನಾ ಕಾರ್ಯಕ್ರಮ ಏರ್ಪಡಿಸಿ ಸ್ವಲ್ಪ ರಿಲ್ಯಾಕ್ಸ್ ಮೂಡಿಗೆ ತರುತ್ತಾರೆ. ಅಲ್ಲದೇ ಇಂತಹ ಕಾರ್ಯಕ್ರಮದಿಂದ ಪೊಲೀಸರಿಗೆ ಮತ್ತಷ್ಟು ಉತ್ಸಾಹ ಬರಲಿದೆ. ಇನ್ನು ಇಂತಹ ಸ್ಟ್ರೆಸ್ ಬರ್ನ್ ಕಾರ್ಯಕ್ರಮಗಳನ್ನು ಆಗಾಗ ಮಾಡುತ್ತಾ ಇದ್ದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಪೊಲೀಸರಿಗೆ ಇನ್ನಷ್ಟು ಶಕ್ತಿ ಕೂಡ ಬರುತ್ತದೆ. ಒಟ್ಟಾರೆ ಬಿ.ಎಸ್.ಬಸವರಾಜ್ ಹಾಡುವ ಹಾಡು ಸಂಗೀತ ಪ್ರೇಮಿಗಳ ಹೃದಯದಲ್ಲಿ ಸದಾ ಹಚ್ಚ ಹಸಿರಾಗಿರುತ್ತದೆ.
ಎಲ್ಲೆಲ್ಲಿ ಡಿಎಸ್ಪಿ ಬಸವರಾಜ್ ಕೆಲಸ
ಮೂಲತಃ ಬಾದಾಮಿಯವರಾದ ಡಿಎಸ್ಪಿ ಬಸವರಾಜ್ ನಗರದ ಎಸ್ಪಿ ಕಚೇರಿಯಲ್ಲಿ ಡಿಸಿಆರ್‌ಬಿ ಕ್ರೈಂ ಬ್ರಾಂಚ್‌ನಲ್ಲಿ ಕೆಲಸ ಮಾಡಿದ್ದರು. ಸದ್ಯ ಬಿ.ಎಸ್.ಬಸವರಾಜ್ ದಾವಣಗೆರೆ ಗ್ರಾಮಾಂತರ ಡಿಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸೈದಾಪುರದಲ್ಲಿ ಪಿಎಸ್‌ಐಆಗಿ 4 ವರ್ಷ, ಹರಪನಹಳ್ಳಿಯಲ್ಲಿ ಸಿಪಿಐ ಆಗಿ 4 ವರ್ಷ, ತೀರ್ಥಹಳ್ಳಿ ಸಿಪಿಐ ಆಗಿ 2 ವರ್ಷ, ಬೆಂಗಳೂರು ಕರ್ನಾಟಕ ಲೋಕಾಯುಕ್ತದಲ್ಲಿ 6 ವರ್ಷ, ಚಿತ್ರದುರ್ಗ ಡಿಸಿಆರ್‌ಬಿಯಲ್ಲಿ 6 ತಿಂಗಳು, ದಾವಣಗೆರೆ ಡಿಸಿಆರ್‌ಬಿಯಲ್ಲಿ 3 ವರ್ಷ ಕೆಲಸ ಮಾಡಿದ್ದಾರೆ.
ಯಾವ ಪ್ರಕರಣಗಳನ್ನು ಭೇದಿಸಿದ್ದ ಡಿಎಸ್ಪಿ ಬಸವರಾಜ್
ಅಕ್ರಮ ಮರಳುಗಣಿಗಾರಿಕೆಯಲ್ಲಿ ತೊಡಗಿದ್ದ ಸಿದ್ದಿಖಿ ಬಂಧನ, ಕಕ್ಕರಗೊಳ್ಳ ಮರ್ಡರ್ ಕೇಸ್, ಮೆಕ್ಕೆಜೋಳ ವಂಚಕರ ಬಂಧನ, ಓಜಿಕುಪ್ಪಂ ಗ್ಯಾಂಗ್ ಬಂಧನ, ನಕಲಿ ಚಿನ್ನ ಮಾರಾಟಗಾರರ ಬಂಧನ, ಫೇಕ್ ಕರೆನ್ಸಿ ಹೀಗೆ ಹತ್ತಾರು ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ನಡೆಯುವ ಹಿಂದೂ ಮಹಾಸಭಾ ಗಣಪತಿ, ಕಮ್ಯೂನಿಯಲ್ ಗಲಾಟೆ ಸೇರಿದಂತೆ ಬಿಗಿ ಬಂದೋ ಬಸ್ತ್ಗಳಲ್ಲಿ ಇವರ ಪಾತ್ರ ಪ್ರಮುಖದ್ದಾಗಿದೆ. ಒಟ್ಟಾರೆ ಖಾಕಿ ಜತೆ ಮಾನವೀಯತೆ ಬೆಳೆಸಿಕೊಂಡಿರುವ ಡಿ.ಎಸ್ಪಿ.ಬಸವರಾಜ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಎಲ್ಲರ ಆಶಯ.