


ದಾವಣಗೆರೆ: ಕಷ್ಟ ಅಂದಾಗ ಕೈ ಚಾಚಿ ಕೊಡುವ ಕೊಡುಗೈ ದಾನಿ, ಬಸವೇಶ್ವರ ಲಾರಿ ಟ್ರಾನ್ಸ್ ಪೋರ್ಟ್ ಮಾಲೀಕರು, ಸಮಾಜಕ ಸೇವಕರಾದ ಮಹಾಂತೇಶ್ ವಿ. ಒಣರೊಟ್ಟಿ ಅವರ ತಾಯಿ ಸಂಗಮ್ಮ ಇಂದು ಬೆಳಗ್ಗೆ 8 ಕ್ಕೆ ವಿಧಿವಶರಾಗಿದ್ದಾರೆ.
ಮಹಾಂತೇಶ್ ರೊಟ್ಟಿ ಅಂದ್ರೆ ತುಂಬಾ ಸಾಮಾನ್ಯ ಮನುಷ್ಯ.. ಗೊತ್ತಿಲ್ಲದೇ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಹಲವರ ಕಣ್ಣೀನ ಆಪರೇಷನ್ ಗೆ ಹಣ ನೀಡಿದ್ದಾರೆ.

ಕೆ. ಬಿ. ಬಡಾವಣೆಯ ಹಳೇ ಪೊಸ್ಟ್ ಆಫೀಸ್ ಹಿಂಭಾಗದಲ್ಲಿನ ನಾಲ್ಕನೇ ಮೇನ್ ಏಳನೇ ಕ್ರಾಸ್ ನಲ್ಲಿ ವಾಸವಿದ್ದ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘಟನೆಗಳು, ಹಿತೈಷಿಗಳು, ಹಿಂದುಳಿದ ವರ್ಗದ ನಾಯಕ ಬಾಡಾದ ಆನಂದ್ ರಾಜ್, ಕುಟುಂಬದವರು, ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನಡೆಯುವುದೆಂದು ಕುಟುಂಬವರ್ಗ ತಿಳಿಸಿದೆ.
