ದಾವಣಗೆರೆ; ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗನಾಗಿ ಇರಬೇಕೆಂದು ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಹೇಳಿದರು.
ಸ್ಥಳೀಯ ಎಸ್ ಓಜಿ ಕಾಲೋನಿಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿ ದಾವಣಗೆರೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕನ್ನಡ ನಾಡಿನ ಸಾಹಿತ್ಯ ಆಚರಣೆ ಸಂಸ್ಕೃತಿ ವಿಶೇಷವಾಗಿದ್ದು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕನ್ನಡ ನಾಡು ನುಡಿಗಾಗಿ ಒಂದಾಗಿರಬೇಕು. ವಿಶ್ವದ ಯಾವ ಮೂಲೆಗೆ ಹೋದರು ಕನ್ನಡಿಗರು ಸಿಗುತ್ತಾರೆ ಹೊರ ರಾಜ್ಯ, ದೇಶದಲ್ಲಿ ಆಕಸ್ಮಿಕವಾಗಿ ಕನ್ನಡ ಮಾತನಾಡುವವರು ಸಿಕ್ಕರೆ ನಮ್ಮ ಮನೆಯವರೇ ಸಿಕ್ಕಂತ ಅನುಭವ ಆಗುತ್ತದೆ.
ವರ್ಷದ ಎಲ್ಲ ದಿನವು ಕನ್ನಡ ನಾಡು, ನುಡಿ ವಿಚಾರವಾಗಿ ಕನ್ನಡಿಗರು ಒಂದಾಗಿ ಆಚರಣೆ ಮಾಡುವ ಮೂಲಕ ತಾಯಿ ಭುವನೇಶ್ವರಿ ಉತ್ಸವ ಆಚರಣೆಯನ್ನು ವರ್ಷಪೂರ್ತಿ ನಾಡ ಹಬ್ಬ ರಾಜೋತ್ಸವ ಆಚರಣೆ ಮಾಡಬೇಕು ಎಂದು ಹೇಳಿದರು.
ಪ್ರಪಂಚದ ಕನ್ನಡಿಗರೆಲ್ಲ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದಾರೆ. ಇಂದು ಅದು ಮುಂದುವರೆದು ಡಿಸೆಂಬರ್ ತಿಂಗಳಲ್ಲಿಯೂ ಕನ್ನಡ ಹಬ್ಬ ರಾಜ್ಯೋತ್ಸವ ಆಚರಣೆ ಮುಂದುವರೆದಿರುವುದು ಸಂತಸದ ವಿಷಯವಾಗಿದೆ ಎಂದು ಸಂತಸಪಟ್ಟರು.ಈ ಸಂಧರ್ಭದಲ್ಲಿ ಮುಖಂಡರಾದ ಕಲ್ಲೇಶ್ , ಚನ್ನವೀರಪ್ಪ ,ಆಟೋ ಚಂದ್ರಣ್ಣ , ತಿಮ್ಮಣ್ಣ , ಶಿವಕುಮಾರ ಹಾಗು ಕಾಲೋನಿಯ ಸ್ಥಳೀಯರು ಉಪಸ್ಥಿತರಿದ್ದರು.
.