ದಾವಣಗೆರೆ: ಸುಮಾರು ಇಪ್ಪತ್ತು ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ಮೂವರು ವ್ಯಾಪಾರಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕರ್ನೂಲು ಜಿಲ್ಲೆಯ ನಾಗಲಾಪುರದ ಪಿಂಜಾರಿ ಮಸ್ತಾನ್ ಸಾಬ್ (55), ನಾಗಲಾಪುರದ ಗೋವಿಂದಪ್ಪ (46) ಮೃತರು.
ಹೇಗಾಯಿತು ಘಟನೆ
ಕರ್ನೂಲು ಜಿಲ್ಲೆಯ ಮಂತ್ರಾಲಯ ತಾಲೂಕಿನ ಏಳು ವ್ಯಾಪಾರಿಗಳು ಸುಮಾರು ಇಪ್ಪತ್ತು ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. ಅಂತೆಯೇ ಹಾವೇರಿ ಜಿಲ್ಲೆ ಬ್ಯಾಡಿಗೆಗೆ ಮೆಣಸಿನಕಾಯಿ ಖರೀದಿಗೆ ಹೋಗಿದ್ದರು. ನಂತರ ತೆರಳಿ ವಾಪಸ್ ಬರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ
ಟೈರ್ ಸ್ಪೋಟ
ಟೈರ್ ಸ್ಫೋಟಗೊಂಡ ಪರಿಣಾಮ ಬೋಲೆರೋ ವಾಹನ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ. ವಾಹನದಲ್ಲಿದ್ದ 6 ಮಂದಿಗೆ ಗಾಯಗಳಾಗಿವೆ. ತಡರಾತ್ರಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಬೋಲೆರೋ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಐವರು ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ವ್ಯಕ್ತಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಆತನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ.
ಟೋಲ್ ನಲ್ಲಿ ಏಳು ಜನ ಒಟ್ಟಿಗೆ ಟೀ ಕುಡಿದಿದ್ದರು.
ರಾತ್ರಿ ಬ್ಯಾಡಗಿಯಿಂದ ಮಂತ್ರಾಲಯಕ್ಕೆ ಹೊರಟ ಸಂದರ್ಭದಲ್ಲಿ ಟೋಲ್ ಬಳಿ ಎಲ್ಲರೂ ಒಟ್ಟಿಗೆ ಸೇರಿ ಟೀ ಕುಡಿದಿದ್ದಾರೆ. ನಂತರ ಹೊರಟ ಕೆಲವೇ ಕ್ಷಣಗಳಲ್ಲಿ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು