ದಾವಣಗೆರೆ ; ಇಲ್ಲೊಂದು ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಿಂತ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ಸ್ವಚ್ಛತೆ, ಮೂಲಸೌಕರ್ಯದಲ್ಲಿ ಜನರ ಮನಗೆದ್ದಿದೆ,. ಹೌದು ತಾಲೂಕಿನ ಈಚಘಟ್ಟ ಆಸ್ಪತ್ರೆ ಇತರೆ ಆಸ್ಪತ್ರೆಗಳಿಗಿಂತ ವಿಭಿನ್ನವಾಗಿದೆ.
ಪಿಎಚ್‌ಸಿ, ಯುಎಚ್‌ಸಿ ಕಾರ್ಯಕ್ರಮದ ಅಡಿಯಲ್ಲಿ ಈ ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಗ್ರಾಮಗಳಲ್ಲಿ ಇರುವಂತಹ ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಎಲ್ಲಾ ಉಪ ಕೇಂದ್ರಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರವನ್ನಾಗಿ ಪರಿವರ್ತಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಂತಹ ಎಲ್ಲಾ ಸೌಕರ್ಯಗಳು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಸಿಗುತ್ತಿದೆ. ಇಲ್ಲಿ ಪ್ರಮುಖವಾಗಿ 12 ಪ್ರಾಥಮಿಕ ಆರೋಗ್ಯ ಸೇವೆಗಳು ಸಿಗುತ್ತಿದೆ. ಈ ಎಲ್ಲ ಕಾರಣಗಳಿಂದ ಈಚಘಟ್ಟ ಆಸ್ಪತ್ರೆ ರೋಗಿಗಳ ತನು-ಮನಸೆಳೆಯುತ್ತಿದೆ.
ಸದ್ಯ ಈಚ್ಗಟ್ಟ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ನೀಡುವಂತಹ ಸಮುದಾಯ ಆಧಾರಿತ ಸೇವೆ, ಸ್ವಚ್ಛತೆ ರಾಜ್ಯದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೌಲ್ಯಮಾಪನ ನಡೆಸಿ ತದನಂತರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದ ನ್ಯಾಷನಲ್ ಕ್ವಾಲಿಟಿ ಅಶೂರೇನ್ಸ್ ಈ ಆಸ್ಪತ್ರೆ ಆಯ್ಕೆ ಮಾಡಿತ್ತು. ನಂತರ ಕೇಂದ್ರ ಸರಕಾರ ಮೌಲ್ಯಮಾಪನ ಮಾಡಿದ್ದು, ಒರಿಸ್ಸಾದ ಡಾಕ್ಟರ್ ಕೃಷ್ಣ ಶರಣ್ ಪಾಲ್ ಹಾಗೂ ಕೇರಳದ ನಿಖಿಲೇಶ್ ಮೆನನ್ ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ದೇ ಕೇಂದ್ರ ಸರಕಾರದ 12 ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ ಪರಿಶೀಲನೆಯನ್ನು ನಡೆಸಿದರು.
ಮೌಲ್ಯಮಾಪನ ಪ್ರಕಾರ ಎಲ್ಲ ದಾಖಲಾತಿ ಅಂಶಗಳನ್ನು ಸರಿಯಾಗಿದ್ದವು. ಮತ್ತು ಸಮುದಾಯಕ್ಕೆ ನೀಡುತ್ತಿರುವ ಸೇವೆಗಳನ್ನು ಗಮನಿಸಿ ಪ್ರಶಂಸೆ ವ್ಯಕ್ತ ಪಡಿಸಿದರು. ಅಲ್ಲದೇ ಇದೇ ತರಹದ ಉತ್ತಮ ಸೇವೆಗಳನ್ನು ಮುಂದುವರೆಸಿ ಎಂದು ತಿಳಿಸಿದರು. ಈ ಮೌಲ್ಯಮಾಪನದಲ್ಲಿ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಜ್ಯೋತಿ ಡಾ. ಬೀರೇಶ್ ಸಮುದಾಯ ಆರೋಗ್ಯ ಅಧಿಕಾರಿ ಅನಿಲ್ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿಗಳು ಹಾಜರಿದ್ದರು.
—