ನಂದೀಶ್ ಭದ್ರಾವತಿ, ದಾವಣಗೆರೆ
ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಕಲಾವಿದರು ಇದ್ದು, ಅವರ ಪ್ರತಿಭೆ ತೋರಿಸಲು ಸರಿಯಾದ ವೇದಿಕೆ ಇಲ್ಲ. ಆದರೂ ವೇದಿಕೆ ಸಿಕ್ಕಾಗಲೆಲ್ಲ ಖಾಕಿ ಪಡೆ ತನ್ನಲ್ಲಿರುವ ಕಲೆ ತೋರಿಸುತ್ತದೆ.
ಹೌದು..ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಖಡಕ್ ಆಫೀಸರ್ ಅಂತಲೇ ಹೆಸರಾದ ದಾವಣಗೆರೆ ಗ್ರಾಮಾಂತರ ಡಿಎಸ್ಪಿ ಬಿ.ಎಸ್.ಬಸವರಾಜ್ ವೇದಿಕೆ ಸಿಕ್ಕಾಗ ತನ್ನಲ್ಲಿನ ಕಲೆ ತೋರಿಸುತ್ತಾರೆ.
ಹಾಡು ಹೇಳುವುದರಲ್ಲಿ ನಿಪುಣರಾದ ಇವರು ಕನ್ನಡ, ಹಿಂದಿ ಹಾಡುಗಳನ್ನು ನಿರಾಸಯವಾಗಿ ಹಾಡುತ್ತಾರೆ. ಅಲ್ಲದೇ ಅವರ ಬಾಡಿ ಲಾಂಗ್ವೇಜ್ ಸಿನಿಮಾ ನಟರಂತೆ ಇರುತ್ತದೆ.
ಗೀತಾಂಜಲೀ…ನನ್ನವರು ಯಾರೂ ಇಲ್ಲ, ಯಾರಿಗೆ ಯಾರೂ ಇಲ್ಲ…’, ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿ ಗಮ್ ಅಂತಿಯೇ…, ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ…,ಈ ಭೂಮಿ ಬಣ್ಣದ ಬುಗುರಿ…,ಹೀಗೆ ಹತ್ತಾರು ಹಾಡುಗಳನ್ನು ಡಿಎಸ್ಪಿ ಬಸವರಾಜ್ ಹಾಡುವಲ್ಲಿ ನಿಸ್ಸೀಮರು.
ಪ್ರೇಮಲೋಕ ಹಾಡು ಹಾಡಿದ್ದ ಡಿಎಸ್ಪಿ
ದಾವಣಗೆರೆ ಪೊಲೀಸ್ ಕವಾಯತು ಮೈದಾನದಲ್ಲಿ ಕಳೆದ ವರ್ಷ ಏರ್ಪಡಿಸಿದ್ದ ಪೊಲೀಸ್ ಕ್ರೀಡಾಕೂಟ ವೇಳೆ ರಾತ್ರಿ ಮನೋರಂಜನೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಿಎಸ್ಪಿ ಬಸವರಾಜ್ ಪ್ರೇಮಲೋಕ ಹಾಡು ಹಾಡಿ ನೋಡುಗರನ್ನು, ಕೇಳುಗರನ್ನು ರಂಜಿಸಿದ್ದು, ಇನ್ನು ಮರೆತಿಲ್ಲ.
ಪ್ರೇಮಲೋಕದ ಹಾಡಿಗೆ ಸಿಬ್ಬಂದಿ ಸಾಥ್
ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರದ ಪ್ರೇಮಲೋಕದ ಹಾಡಿಗೆ ಡಿಎಸ್ಪಿ ಬಸವರಾಜ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಅದ್ಭುತವಾಗಿ ನಟಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಕೆಲಕಾಲ ಪೊಲೀಸರು ಹಳೆ ಪ್ರೀತಿಯನ್ನು ನಟನೆ ಮೂಲಕ ನೆನಪು ಮಾಡಿಕೊಂಡರು. ಅವರ ಈ ನಟನೆ ಅವರವರ ಹಳೆಯ ಪ್ರೇಮಲೋಕಕ್ಕೆ ಕರೆದು ಕೊಂಡು ಹೋಗಿತ್ತು. ಹಲವರು ತಮ್ಮ ಅಧಿಕಾರಿಗಳಲ್ಲಿ ಇಂತಹ ಕಲಾದೇವತೆ ಇದ್ದಾಳೆ ಎಂದು ಇತರೆ ಸಿಬ್ಬಂದಿ ಹಾಗೂ ಜನಸಾಮಾನ್ಯರು ಮಾತನಾಡಿದ್ದರು.
ರವಿಚಂದ್ರನ್ ಹಾಡುಗಳನ್ನೇ ಹಾಡುವ ಡಿಎಸ್ಪಿ
ರವಿಚಂದ್ರನ್ ಅಭಿನಯದ ಪ್ರೇಮಲೋಕ ಸಿನಿಮಾದ ಹಾಡುಗಳು ಈಗಲೂ ಜನಪ್ರಿಯವಾಗಿರುವುದರಿಂದ ಡಿವೈಎಸ್ಪಿ ಬಸವರಾಜ್ ಹೆಚ್ಚಾಗಿ ಪ್ರೇಮ ಲೋಕದ ಹಾಡನ್ನು ಹಾಡುತ್ತಾರೆ. ಅದರಲ್ಲಿನ ನೋಡಮ್ಮ ಹುಡುಗಿ… ಕೇಳಮ್ಮ ಸರಿಯಾಗಿ… ಎಂಬ ಹಾಡು ಅವರ ಅಚ್ಚುಮೆಚ್ಚುಮ
ಪ್ರೇಮಲೋಕ ಸೃಷ್ಟಿಸಿದ್ದ ಡಿಎಸ್ಪಿ ಬಸವರಾಜ್
ವಿಷ್ಣುವರ್ಧನ್ ಪಾತ್ರದಲ್ಲಿ ಕ್ರೈಂ ಡಿವೈಎಸ್ಪಿ ಬಸವರಾಜ್ ನಟನೆ ಮಾಡಿದರೆ, ನಾಯಕಿ ಜೂಹಿಚಾವ್ಲಾ ಪಾತ್ರದಲ್ಲಿ ವೈರ್ ಲೆಸ್ ಸಿಪಿಐ ತೇಜಾವತಿ, ರವಿಚಂದ್ರನ್ ಪಾತ್ರದಲ್ಲಿ ಹದಡಿ ಪಿಎಸ್ಐ ಸಂಜೀವ್ ಮತ್ತಿತರ ಸಿಬ್ಬಂದಿಗಳು ಈ ಹಾಡಿನಲ್ಲಿ ತೆರೆಯ ಮೇಲೆ ವಿದ್ಯಾರ್ಥಿಗಳಾಗಿ ಪಾತ್ರ ವಹಿಸಿದ್ದರು. ಈ ಹಾಡು ಅದ್ಭುತವಾಗಿ ಮೂಡಿಬಂತು. ನುರಿತ ಕಲಾವಿದರಂತೆ ನಟಿಸಿದ ಇವರ ಅಭಿನಯಕ್ಕೆ ವೇದಿಕೆಯ ಮೇಲಿನ ಲೈಟಿಂಗ್ ವ್ಯವಸ್ಥೆಯು ನೋಡುಗರನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿತ್ತು.
ಮಲೆ ಬೆನ್ನೂರಿನಲ್ಲಿ ಮೇರಿ ಸಪನೋ ರಾನೀ ಕಬ್ ಆಯೇಂಗೀ ತು
ಮಲೆಬೆನ್ನೂರಿನಲ್ಲಿ ಇತ್ತೀಚೆಗೆ ನಡೆದ ಕ್ವಾರ್ಟಸ್ ಸಮಾರಂಭದಲ್ಲಿ ಡಿಎಸ್ಪಿ ಬಸವರಾಜ್ ಮೇರಿ ಸಪನೋ ಕೆ ರಾನೀ ಕಬ್ ಆಯೇಂಗೀ ತು ಆಇ ಋತ ಮಸ್ತಾನೀ ಕಬ್ ಆಯೇಂಗೀ ತು ಬಿತಿ ಜಾನೇ ಜೀದಾಗಾನಿ ಕಬ್ ಆಯೇಂಗೀ ತು ಚಾಲೀ ಆ, ಆ ತು ಚಾಲೀ ಆ
ಮೇರಿ ಸಪನೋ ಕೆ ರಾನೀ ಕಬ್ ಆಯೇಂಗೀ ತು ಆಇ ಋತ ಮಸ್ತಾನೀ ಕಬ್ ಆಯೇಂಗೀ ತು ಬಿತಿ ಜಾನೇ ಜೀದಾಗಾನಿ ಕಬ್ ಆಯೇಂಗೀ ತು ಚಾಲೀ ಆ, ಆ ತು ಚಾಲೀ ಆ
ಪ್ಯಾರ ಕೆ ಗಲಿಯಾನ, ಬಾಗೋ ಕೆ ಕಲಿಯಾನ
ಸಬ್ ರಾಗರಲೀಆನ, ಪುಭ್ ರಹೀ ಹೈ ಪ್ಯಾರ ಕೆ ಗಲಿಯಾನ, ಬಾಗೋ ಕೆ ಕಲಿಯಾನ ಸಬ್ ರಾಗರಲೀಆನ, ಪುಭ್ ರಹೀ ಹೈ ಗೀತ ಪನಾಘಾತ ಪೇ ಕಿಸ್ ದೀನ ಗಾಯೇಂಗೀ ತು ಮೇರಿ ಸಪನೋ ಕೆ ರಾನೀ ಕಬ್ ಆಯೇಂಗೀ ತು ಆಇ ಋತ ಮಸ್ತಾನೀ ಕಬ್ ಆಯೇಂಗೀ ತು ಬಿತಿ ಜಾನೇ ಜೀದಾಗಾನಿ ಕಬ್ ಆಯೇಂಗೀ ತು ಹಾಡು ಹೇಳಿ ಕೇಳುಗರನ್ನು ಎದ್ದು ಹೋಗದಂತೆ ಮಾಡಿದ್ದರು. ಅವಕಾಶ ಸಿಕ್ಕಾಗಲೆಲ್ಲ ಇವರು ಬೇರೆ ಬೇರೆ ಚಿತ್ರದ ಹಳೆ ಹಾಡುಗಳನ್ನು ಹಾಡುತ್ತಾರೆ.
ಒಟ್ಟಾರೆ ಯಾವಾಗಲು ಕ್ರೈಂ, ಕೇಸು, ಕಾನೂನು ಸುವ್ಯವಸ್ಥೆ ಎಂದು ಜಂಜಾಟದಲ್ಲಿದ್ದ ಪೊಲೀಸರಿಗೆ ಆಗಾಗ ಡಿಎಸ್ಪಿ ಮನರಂಜನಾ ಕಾರ್ಯಕ್ರಮ ಏರ್ಪಡಿಸಿ ಸ್ವಲ್ಪ ರಿಲ್ಯಾಕ್ಸ್ ಮೂಡಿಗೆ ತರುತ್ತಾರೆ. ಅಲ್ಲದೇ ಇಂತಹ ಕಾರ್ಯಕ್ರಮದಿಂದ ಪೊಲೀಸರಿಗೆ ಮತ್ತಷ್ಟು ಉತ್ಸಾಹ ಬರಲಿದೆ. ಇನ್ನು ಇಂತಹ ಸ್ಟ್ರೆಸ್ ಬರ್ನ್ ಕಾರ್ಯಕ್ರಮಗಳನ್ನು ಆಗಾಗ ಮಾಡುತ್ತಾ ಇದ್ದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಪೊಲೀಸರಿಗೆ ಇನ್ನಷ್ಟು ಶಕ್ತಿ ಕೂಡ ಬರುತ್ತದೆ. ಒಟ್ಟಾರೆ ಬಿ.ಎಸ್.ಬಸವರಾಜ್ ಹಾಡುವ ಹಾಡು ಸಂಗೀತ ಪ್ರೇಮಿಗಳ ಹೃದಯದಲ್ಲಿ ಸದಾ ಹಚ್ಚ ಹಸಿರಾಗಿರುತ್ತದೆ.