ದಾವಣಗೆರೆ : ಬಿಗ್‌ಬಾಸ್‌ನಲ್ಲಿ ಕ್ಯೂಟ್ ಆಗಿ ಹೆಸರು ಮಾಡಿದ್ದ ನಿವೇದಿತಾ, ಹಾಡಿನ ಮೂಲಕ ಜನರ ಮನಸೆಳೆದಿದ್ದ ರ‍್ಯಾಪರ್ ಚಂದನ ಶೆಟ್ಟಿ ಈಗ ವಿವಾಹ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಇಬ್ಬರು ಪರಸ್ಪರ ಒಪ್ಪಿ ಫ್ಯಾಮಿಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಇಬ್ಬರು ಜೋಡಿ ಬಿಗ್ ಬಾಸ್ ಖ್ಯಾತಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೇ ಬಿಗ್‌ಬಾಸ್‌ನಲ್ಲಿ ಪ್ರೀತಿ ಮಾಡಿ ವಿವಾಹವಾಗಿದ್ದ ಜೋಡಿ ಇದಾಗಿದೆ.

ರ‍್ಯಾಪರ್ ಚಂದನಶೆಟ್ಟಿ ವಿವಾಹವಾಗಿದ್ದ ನಿವೇದಿತಾ ಹಲವು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ಜೂ.6ಕ್ಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಜೋಡಿ ಈಗ ಬೇರೆ-ಬೇರೆ ಆಗಲು ಮುಂದಾಗಿದ್ದಾರೆ. ಅಲ್ಲದೇ ರಿಯಾಲಿಟಿ ಶೋನಲ್ಲಿ ಹೆಸರು ಮಾಡಿದ್ದ ನಟ-ನಟಿ ಜನರಮನ್ನಣೆಗಳಿಸಿದ್ದರು. ಗಿಚ್ಚಿ-ಗಿಲಿಗಿಲಿ, ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಕಡಿಮೆ ಸಮಯದಲ್ಲಿ ಸಪ್ತಪದಿ ತುಳಿದಿದ್ದ ಈ ಜೋಡಿ ನಾನೊಂದು ತೀರಾ-ನೀನೋಂದು ತೀರಾ ಆಗಿದ್ದಾರೆ.

Share.
Leave A Reply

Exit mobile version