ಚಿತ್ರದುರ್ಗ: ನಾಡು, ನುಡಿ, ಕನ್ನಡಿಗರ ಸ್ವಾಭಿಮಾನಕ್ಕೆ ಯಾರೇ ಧಕ್ಕೆ ತಂದರೂ ಅದರ ವಿರುದ್ದ ಕರ್ನಾಟಕ ಯುವ ರಕ್ಷಣಾ ವೇದಿಕೆ ಉಗ್ರ ಹೋರಾಟ ನಡೆಸುತ್ತದೆ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಚಿತ್ರದುರ್ಗ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಮಿಳುನಾಡಿಗೆ ನೀರು, ಗೋವಾ ಕನ್ನಡಿಗರಿಗೆ ರಕ್ಷಣೆ ಇಲ್ಲದೇ ಇರುವುದು, ಬೆಳಗಾಂ ಗಡಿಯಲ್ಲಿ ಮರಾಠಿಗಳ ದಬ್ಬಾಳಿಕೆ ನಡೆದಾಗ ಎಲ್ಲ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದೆ. ಅಂತೆಯೇ ನಮ್ಮ ಸಂಘಟನೆಯೂ ಸಹ ಹೋರಾಟದ ಹಾದಿ ತುಳುದಿತ್ತು. ಆದ್ದರಿಂದ ನಮ್ಮ ಪದಾಧಿಕಾರಿಗಳು, ಪರಚರಾಜ್ಯದವರಿಗೆ ಕನ್ನಡ ಕಲಿಸುವುದು, ಕನ್ನಡ ರಕ್ಷಣೆಗೆ ಸೈನಿಕರಾಗಿ ದುಡಿಯೋಣ ಎಂದರು.
ಹೊಸದುರ್ಗದ ಕರ್ನಾಟಕ ಯುವ ರಕ್ಷಣಾ ವೇದಿಕೆ ಮುಖಂಡ ಎಂಎಂ ನಾಯಕ್ ಮಾತನಾಡಿ, ಕನ್ನಡಿಗರು ಅಂದ್ರೆ ಹೋರಾಟಕ್ಕೆ ಹೆಸರಾದವರು. ಆಗ ನಮ್ಮ ನಾಡಿಗೆ ಧಕ್ಕೆ ಬಂದಾಗ ಬ್ರಿಟಿಷರು ಸೇರಿದಂತೆ, ಪೋರ್ಚ್ ಗೀಸರು, ಡಚ್ಚರು, ಹೀಗೆ ಹಲವಾರು ಜನರು ಕರ್ನಾಟಕದಲ್ಲಿನ ಸಂಪತ್ತು ದೋಚಲು ಬಂದಾಗ ಹಲವಾರು ಕನ್ನಡಿಗರು, ಧೈರ್ಯದಿಂದ ಹೋರಾಡಿ ನಾಡಿನ ಉಳಿವಿಗೆ. ಶ್ರಮಿಸಿದ್ದಾರೆ ಅಂತೆಯೇ ಈಗ ನಾವೆಲ್ಲರೂ ಕೂಡ ಕರ್ನಾಟಕ, ಕನ್ನಡ ರಕ್ಷಣೆಗೆ ಸೇನಾನಿಯಂತೆ ಉಳಿಯಬೇಕು ಎಂದರು. ಈ ಸಂದರ್ಭದಲ್ಲಿ ರಾಜ್ಯ ಘಟಕ ಮತ್ತು ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ಘಟಕದ ಪದಾಧಿಕಾರಿಗಳಿಗಳು ಭಾಗವಹಿಸಿದ್ದರು