ದಾವಣಗೆರೆ: ಲೋಕಸಭಾ ಚುನಾವಣೆಗಾಗಿ ರಾಜ್ಯದ 14 ಕ್ಷೇತ್ರಗಳಲ್ಲಿ ಇವತ್ತು ಎರಡನೇ ಹಂತದ ಮತದಾನ ನಡೆಯುತ್ತಿದ್ದು ಜನ ಉತ್ಸಾಹದಿಂದ ಮನೆಗಳಿಂದ ಹೊರಬಿದ್ದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ದಾವಣಗೆರೆಯ ಮತಗಟ್ಟೆಗಳ ಮುಂದೆ ಬೆಳಗ್ಗೆಯಿಂದಲೇ ಉದ್ದನೆಯ ಕ್ಯೂಗಳು ಕಂಡುಬಂದವು. ಮಧ್ಯಾಹ್ನ ಎರಡು ಗಂಟೆ ನಂತರ ಮತದಾನ ಚುರುಕುಗೊಂಡಿತ್ತು. ಐದು ಗಂಟೆ ನಂತರ ಮತದಾನದ ಮೀಟರ್ ಏರಿಕೆಯಾಗತೊಡಗಿತ್ತು. ಎಂದಿನಂತೆ ಮಹಿಳಾ ಮತದಾರರು ಮತ ಹಾಕಲು ಮುಂದಿದ್ದಾರೆ. ಸಂಜೆ ಐದು ಗಂಟೆಗೆ ಶೇ 70 ರಷ್ಟು ಮತದಾನವಾಗಿದೆ.
ಜಗಳೂರು ಶೇ.73, ಹರಿಹರ ಶೇ.74, ದಾವಣಗೆರೆ ಉತ್ತರ ಶೇ.64, ದಾವಣಗೆರೆ ದಕ್ಷಿಣ ಶೇ.61, ಮಾಯಕೊಂಡ ಶೇ. 77, ಚನ್ನಗಿರಿ ಶೇ.73, ಹೊನ್ನಾಳಿ ಶೇ 74, ಹರಪನಹಳ್ಳಿ ಶೇ 71 ಒಟ್ಟು ಶೇ.70ರಷ್ಟು ಮತದಾನವಾಗಿದೆ. ಅತಿ ಬುದ್ದಿವಂತವಿರುವ ದಾವಣಗೆರೆ ಉತ್ತರದಲ್ಲಿ ಮಂದಗತಿಯಲ್ಲಿ ಮತದಾನವಾದರೆ, ದಾವಣಗೆರೆ ದಕ್ಷಿಣದಲ್ಲಿ ಮತ ಪ್ರಮಾಣ ಏರಿಕೆಗೊಂಡಿದೆ ಅತಿ ಹಿಂದುಳಿದ ಪ್ರದೇಶ ಮಾಯಕೊಂಡದಲ್ಲಿ ಹೆಚ್ಚಿನ ಮತದಾನವಾಗಿದೆ. ಮತದಾನಪ್ರಮಾಣ ಸಂಜೆ ಆರಕ್ಕೆ ಅಂದಾಜು ಶೇ.78 ರಷ್ಟು ತಲುಪುವ ಸಾಧ್ಯತೆ ಇದೆ.