
ನಂದೀಶ್ ಭದ್ರಾವತಿ, ದಾವಣಗೆರೆ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಸದಸ್ಯತ್ವ ಅಮಾನತ್ತಿನಲ್ಲಿಡುವ ಬಗ್ಗೆ ಬೈಲಾ ರೀತಿಯಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಸಹಕಾರ ಸಂಘಗಳ ಉಪನಿಬಂಧಕರ ಜಿಲ್ಲಾ ನೋಂದಣಾಧಿಕಾರಿಗಳು, ನೌಕರರ ಸಂಘದ ಕಾರ್ಯದರ್ಶಿ ಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದು ದಾವಣಗೆರೆ ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಆಘಾತ ನೀಡಿದೆ. ಅದರಲ್ಲೂ ಈ ಹಿಂದೆ ಅಧಿಕ ವರ್ಷಗಳ ಕಾಲ ಆಡಳಿತ ನಡೆಸಿದ್ದ ರಾಜ್ಯಾಧ್ಯಕ್ಷ ಷಡಕ್ಷರಿ ಆಪ್ತ ಜಿಲ್ಲಾ ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಪಾಲಾಕ್ಷಿಗೆ ಇದರಿಂದ ಸಾಕಷ್ಟು ಹಿನ್ನೆಡೆಯಾಗಿದೆ.
ಬಿಜೆಪಿ ಸರಕಾರವಿದ್ದ ವೇಳೆ ರಾಜ್ಯಾಧ್ಯಕ್ಷ ಷಡಕ್ಷರಿ ಜಿಲ್ಲೆಯಲ್ಲಿ ಅವರ ಆಪ್ತ ಪಾಲಾಕ್ಷಿಯನ್ನು ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿರಲಿಲ್ಲ..ಯಾರಾದರೂ ಮಾತನಾಡಿದರೆ ವರ್ಗಾವಣೆ ಮಾಡಿ ಇಲ್ಲಿನ ಸದಸ್ಯತ್ವವನ್ನು ರದ್ದುಗೊಳಿಸುತ್ತಿದ್ದರು…ಈ ನಿಯಮ ಈಗ ರಾಜ್ಯಾಧ್ಯಕ್ಷ ಷಡಕ್ಷರಿ ಕೊರಳಿಗೆ ಮುಳ್ಳಾಗಿದೆ. ಈ ಮೂಲಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿಗೆ ಮತ್ತೊಂದು ಶಾಕ್ ನೀಡಲಾಗಿದೆ.


ಷಡಕ್ಷರಿ ಆಣತಿಯಂತೆ ಎಲ್ಲವು ನಡೆಯುತ್ತಿದ್ದವು
ರಾಜ್ಯಾಧ್ಯಕ್ಷ ಷಡಕ್ಷರಿ ಆಣತಿಯಂತೆ ಆಗಿನ ಜಿಲ್ಲಾಧ್ಯಕ್ಷ ಪಾಲಾಕ್ಷಿ ಆಡಳಿತ ನಡೆಸುತ್ತಿದ್ದರು. ವರ್ಗಾವಣೆ ಮಾಡಿಸುತ್ತಾರೆ ಎಂಬ ಭೀತಿ ಕಾರಣ ಇತರೆ ನಿರ್ದೇಶಕರು, ಸದಸ್ಯರು ಮಾತನಾ ಡುತ್ತಿರಲಿಲ್ಲ..ಅಲ್ಲದೇ ಸ್ಥಳೀಯ ನೌಕರ ಸಮಸ್ಯೆಗಳು ಕೂಡ ಬಗೆಹರಿಯುತ್ತಿರಲಿಲ್ಲ. ಅವರಿಗೆ ಬೇಕಾದವರ ಕೆಲಸಗಳು ಸರಾಗವಾಗಿ ಆಗುತ್ತಿದ್ದವು..ಈಗ ಅದು ಬಂದ್ ಆಗಲಿದೆ.
ಸ್ಥಾನಗಳ ಬದಲಾವಣೆ ಭೀತಿ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಸದಸ್ಯತ್ವ ಅಮಾನತುಗೊಂಡರೆ ಮುಂದೆ ಬರುವ ರಾಜ್ಯಾಧ್ಯಕ್ಷರ ನಡೆ ಹೇಗಿರುತ್ತದೆ ಎಂಬ ಭೀತಿ ನಾನಾ ಸ್ಥಾನಗಳಿಗೆ ನೇಮಕವಾಗಿರುವಲ್ಲಿ ಎದುರಾಗಿದೆ….ಅಲ್ಲದೇ ಷಡಕ್ಷರಿ ಆಪ್ತವಲಯದಲ್ಲಿ ಈಗ ಚರ್ಚೆ ನಡೆಯುತ್ತಿದೆ.
ಹೊಸ ಜಿಲ್ಲಾದ್ಯಕ್ಷರಿಗೆ ಭೀತಿ
ಮಾಜಿ ಜಿಲ್ಲಾಧ್ಯಕ್ಷ ಪಾಲಾಕ್ಷಿ ಅಧಿಕಾರ ತೇಜಿಸಿದ ಮೇಲೆ ಚುನಾವಣೆ ನಡೆಸದೇ ರಾಜ್ಯಾಧ್ಯಕ್ಷ ಷಡಕ್ಷರಿ ಸೂಚನೆ ಮೇರೆಗೆ ಪಿಡಬ್ಲೂಡಿ ಇಲಾಖೆ ವೀರೇಶ್ ಎಚ್ ಒಡೆಯನಾಪುರ್ ರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಒಂದು ವೇಳೇ ಷಡಕ್ಷರಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಹೊಸ ಅಧ್ಯಕ್ಷರು ಅವರಿಗೆ ಬೇಕಾದವರನ್ನು ಪುನಃ ನೇಮಕ ಮಾಡಬಹುದಾಗಿದೆ. ಇದು ದಾವಣಗೆರೆಯ ಹೊಸ ಜಿಲ್ಲಾಧ್ಯಕ್ಷರಿಗೆ ಭೀತಿಯನ್ನುಂಟು ಮಾಡಿದೆ.
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ ;
ದಾವಣಗೆರೆ ಸರಕಾರಿ ನೌಕರ ಸಂಘದ ಅಧ್ಯಕ್ಷ ಪಾಲಾಕ್ಷಿ ರಾಜೀನಾಮೆ ನಂತರ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಚುನಾವಣೆನೇ ನಡೆದಿಲ್ಲ, ಬದಲಾಗಿ ರಾಜ್ಯಾಧ್ಯಕ್ಷ ಷಡಕ್ಷರಿ ಒಪ್ಪಿಗೆ ಮೇರೆಗೆ ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ
ನಿಲ್ಲಬೇಕಾದವರು ಈಗ ಹಲ್ಲು ಕಚ್ಚಿ ನಿಲ್ಲಬೇಕಾದ ಸ್ಥಿತಿ
ಎದುರಾಗಿದ್ದು ತಂತ್ರ ಶುರುವಾಗಿದೆ.
ಹಲವಾರು ದಿನಗಳ ಕಾಲ ಪಾಲಾಕ್ಷಿ ಅಧ್ಯಕ್ಷರು
ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯಾಧ್ಯಕ್ಷ ಷಡಕ್ಷರಿ ಕೃಪಾಕಟಕ್ಷದಿಂದ ಮಾಜಿ ಜಿಲ್ಲಾಧ್ಯಕ್ಷ ಪಾಲಾಕ್ಷಿ ಹಲವಾರು ದಿನಗಳ ಕಾಲ ಅಧ್ಯಕ್ಷರಾಗಿ ಮುಂದುವರಿದಿದ್ದರು. ಕಾಂಗ್ರೆಸ್ ಸರಕಾರ ಬಂದ ನಂತರ ಪಿಡಬ್ಲೂಡಿ ಇಲಾಖೆ ವೀರೇಶ್ ಎಚ್ ಒಡೆಯನಾಪುರ್ ರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ಈಗ ಆಕಾಂಕ್ಷಿಗಳಾಗಿದ್ದವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಒಮ್ಮೆ ಮಾತ್ರ ಚುನಾವಣೆ, ಬಳಿಕ ಷಡಕ್ಷರಿ ಆಪ್ತರೇ ಅಧಿಕಾರ
ಜುಲೈ 11ರಂದು ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಅಧ್ಯಕ್ಷ, ಖಚಾಂಚಿ, ಕೌನ್ಸಿಲ್ ಮೆಂಬರ್ಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ನೌಕರರಾದ ಬಿ.ಪಾಲಾಕ್ಷಿ, ಸಿ.ಪರುಶುರಾಮಪ್ಪ ಎಚ್.ಬಸವರಾಜ್, ಸಿ.ತಿಪ್ಪೇಸ್ವಾಮಿ, ಬಿ.ಮಂಜುನಾಥ್, ಕಲ್ಪನ, ಎಸ್.ಕಲ್ಲೆಶ್ವರಪ್ಪಶ್ರೀನಿವಾಸ ನಾಯಕ್ ಅಧ್ಯಕ್ಷ ಸ್ಥಾನದ ಆಗ ಆಂಕಾಕ್ಷಿಗಳಾಗಿದ್ದರು. ಇದಾದ ಬಳಿಕ ಬಿ.ಪಾಲಾಕ್ಷಿ ಅಧ್ಯಕ್ಷರಾದರು. ಈ ಸಮಯದಲ್ಲಿ ಮೂರು ಅವಧಿಗಳ ಒಪ್ಪಂದ ನಡೆದಿತ್ತು.
ಅದರಲ್ಲಿ ಜಿಲ್ಲಾಪಂಚಾಯಿತಿಯ ಬಸವರಾಜ್, ಶಿಕ್ಷಣ ಇಲಾಖೆಯ ಜಿಲ್ಲಾಪಂಚಾಯಿತಿಯ ಬಸವರಾಜ್, ಶಿಕ್ಷಣ ಇಲಾಖೆಯ ಶ್ರೀನಿವಾಸ ನಾಯಕ್, ತಾಂತ್ರಿಕ ಶಿಕ್ಷಣ ಇಲಾಖೆಯ ತಿಪ್ಪೇಸ್ವಾಮಿ, ಮೀನುಗಾರಿಕೆ ಇಲಾಖೆಯ ಉಮೇಶ್ ಇನ್ನೇರಡು ಅವಧಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಬಿ.ಪಾಲಾಕ್ಷಿ ಮಾತ್ರ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲ. ಇದು ಇತರರ ಕೆಂಗಣ್ಣಿಗೆ ಗುರಿಯಾಗಿತ್ತು.
ಚುನಾವಣೆ ನಡೆಸದೆ ಅಧ್ಯಕ್ಷರ ಒಪ್ಪಿಗೆ ಮೇರೆಗೆ ನೇಮಕ
ರಾಜ್ಯಾಧ್ಯಕ್ಷ ಷಡಕ್ಷರಿ ಅನುಮತಿ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷ, ಖಚಾಂಚಿ ಸ್ಥಾನಕ್ಕೆ ಪ್ರಭಾರ ತಂದು ಕೂರಿಸಲಾಗಿದೆ. ಪರಿಣಾಮ ಕೇವಲ ಪ್ರಭಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಸದ್ಯ ಶಿಕ್ಷಣ ಇಲಾಖೆಯ ಶ್ರೀನಿವಾಸ ನಾಯಕ್ ಚಿತ್ರದುರ್ಗಕ್ಕೆ ಹೋಗಿರುವ ಕಾರಣ ಅವರ ಸ್ಥಾನ ರದ್ದಾಗಿದೆ. ಬಸವರಾಜ್, ತಿಪ್ಪೇಸ್ವಾಮಿ, ಉಮೇಶ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ.
ಇತಿಹಾಸದಲ್ಲೇ ಮೊದಲು ರಾಜ್ಯಾಧ್ಯಕ್ಷ ವರ್ಗಾವಣೆ
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿದ್ದಂತ ಸಿ.ಎಸ್ ಷಡಕ್ಷರಿ ಅವರನ್ನು ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಈಗ ಬೈಲಾ ಪ್ರಕಾರ
ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವವನ್ನು ಅಮಾನತಿನಲ್ಲಿ ಇಡೋದಕ್ಕೆ ಸೂಚಿಸಲಾಗಿದೆ. ಇದು ದಾವಣಗೆರೆಯಲ್ಲಿ ಸಂಚಲನ ಮೂಡಿಸಿದ್ದು, ವಿರೋಧಿಗಳು ಎಚ್ಚೆತ್ತುಕೊಂಡಿದ್ದಾರೆ.
ಎಲ್ಲಿಂದ ಎಲ್ಲಿಗೆ ವರ್ಗಾವಣೆ
ಈ ಹಿಂದೆ ರಾಜ್ಯಾಧ್ಯಕ್ಷ ಷಡಕ್ಷರಿ ಲೆಕ್ಕಾಧೀಕ್ಷಕರು. ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ, ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಕಾಂಗ್ರೆಸ್ ಬಂದ ಮೇಲೆ ಉಪ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಕೋಲಾರ ಇಲ್ಲಿಗೆ ಖಾಲಿ ಇರುವ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ.
ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ-ಉಪವಿಧಿ ಅನುಸಾರ “ಸದಸ್ಯತ್ವ ಮುಂದುವರಿಕೆಯನ್ನು ವರ್ಗಾವಣೆಗೊಂಡ ಕಛೇರಿ ಕರ್ತವ್ಯಕ್ಕೆ ಹಾಜರಾಗುವವರೆಗೆ ಅಮಾನತ್ತಿನಲ್ಲಿಟ್ಟು ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯ ಪರಿಷತ್ ಸದಸ್ಯ ಬಿ. ಗಂಗಾಧರ ವಿನಂತಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಉಲ್ಲೇಖದ ಅರ್ಜಿಯನ್ನು ಪರಿಶೀಲಿಸಲಾಗಿ, ಉಲ್ಲೇಖಿತ ಪತ್ರದಲ್ಲಿನ ಸಿ.ಎಸ್. ಷಡಕ್ಷರಿ ಇವರ ಸದಸ್ಯತ್ವದ ಅಮಾನತ್ತಿನಲ್ಲಿಡುವ ಬಗ್ಗೆ ಬೈಲಾ ರೀತ್ಯಾ ಹಾಗೂ ದತ್ತವಾದ ಅಧಿಕಾರದನ್ವಯ ಪರಿಶೀಲಿಸಿ ನಿಯಮಾನುಸಾರ ತುರ್ತಾಗಿ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಈ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.ಈ ಮೂಲಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿಗೆ ಬಿಗ್ ಶಾಕ್ ನೀಡಲಾಗಿದೆ.
….

