ದಾವಣಗೆರೆ: ಚೆನ್ನೈ ನ ತಮಿಳುನಾಡು ಫಿಜಿಕಲ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಯೂನಿವರ್ಸಿಟಿ ವತಿಯಿಂದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ರೋಲ್‌ಬಾಲ್ ಟೂರ್ನಮೆಂಟ್‌ನಲ್ಲಿ ಹಲವಾರು ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ದಾವಣಗೆರೆ ನಗರದ ಪೃಥ್ವಿಕಾಂತ್ ಕೊಟಗಿ ಇವರು ಕರ್ನಾಟಕದಿಂದ ಒಬ್ಬರೇ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯನ್ನು ತಮಿಳುನಾಡಿನ ಯೂನಿವರ್ಸಿಟಿಯು ಪ್ರಶಂಸಿಸಿದ್ದು ಇವರನ್ನು ಬೆಸ್ಟ್ ರೆಫರಿ ಎಂಬುದಾಗಿ ಘೋಷಿಸಿ ಸನ್ಮಾನಿಸಿದೆ.