ದಾವಣಗೆರೆ: ಮಳೆಗಾಳಿಗೆ ದಾವಣಗೆರೆ ಸಮೀಪದ ದೊಡ್ಡಬಾತಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಫಸಲಿಗೆ ಬಂದಿದ್ದ ಭತ್ತ ಕಟಾವಿಗೆ ಮುನ್ನವೇ ನೀರುಪಾಲಾಗಿದೆ. ಕಳೆದ ಸಂಜೆ ಬೀಸಿದ ಗಾಳಿಮಳೆಗೆ ಭತ್ತದ ಬೆಳೆಗೆ ಹಾನಿಯಾಗಿದೆ.ಬರದ ನಡುವೆಯೂ ಕೊಳವೆಬಾವಿಯ ಮೂಲಕ ಭತ್ತ ಬೆಳೆದಿದ್ದ ರೈತರಿಗೆ ಮಳೆಯಾಗಿದ್ದು ಒಂದುಕಡೆ ಸಂತಸ ತಂದರೆ ಮತ್ತೊಂದೆಡೆ ಬೆಳೆದ ಭತ್ತ ನೀರುಪಾಗಿದೆ.
ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ವೇಳೆ ದೊಡ್ಡಬಾತಿ ಗ್ರಾಮದ ರೈತ ಉಮೇಶ್ ಮಾತನಾಡಿ ಸಾಲಮಾಡಿ ನನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದೆ ಆದರೆ ಇದೀಗ ಬೆಳೆಯೆಲ್ಲಾ ನೆಲಕಚ್ಚಿದೆ. ಐವತ್ತು ಸಾವಿರ ಲಾಭ ತೆಗೆಯುವ ಕನಸು ಕಂಡಿದ್ದೆ.ಮಳೆಯಿಲ್ಲದೇ ಬರ ಆವರಿಸಿದ್ದರು ಕೊಳವೆಬಾವಿ ಮೂಲಕ ನೀರು ಹರಿಸಿ ಭತ್ತ ನಾಟಿ ಮಾಡಿದ್ದೆ ಹಗಲು ರಾತ್ರಿ ಕರೆಂಟ್ ಗೆ ನೀರು ಹಾಯಿಸಿದ್ದೇಲ್ಲಾ ನೀರಿನಲ್ಲಿ ಹೋಮಮಾಡಿದಂತಾಗಿದೆ. ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿನೀಡಿ ನಮಗಾದ ನಷ್ಟ. ಭರಿಸಿಕೊಡಬೇಕು ಎಂದು ಅಳಲು ತೊಡಿಕೊಂಡರು.ದೊಡ್ಡಬಾತಿ ಗ್ರಾಮದ ಹಲವೆಡೆ ಬೆಳೆದ ಭತ್ತ ನೀರುಪಾಲಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.