
ನಂದೀಶ್ ಭದ್ರಾವತಿ ಹೊಸದುರ್ಗ
ಪ್ರೀತಿ ಮಾಡಬಾರದು, ಪ್ರೀತಿ ಮಾಡಿದರೆ ಮೋಸ ಮಾಡಬಾರದು ಎಂಬ ಹಾಡು ನಿಮ್ಮ ಕಿವಿಯಲ್ಲಿ ಆಗಾಗ ಗುಯ್ಯುಗುಟ್ಟುತ್ತಿರುತ್ತದೆ..ಎಷ್ಟೋ ಪ್ರೇಮಿಗಳು ಪ್ರೀತಿಗಾಗಿ ತಮ್ಮ ಸರ್ವಸವನ್ನೇ ತ್ಯಾಗ ಮಾಡಿರುತ್ತಾರೆ..ಇಂತಹದ್ದರಲ್ಲಿ ಪ್ರಿಯತಮೆಯೇ ತನ್ನ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲೂಕಿನ ಪುಟ್ಟ ಗ್ರಾಮದಲ್ಲಿ ನಡೆದಿದೆ…ಈ ನಡುವೆ ಹೊಸದುರ್ಗದ ಪೊಲೀಸರ ಚಾಣಾಕ್ಷತನ ಕಾರಣ ಆರೋಪಿಗಳು ಕಾನೂನು ಬಲೆಗೆ ಬಿದ್ದಿದ್ದಾರೆ..ಹಾಗಾದ್ರೆ ಆ ಸ್ಟೋರಿ ಕಥೆ ಏನು? ಕ್ಲೈಮ್ಯಾಕ್ಸ್ ಏನಾಯಿತು?…ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೂ ಹೇಗೆ ಈ ಸ್ಟೋರಿ ನೋಡಿ..
ಆಕೆ ಸುಂದರ ಯುವತಿ, ಇನ್ನೂ ಮದುವೆಯಾಗಿರಲಿಲ್ಲ..ಹೀಗಿರುವಾಗ ಈಕೆಯನ್ನು ನೋಡಿದವ ಆ ಯುವತಿಗೆ ಮನಸ್ಸು ಕೊಟ್ಟ. ಆಕೆಯೂ ಸಹ ಆತನಿಗೆ ಮನಸ್ಸು ಕೊಟ್ಟಳು..ಇಬ್ಬರ ಪ್ರೀತಿ ಕಾಣದಂತೆ ಬಹಳ ದಿವಸ ನಡೆಯಿತು. ಈ ನಡುವೆ ಪ್ರಿಯಕರನಿಗೆ ಮದುವೆ ಆಯಿತು. ಅಷ್ಟೋತ್ತಿಗೆ ಪ್ರಿಯಕರನಿಂದ ದೂರ ಹೋದ ಪ್ರಿಯೆಗೆ ಪ್ರಿಯಕರ ತೊಂದರೆಕೊಡುತ್ತಿದ್ದ..ಇದಕ್ಕೆ ರೋಸಿ ಹೋದ ಆಕೆ ಹಾಗೂ ಅವರ ಕುಟುಂಬ ಸ್ಕೇಚ್ ಹಾಕಿ ಕೊಲೆ ಮಾಡಿತು…ಇದು ಈ ಕಥೆಯ ಸಾರಾಂಶ.

ತಾಲೂಕಿನ ಸಣ್ಣಕಿಟ್ಟದಹಳ್ಳಿ ಈ ಕಥೆ ನಡೆಯುವ ಊರು. ಕೋಮಲ ಈ ಕಥೆಯ ನಾಯಕಿ..ಚಿಕ್ಕಣ್ಣ ನಾಯಕ..ದೊಡ್ಡಪ್ಪ ಮೂಡಲಗಿರಿಯಪ್ಪ, ಸಹೋದರ ಗಿರೀಶ ಕಥೆಗೆ ಕ್ಲೇಮ್ಯಾಕ್ಸ್ ನೀಡಿದವರು.
ಕೋಮಲ ಹಾಗೂ ಚಿಕ್ಕಣ್ಣ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರ ತೋಟವು ಅಕ್ಕ-ಪಕ್ಕ ಇದ್ದಊರಿಗೆ ಈ ನಡುವೆ ಪ್ರಿಯಕರ ಚಿಕ್ಕಣ್ಣ ಮದುವೆಯಾಗಿ ಹೆಂಡತಿಯನ್ನು ಊರಿಗೆ ಕರೆತಂದಿದ್ದ. ಇದು ಪ್ರಿಯೆ ಕೋಮಲಗೆ ಇಷ್ಟವಿರಲಿಲ್ಲ..ಅದಕ್ಕಾಗಿ ಕೋಮಲ ಇಷ್ಟು ದಿನ ನಾವು ಪ್ರೀತಿ ಮಾಡಿದ್ದೀವಿ..ಈಗ ನೀನು ಬೇರೆಯೊಬ್ಬರನ್ನು ಮದುವೆಯಾಗಿದ್ದೀಯಾ, ಸಾಕು ನನ್ನನ್ನು ಮರೆತುಬಿಡು ಅಂತ ಚಿಕ್ಕಣ್ಣಗೆ ಹೇಳಿದ್ದಾಳೆ. ಆದರೆ ಚಿಕ್ಕಣ್ಣ ಹೆಂಡತಿ ಮನೆಗೆ ಇದ್ದರೂ, ಕೋಮಲಗೆ ಪದೇ, ಪದೇ ಪೋನ್ ಮಾಡುವುದು, ಮನೆ ಬಳಿ ಹೋಗುತ್ತಿದ್ದ. ನಮ್ಮ ಮನೆ ಬಳಿ ಬರಬೇಡ. ಮರ್ಯಾದೆ ಹೋಗುತ್ತದೆ ಎಂದು ಕೋಮಲ ಹೇಳಿದ್ದರೂ, ಚಿಕ್ಕಣ್ಣ ಪದೇ ಪದೇ ಪ್ರಿಯೆ ಮನೆಗೆ ಹೋಗುತ್ತಿದ್ದ. ಇದರಿಂದ ಬೇಸತ್ತ ಪ್ರಿಯೆ ಕೋಮಲ ಹಾಗೂ ಕುಟುಂಬ ಚಿಕ್ಕಣ್ಣನನ್ನು ಮರ್ಡರ್ ಮಾಡೋದಕ್ಕೆ ಸ್ಕೇಚ್ ಹಾಕಿ ಕೊಲೆ ಮಾಡಿದರು.
ಮರ್ಡರ್ ಮಾಡಿದ್ದ ಸ್ಕೇಚ್ ಹೇಗಿತ್ತು ಗೊತ್ತಾ?
ಚಿಕ್ಕಣ್ಣ ಪದೇ ಪದೇ ತೊಂದರೆ ಕೊಡುತ್ತಿದ್ದ, ಆ ದಿನ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಕಾರಣ ಪ್ರಿಯೆ ಕೋಮಲ ಇಲ್ಲಿ ಗಲಾಟೆ ಮಾಡಬೇಡ. ಮರ್ಯಾದೆ ಹೋಗುತ್ತದೆ. ತೋಟದ ಬಳಿ ಬಾ ಮಾತನಾಡೋಣ ಎಂದು ಕೋಮಲ ಚಿಕ್ಕಣ್ಣನನ್ನು ತನ್ನ ತೋಟಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ದೊಡ್ಡಪ್ಪ ಮೂಡಲಗಿರಿಯಪ್ಪ, ಸಹೋದರ ಗಿರೀಶ್ ಬಂದು ಚಿಕ್ಕಣ್ಣ ನನ್ನು ಇಲ್ಲವಾಗಿಸಿದ್ದಾರೆ. ಈ ಮೂವರು ಆರೋಪಿಗಳು ಸೇರಿ ಚಿಕ್ಕಣ್ಣನ ತಲೆಗೆ ಮೊದಲು ಕಲ್ಲಿನಿಂದ ಹೊಡೆದಿದ್ದಾರೆ. ನಂತರ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ
ಪೊಲೀಸರಿಗೆ ಶರಣಾಗಿದ್ದಾದರೂ ಹೇಗೆ?
ಮೇ9 ರಂದು ಸಣ್ಣಕಿಟ್ಟದಹಳ್ಳಿ ಗ್ರಾಮದ ಹೊರವಲಯದ ತೋಟದ ಸಮೀಪದಲ್ಲಿ ಚಿಕ್ಕಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಕುತ್ತಿಗೆಗೆ ಟವಲ್ ಸುತ್ತಿ ಮಲಗಿದ ರೀತಿಯಲ್ಲಿ ಚಿಕ್ಕಣ್ಣನ ಶವ ಪತ್ತೆಯಾಗಿದ್ದರಿಂದ ಸ್ಥಳ ಪರಿಶೀಲನೆ ನಡೆಸಿದ್ದ ಪೋಲೀಸರಿಗೆ ಮೊದಲು ಇದು ಸಹಜ ಸಾವು ಎಂದು ಭಾವಿಸಿದ್ದರು. ಆದರೆ ದೇಹದಲ್ಲಿದ್ದ ಕೆಲವು ಗುರುತುಗಳು ಇದು ಸಹಜ ಸಾವಲ್ಲ ಕೊಲೆ ಎಂಬ ಅನುಮಾನವನ್ನು ಹುಟ್ಟುಹಾಕಿದ್ದವು. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅವರ ಪೋನ್ ಕರೆಗಳ ಆಧಾರದ ಮೇಲೆ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಪೊಲೀಸರು ಒಳಪಡಿಸಿದ್ದರು. ಮೃತ ವ್ಯಕ್ತಿ ಚಿಕ್ಕಣ್ಣ ಹಾಗೂ ಬಂಧಿತೆ ಕೊಮಲ ನಡುವೆ ಹಲವು ಭಾರಿ ಪೋನ್ ಮೂಲಕ ಸಂಭಾಷಣೆ ಆಗಿರುವುದು ತನಿಖೆ ವೇಳೆ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಆರೋಪಿತರು ಒಪ್ಪಿಕೊಂಡಿದ್ದಾರೆ
ಯಾರು ಕೊಲೆ ಆರೋಪಿಗಳು
ಸಣ್ಣಕಿಟ್ಟದಹಳ್ಳಿ ಗ್ರಾಮದ ಕೋಮಲ, ಗಿರೀಶ, ಮೂಡಲಗಿರಿಯಪ್ಪ ಬಂಧಿತರು. ಈ ಮೂವರನ್ನು ಹೊಸದುರ್ಗ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಾರೆ ಕೋಮಲ ತನ್ನ ಕೈಯಿಂದಲೇ ಅಪ್ಪಿಕೊಂಡ ಪ್ರಿಯಕರನನ್ನು ಪರಲೋಕಕ್ಕೆ ಕಳಿಸಿ ಈಗ ಕಂಬಿ ಎಣಿಸುತ್ತಿದ್ದಾಳೆ.
….
ಕೊಲೆ ಆರೋಪಿಗಳ ಬಂಧನ ಎಸ್ಪಿ ಶ್ಲಾಘನೆ
ಕೊಲೆ ಆರೋಪಿಗಳನ್ನು ಬಂಧಿಸಿದ ಪಿಐಗಳಾದ ಕೆ.ಟಿ.ರಮೇಶ್, ಮಧು, ಪಿಎಸ್‌ಐ ಭೀಮನಗೌಡ, ಮಹೇಶ್ ಕುಮಾರ್, ಶ್ರೀಶೈಲ ನೇತೃತ್ವದ ತಂಡಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅಭಿನಂದನೆ ಸಲ್ಲಿಸಿದ್ದಾರೆ.